ಲಾಳಸಂಗಿ ಕೊಲೆ ಪ್ರಕರಣ: ಆರೋಪಿಗಳ ಬಂಧನ
ವಿಜಯಪುರ: ಇಂಡಿ ತಾಲ್ಲೂಕಿನ ಲಾಳಸಂಗಿಯಲ್ಲಿ ಮಾರ್ಚ್ 27ರಂದು ಉಳ್ಳಾಗಡ್ಡಿ ಕಣದ ಹತ್ತಿರ ಮಲಗಿದ್ದ ಸಿದ್ಧಾರೂಢ ಮರಾಠಿ(22) ಎಂಬಾತನ ಕೊಲೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಹೋದರ ಸೇರಿದಂತೆ ಅದೇ ಗ್ರಾಮ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲೆಯಾದ ವ್ಯಕ್ತಿಯ ಸಹೋದರ ಗಡ್ಡೆಪ್ಪ ಮರಾಠಿ(25) ಮತ್ತು ಜೆಟ್ಟೆಪ್ಪ ನಾಟಿಕಾರ (40) ಎಂಬುವವರನ್ನು ಇಂಡಿ ಗ್ರಾಮೀಣ ಠಾಣೆ ಪೊಲೀಸರು ಗುರುವಾರ ವಶಕ್ಕೆ ಪಡೆದಿದ್ದಾರೆ.
‘ತನ್ನ ಹೆಂಡತಿಯೊಂದಿಗೆ ಸಹೋದರ ಅಕ್ರಮ ಸಂಬಂಧ ಹೊಂದಿದ್ದ ಎಂಬ ಕಾರಣಕ್ಕೆ ಕೊಲೆ ಮಾಡಿರುವುದಾಗಿ’ ಆರೋಪಿ ಗಡ್ಡೆಪ್ಪ ಮರಾಠಿ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಇಂಡಿ ಸಿ.ಪಿ.ಐ ರಾಜಶೇಖರ ನೇತೃತ್ವದಲ್ಲಿ ಇಂಡಿ ಗ್ರಾಮೀಣ ಪೊಲೀಸ್ ಠಾಣೆಯ ಪಿ.ಎಸ್.ಐ ವಿನೋದ ದೊಡಮನಿ, ಇಂಡಿ ಶಹರ ಪೊಲೀಸ್ ಠಾಣೆಯ ಪಿ.ಎಸ್.ಐ ಮಾಳಪ್ಪ ಪೂಜಾರಿ, ಎ.ಎಸ್.ಐ ಡಿ.ಎನ್. ತಳವಾರ ಹಾಗೂ ಪೊಲೀಸ್ ಸಿಬ್ಬಂದಿ ವಿ.ಎಂ. ಪಾಟೀಲ, ವಿ.ಆರ್. ಕಲ್ಲೂರ, ಆರ್.ಪಿ. ಗಡೇದ. ಎಸ್.ಎಲ್. ತೆನ್ನಿಹಳ್ಳಿ. ಆರ್.ವಿ. ಭತಗುಣಕಿ. ಆರ್.ಎಂ. ಬಿರಾದಾರ ಅವರನ್ನು ಒಳಗೊಂಡ ತಂಡ ಆರೋಪಿಗಳನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಪಮ್ ಅಗರವಾಲ್ ತಿಳಿಸಿದ್ದಾರೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.