ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯಪುರದಲ್ಲಿ ಎರಡು ದಿನಗಳಿಂದ ಬಿಡದೇ ಜಿನುಗುತ್ತಿರುವ ಮಳೆ

Last Updated 16 ಜುಲೈ 2020, 12:05 IST
ಅಕ್ಷರ ಗಾತ್ರ

ವಿಜಯಪುರ: ಎರಡು ದಿನಗಳಿಂದ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಮಳೆ ಎಡಬಿಡದೆ ಜಿನುಗುತ್ತಿದೆ.

ದಟ್ಟವಾಗಿ ಮೋಡ ಕವಿದ ವಾತಾವರಣ ಇದ್ದು, ಎರಡು ದಿನಗಳಿಂದ ಸೂರ್ಯನ ದರ್ಶನವಿಲ್ಲದೆ, ಮಲೆನಾಡಿನ ವಾತಾವರಣ ನಿರ್ಮಾಣವಾಗಿದೆ. ಶೀತ ಗಾಳಿ ಬೀಸುತ್ತಿದೆ.

ಉತ್ತಮ ಮಳೆಯಾಗಿರುವುದರಿಂದ ಈಗಾಗಲೇ ಬಿತ್ತನೆಯಾಗಿರುವ ಬೆಳೆಗೆ ಮತ್ತು ಕೃಷಿ ಚಟುವಟಿಕೆಗೆ ಅನುಕೂಲವಾಗಿದೆ. ದಿನವಿಡೀ ಮಳೆಯಾದ ಪರಿಣಾಮ ವಿಜಯಪುರ ನಗರದಲ್ಲಿ ಲಾಕ್ ಡೌನ್ ವಾತಾವರಣ ನಿರ್ಮಾಣವಾಗಿದ್ದು, ಜನ, ವಾಹನ ಸಂಚಾರ ವಿರಳವಾಗಿತ್ತು.

ಬಸವನ ಬಾಗೇವಾಡಿ 50.5, ಮನಗೂಳಿ 19.1, ಆಲಮಟ್ಟಿ 21.2, ಹೂ.ಹಿಪ್ಪರಗಿ 70.8, ಅರೇಶಂಕರ 50.2, ಮಟ್ಟಿಹಾಳ 83.4, ವಿಜಯಪುರ 34.4, ನಾಗಠಾಣ 6.2, ಭೂತನಾಳ 21.6, ಹಿಟ್ನಳ್ಳಿ 36.2, ತಿಕೋಟಾ 28.8, ಮಮದಾಪೂರ 43.4, ಕುಮಟಗಿ 12.2, ಕನ್ನೂರ 22.5, ಬಬಲೇಶ್ವರ 22.6, ಇಂಡಿ 51, ನಾದ ಬಿ.ಕೆ. 40.6, ಅಗರಖೇಡ 80.1, ಹೊರ್ತಿ 37.4, ಹಲಸಂಗಿ 37, ಚಡಚಣ 26, ಝಳಕಿ 63.2, ಮುದ್ದೇಬಿಹಾಳ 48, ನಾಲತವಾಡ 34.8, ತಾಳಿಕೋಟಿ 43.4, ಢವಳಗಿ 62, ಸಿಂದಗಿ 66.2, ಆಲಮೇಲ 56.3, ಸಾಸಾಬಾಳ 10.3, ರಾಮನಹಳ್ಳಿ 76.2, ಕಡ್ಲೇವಾಡ 32.2, ದೇವರ ಹಿಪ್ಪರಗಿ 23.6, ಕೊಂಡಗೂಳಿ 25 ಮಳೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT