ಮುದ್ದೇಬಿಹಾಳ: ಪ್ರತಿಷ್ಠಿತರ ಬಡಾವಣೆಯಲ್ಲಿರುವ ಹುಡ್ಕೊ ಉದ್ಯಾನ ಅಭಿವೃದ್ಧಿಗೆ ಪುರಸಭೆಯ ಆದ್ಯತೆ ನೀಡಿದ್ದರೂ, ಅಲ್ಲಿ ಹಲವು ಅವ್ಯವಸ್ಥೆಗಳ ಸುಧಾರಣೆ ಆಗಿಲ್ಲ.

ಶಾಸಕ ಸಿ.ಎಸ್. ನಾಡಗೌಡ ಅವರ ನಿವಾಸದ ಮುಂದೆಯೇ ಇರುವ ಈ ಉದ್ಯಾನಕ್ಕೆ ನಿತ್ಯವೂ ನೂರಾರು ಮಕ್ಕಳು ಸಂಜೆ ವೇಳೆ ಆಟವಾಡಲು ಬರುತ್ತಾರೆ. ಬೆಳಗಿನ ಸಮಯದಲ್ಲಿ ಹಿರಿಯರು, ಮಹಿಳೆಯರು, ಯುವಕರು ವಾಯುವಿಹಾರಕ್ಕೆ ಬರುತ್ತಾರೆ. ಆದರೆ ವಾಕಿಂಗ್ ಟ್ರ್ಯಾಕ್, ಗಿಡಗಳ ನಿರ್ವಹಣೆ ಮಾಡುವುದನ್ನು ಹೊರತುಪಡಿಸಿ ಬೇರೆ ಯಾವ ಕೆಲಸಗಳೂ ಇಲ್ಲಿ ಆಗುತ್ತಿಲ್ಲ ಎಂದು ನಾಗರಿಕರು ದೂರಿದ್ದಾರೆ.

ವ್ಯಾಯಾಮಕ್ಕೆಂದು ಹಾಕಿದ್ದ ಸಲಕರಣೆಗಳಲ್ಲಿ ನಾಲ್ಕು ಸಲಕರಣೆಗಳು ಮುರಿದಿವೆ. ಮಕ್ಕಳ ಆಟದ ಸಾಧನಗಳಲ್ಲಿ ಜಾರುಬಂಡಿಗಳು ಹೊಂಡ ಬಿದ್ದು ಆಡಲು ಬಾರದಂತಾಗಿವೆ. ಹುಡ್ಕೋ ಉದ್ಯಾನಕ್ಕೆ ರಜಾ ದಿನದಂದು ಮಕ್ಕಳನ್ನು ಕರೆತರುವ ಪಾಲಕರು ಇಲ್ಲಿನ ಅವ್ಯವಸ್ಥೆ ಕಂಡು ಅಸಮಾಧಾನಗೊಂಡು ಆಡಳಿತಕ್ಕೆ ಹಿಡಿಶಾಪ ಹಾಕುತ್ತ ಮರಳುತ್ತಿದ್ದಾರೆ.

ಪಟ್ಟಣದಲ್ಲಿರುವ ಕೆಲವು ಉದ್ಯಾನಗಳನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಅನುದಾನ ನಿಗದಿಯಾಗಿತ್ತು. ಆದರೆ ಈವರೆಗೂ ಎಲ್ಲ ಉದ್ಯಾನಗಳೂ ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿಯಾಗದೇ ಅನಾಥವಾಗಿವೆ. ಪಟ್ಟಣದ ವಿದ್ಯಾನಗರ, ಮಾಜಿ ಶಾಸಕ ನಡಹಳ್ಳಿ ಅವರ ವಿಜಯಪುರ ರಸ್ತೆಯಲ್ಲಿರುವ ನಿವಾಸದ ಹಿಂದಿರುವ ಉದ್ಯಾನ, ಬಸವ ನಗರದ ಗಾರ್ಡನ್, ಇಂದಿರಾ ನಗರದಲ್ಲಿರುವ ಉದ್ಯಾನ, ಪಿಲೇಕೆಮ್ಮ ನಗರದಲ್ಲಿರುವ ಹೆಸ್ಕಾಂ ಹಿಂದಿರುವ ಉದ್ಯಾನಗಳು ಅಭಿವೃದ್ಧಿ ಆಗಿದ್ದರೂ ಇನ್ನೂ ಹಲವು ಸೌಲಭ್ಯಗಳನ್ನು ಒದಗಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

‘ಮಕ್ಕಳ ಉದ್ಯಾನದಲ್ಲಿ ಮುರಿದ ಜಾರುಬಂಡಿ, ತುಂಡಾದ ಜೋಕಾಲಿಗಳೇ ಕಾಣುತ್ತಿವೆ. ಈ ಎಲ್ಲ ಅವ್ಯವಸ್ಥೆಗಳು ಅಧಿಕಾರಿಗಳ ಗಮನಕ್ಕಿದ್ದರೂ ಅನುದಾನದ ಕೊರತೆಯಿಂದ ಆಟದ ಸಾಮಗ್ರಿಗಳನ್ನು ಅಳವಡಿಸುವುದಕ್ಕೆ ಆಗುತ್ತಿಲ್ಲ’ ಎಂದು  ಆಡಳಿತ ಪಕ್ಷದ ಸದಸ್ಯರಿಂದಲೇ ಕೇಳಿ ಬಂದಿವೆ.

ಪಟ್ಟಣದ ನಾಲ್ಕು ಉದ್ಯಾನಗಳಲ್ಲಿ ಹೊಸದಾಗಿ ಆಟದ ಸಾಮಗ್ರಿಗಳನ್ನು ಅಳವಡಿಸಲು ಶಾಸಕರು ಅನುದಾನ ಒದಗಿಸುವುದಾಗಿ ತಿಳಿಸಿದ್ದಾರೆ. ಸಣ್ಣಪುಟ್ಟ ದುರಸ್ತಿ ಇದ್ದರೆ ಪುರಸಭೆಯಿಂದ ಮಾಡಲಾಗುವುದು
ಮಲ್ಲಿಕಾರ್ಜುನ ಬಿರಾದಾರ ಪುರಸಭೆ ಮುಖ್ಯಾಧಿಕಾರಿ

‘ಅಧಿಕಾರಿಗಳಿಗೆ ಮನವಿ ಕೊಟ್ಟಿದ್ದರೂ ಕೆಲಸ ಆಗಿಲ್ಲ’

ಹುಡ್ಕೋದಲ್ಲಿ ಚರಂಡಿ ಸ್ವಚ್ಛತೆ ಹೈಮಾಸ್ಟ್ ದೀಪ ದುರಸ್ತಿ ಉದ್ಯಾನದಲ್ಲಿ ಹಾಳಾಗಿರುವ ಆಟದ ಸಾಮಗ್ರಿಯನ್ನು ದುರಸ್ತಿ ಮಾಡಿಸಿ ಅಥವಾ ಹೊಸದಾಗಿ ಅಳವಡಿಸಿ ಎಂದು ಆಗ್ರಹಿಸಿ ಅಧಿಕಾರಿಗಳಿಗೆ ಮನವಿ ಕೊಟ್ಟಿದ್ದರೂ ಈವರೆಗೂ ಯಾವುದೇ ಕೆಲಸ ಆಗಿಲ್ಲ. ಶಾಸಕರ ಮನೆ ಎದುರಿನ ಉದ್ಯಾನದ ಸ್ಥಿತಿಯೇ ಹೀಗಾದರೆ ಉಳಿದ ಉದ್ಯಾನಗಳ ಗತಿ ಏನು? ಪುನೀತ ಹಿಪ್ಪರಗಿ ಹುಡ್ಕೋ ನಿವಾಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.