ಶನಿವಾರ, ಜುಲೈ 31, 2021
25 °C

ಕೃಷ್ಣಾ ನದಿಯಲ್ಲಿ ತಾಯಿ, ಮಗಳ ಶವ ಪತ್ತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೃತ ಶರೀರ–ಪ್ರಾತಿನಿಧಿಕ ಚಿತ್ರ

ಕೊಲ್ಹಾರ: ತಾಲ್ಲೂಕಿನ ಬಳೂತಿ ಜಾಕ್‌ವೆಲ್ ಬಳಿಯ ಕೃಷ್ಣಾ ನದಿ ದಡದಲ್ಲಿ ಭಾನುವಾರ ವಿಜಯಪುರ ಮೂಲದ ತಾಯಿ, ಮಗಳ ಶವ ಪತ್ತೆಯಾಗಿವೆ.

ಶಕುಂತಲಾ ಸಿದ್ದಣ್ಣ ಖೇಡ (50) ಹಾಗೂ ಗಂಗಾ ಉದಯ್ ಹುಣಶ್ಯಾಳ (22) ಮೃತ ತಾಯಿ, ಮಗಳು.

ತಾಯಿ ಶಕುಂತಲಾ ಅವರ ಪತಿ ಕಳೆದ ಒಂದೂವರೆ ವರ್ಷಗಳ ಹಿಂದೆ ತೀರಿಹೋಗಿದ್ದು, ತೀವ್ರವಾಗಿ ಮನನೊಂದಿದ್ದರು. ಮಗಳು ಗಂಗಾ ಮಾನಸಿಕ ಅಸ್ವಸ್ಥಳಾಗಿದ್ದಳು ಎನ್ನಲಾಗಿದೆ.

ಇಬ್ಬರು ಶನಿವಾರ ಕೊರ್ತಿ-ಕೊಲ್ಹಾರ ಸೇತುವೆ ಬಳಿಯ ಕೃಷ್ಣಾ ನದಿಗೆ ಹಾರಿ, ಆತ್ಮಹತ್ಯೆ ಮಾಡಿಕೊಂಡಿದ್ದರು. ಭಾನುವಾರ ಬಳೂತಿ ಜಾಕ್‌ವೆಲ್‌ ಬಳಿಯ ನದಿ ದಂಡೆಯಲ್ಲಿ ಶವಗಳು ದೊರೆತಿವೆ. ಈ ಕುರಿತು ಕೊಲ್ಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು