ಮುದ್ದೇಬಿಹಾಳ: ‘ಆಸ್ತಿ ನೋಡಿಕೊಂಡು ನಾವು ಈ ಮಠಕ್ಕೆ ಬಂದಿಲ್ಲ. ಭಕ್ತರ ಭಕ್ತಿಯೇ ಶ್ರೀಮಠಕ್ಕೆ ಆಸ್ತಿ. ಹುನಗುಂದದಲ್ಲಿರುವ ಗಚ್ಚಿನಮಠಕ್ಕೆ ಹಿಂದೂ, ಮುಸ್ಲಿಂ, ಕ್ರೈಸ್ತ ಬಾಂಧವರನ್ನು ಕರೆಯುತ್ತೇವೆ. ಆ ಸಂಪ್ರದಾಯ ಮುದ್ದೇಬಿಹಾಳದ ಮಠದಲ್ಲೂ ಮುಂದುವರಿಸುತ್ತೇವೆ. ಮಠಕ್ಕೆ ಬರುವವರು ರಾಜಕಾರಣ ಹೊರಗಿಟ್ಟು ಸಾಮಾನ್ಯ ಭಕ್ತರಂತೆ ಬರಬೇಕು’ ಎಂದು ಮುದ್ದೇಬಿಹಾಳ ಹೊಸಮಠದ ನೂತನ ಸ್ವಾಮೀಜಿ ಅಮರೇಶ್ವರ ದೇವರು ಹೇಳಿದರು.

ಮುದ್ದೇಬಿಹಾಳ ಭಕ್ತರ ಆಹ್ವಾನದ ಮೇರೆಗೆ ಪಟ್ಟಣದ ಕಿಲ್ಲಾದಲ್ಲಿರುವ ಹೊಸಮಠಕ್ಕೆ ಭಾನುವಾರ ಆಗಮಿಸಿದ್ದ ಅವರಿಗೆ ಮುದ್ದೇಬಿಹಾಳ ವೀರಶೈವ ಲಿಂಗಾಯತ ಸಮಾಜದಿಂದ ನೀಡಿದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

‘ಸಮಾಜದಲ್ಲಿ ಸಂಸ್ಕಾರ ಕೊಡಬೇಕು ಎಂದರೆ ಗುರು– ಶಿಷ್ಯರ ಪರಂಪರೆ ಬಹುಮುಖ್ಯವಾದದ್ದು. ಶಿಷ್ಯ ನೀರು, ಗುರುಗಳು ಬೆಂಕಿ ಆಗಿರಬೇಕು. ಇಲ್ಲವೇ ಶಿಷ್ಯಂದಿರು ಬೆಂಕಿ, ಗುರುಗಳು ನೀರಿನಂತಿರಬೇಕು. ಭಕ್ತರು ಇದ್ದಂತೆ ನಾನು ಇರುತ್ತೇನೆ. ಈ ಮಠವನ್ನು ಎಲ್ಲರೂ ತಿರುಗಿ ನೋಡುವ ಮಠವನ್ನಾಗಿ ಮಾಡುತ್ತೇವೆ. ಜೀರ್ಣೋದ್ಧಾರಗೊಳಿಸಬೇಕಾದ ಜವಾಬ್ದಾರಿ ಎಲ್ಲರ ಮೇಲಿದೆ’ ಎಂದರು.

ಸಾಹಿತಿ ರುದ್ರೇಶ ಕಿತ್ತೂರ ಮಾತನಾಡಿ, ‘ಮುದ್ದೇಬಿಹಾಳದಲ್ಲಿ ಹಿಂದೆ ಏಳು ಮಠಗಳಿದ್ದವು. ಆದರೆ ಒಬ್ಬರೂ ಸ್ವಾಮೀಜಿಗಳಿರಲಿಲ್ಲ. ಧರ್ಮ ಮಾರ್ಗದರ್ಶಕರ ಅಗತ್ಯತೆ ಇದ್ದು, ಆಧ್ಯಾತ್ಮಿಕ ಚಿಂತನೆ ಕೊರತೆಯನ್ನು ತುಂಬುವ ಸ್ವಾಮೀಜಿಯವರನ್ನು ನಾವು ಬರಮಾಡಿಕೊಂಡಿದ್ದೇವೆ. ಮುದ್ದೇಬಿಹಾಳ ಸೌಹಾರ್ದತೆಗೆ ಹೆಸರಾಗಿದೆ. ಅಳಿವಿನಂಚಿನಲ್ಲಿದ್ದ ಮಠವನ್ನು ಜೀರ್ಣೋದ್ಧಾರಗೊಳಿಸುವ ಸವಾಲು ಸ್ವೀಕರಿಸಿರುವ ಅಮರೇಶ್ವರ ಶ್ರೀಗಳ ಕರ್ತೃತ್ವ ಶಕ್ತಿ ಬಗ್ಗೆ ಅಭಿಮಾನ, ಗೌರವ ಮುದ್ದೇಬಿಹಾಳದ ಭಕ್ತರು ಹೊಂದಿದ್ದೇವೆ’ ಎಂದರು.

ಯಾವುದೇ ವ್ಯಕ್ತಿಗಳು ಬಂದರೂ ಮಠಕ್ಕೆ ಅವರು ಭಕ್ತರಾಗಿ ಬಂದು ಭಕ್ತರಾಗಿ ಹೋಗಬೇಕು. ಇದು ಯಾವುದೇ ಪಕ್ಷಕ್ಕೆ ಸೀಮಿತವಾದ ಮಠವಲ್ಲ
– ಅಮರೇಶ್ವರ ದೇವರು, ಹೊಸಮಠ ಮುದ್ದೇಬಿಹಾಳ

ಎಸ್.ಎಸ್.ಹೂಗಾರ, ಅರುಣ ದುದ್ದಗಿ, ಪ್ರಭು ಮಾಲಗತ್ತಿಮಠ, ವೀರೇಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಪ್ರಭುರಾಜ ಕಲ್ಬುರ್ಗಿ, ಮಹಾಂತೇಶ ಮಠ, ಮುಖಂಡರಾದ ವೆಂಕನಗೌಡ ಪಾಟೀಲ, ಶಿವಕುಮಾರ ಬಿರಾದಾರ, ಶಂಕರ ಹೆಬ್ಬಾಳ, ಪ್ರತಿಭಾ ಅಂಗಡಗೇರಿ, ದಾನಯ್ಯಸ್ವಾಮಿ ಹಿರೇಮಠ, ಬಸವರಾಜ ನಂದಿಕೇಶ್ವರಮಠ ಹಾಗೂ ಹುನಗುಂದ ಹಾಗೂ ಮುದ್ದೇಬಿಹಾಳದ ನೂರಾರು ಭಕ್ತರು ಇದ್ದರು.

ಹೊಸಮಠಕ್ಕೆ ಮೊದಲ ಬಾರಿಗೆ ಆಗಮಿಸಿದ ಅಮರೇಶ್ವರ ದೇವರನ್ನು ಪುಷ್ಪಾರ್ಚನೆ ಮೂಲಕ ಭಕ್ತರು ಸ್ವಾಗತಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.