ನಾಲತವಾಡ: ಚಿಮ್ಮಲಗಿ ಏತನೀರಾವರಿ ಪೂರ್ವ ಕಾಲುವೆ ಅಡಿಯಲ್ಲಿಯಲ್ಲಿ ಬರುವ ನಾಲತವಾಡ ಸಮೀಪದ ಅಮರೇಶ್ವರ ದೇವಸ್ಥಾನದ ಹತ್ತಿರ ಬರುವ ಸೀಳುಗಾಲುವೆ (ಲ್ಯಾಟ್ರಲ್) 13-ಎ ಕಾಲುವೆ ಹಾಗು ನಾಲೆಯ ಮಣ್ಣು ಕುಸಿದಿದೆ. ಇದುವರೆಗೂ ಕೃಷ್ಣಾ ಭಾಗ್ಯ ಜಲ ನಿಗಮದ ಯಾವುದೇ ಅಧಿಕಾರಿಗಳು ಇತ್ತ ಸುಳಿದಿಲ್ಲ.

ರೈತರು ದೂರವಾಣಿ ಕರೆ ಮಾಡಿದರೂ ಸರಿಯಾಗಿ ಸ್ಪಂದಿಸದ ಕಾರಣ ಈ ಕಾಲುವೆಯ ಏರಿ ರಸ್ತೆ ಬಂದ್ ಆಗಿ ನೂರಾರು ಹೆಕ್ಟೇರ್ ಪ್ರದೇಶದ ಜಮೀನುಗಳಿಗೆ ತೆರಳುವ ರೈತರು ರಸ್ತೆಗಾಗಿ ಕಂಗಾಲಾಗಿದ್ದಾರೆ. ಕಾಲುವೆಯ ಏರಿ ಸಹಿತ ಕುಸಿದು ಒಂದು ತಿಂಗಳಾಯಿತು. ಕಾಲುವೆ ಹಾಗೂ ರಸ್ತೆಗೆ ಶಾಶ್ವತ ಪರಿಹಾರ ನೀಡಬೇಕೆಂದು ರೈತರು ಆಗ್ರಹಿಸಿದ್ದಾರೆ.

ಈ ರಸ್ತೆಯಲ್ಲಿ ಬರುವ ನೂರಾರು ಹೆಕ್ಟೇರ್ ಪ್ರದೇಶದ ಜಮೀನುಗಳಿಗೆ ತೆರಳುವ ರೈತರಾದ ಮಲ್ಲಿಕಾರ್ಜುನ ಸಜ್ಜನ,ಕಾಶೀಮ ಸಿಕ್ಕಲಗಾರ, ತುಕಾರಾಂ ಗೋಂಧಳೆ,ಮಕ್ತುಮಸಾ ಸಿಕ್ಕಲಗಾರ, ಹನುಮಂತ ಗೋಂಧಳೆ,ಶಂಕರರಾವ್ ದೇಶಮುಖ, ಸದಾಶಿವ ಗೋಂಧಳೆ,ಭಾವಿಕಟ್ಟಿ ,ಅಂಬಾಜಿ ಗೋಂಧಳೆ,ಹಾದಿಮನಿ, ಶಾಸ್ತ್ರಿ ಗೋಂಧಳಿ ಸೇರಿದಂತೆ ಹಲವು ರೈತರುಗಳ ನೂರಾರು ಹೆಕ್ಟೇರ್ ಜಮೀನುಗಳಿಗೆ ಹೋಗಬೇಕಾದ ಏಕೈಕ ರಸ್ತೆ ಇದೇ ಆಗಿದೆ. ಇದೀಗ ಮಾರ್ಗವಿಲ್ಲದೆ ರೈತರು ಪರದಾಡುವ ಪರಿಸ್ಥಿತಿ ಸೃಷ್ಟಿಯಾಗಿದೆ.
ಕಳಪೆ ಕಾಮಗಾರಿ:
ಹಲವು ದಶಕಗಳಿಂದ ಕುಂಟುತ್ತಾ ಸಾಗಿದ ಕಾಲುವೆಗೆ ಸಂಪೂರ್ಣ ನೀರು ಹರಿಯುವ ಪೂರ್ವದಲ್ಲಿಯೇ ಒಡೆದಿದೆ. ಕಾಮಗಾರಿ ಆರಂಭದಿಂದಲೂ ರೈತರಿಗೆ ಸೂಕ್ತ ಭೂ ಸ್ವಾಧೀನ ಪತ್ರ, ಪರಿಹಾರ ಸೇರಿದಂತೆ ಹಲವು ಅಡೆತಡೆಗಳ ನಡುವೆ ಕುಂಟುತ್ತ ಸಾಗಿದ ಕಾಮಗಾರಿ ಇನ್ನೂ ಪೂರ್ತಿ ಆಗಿಲ್ಲ. ಕಾಲುವೆ ತುಂಬಾ ಭರ್ತಿ ನೀರೂ ಹರಿದಿಲ್ಲ ಆದರೂ ಕಾಲುವೆ ಒಡೆಯುತ್ತದೆ ಎಂದರೆ ಕಾಮಗಾರಿ ಕಳಪೆ ಮಟ್ಟದ್ದಾಗಿದೆ ಗುತ್ತಿಗೆದಾರರನ್ನು ಶಾಶ್ವತವಾಗಿ ಕಪ್ಪುಪಟ್ಟಿಗೆ ಸೇರಿಸಿ ಎಂದು ರೈತರು ಆಗ್ರಹಿಸಿದ್ದಾರೆ.

ಪ್ರತಿವರ್ಷ ಇದೇ ಕಾಲುವೆಯು ವಿವಿಧ ಕಡೆ ಒಡೆಯುವುದು, ರಸ್ತೆ ಕುಸಿತ ಕಂಡಾಗ ತಾತ್ಕಾಲಿಕ ದುರಸ್ತಿ ಆಗುತ್ತದೆ. ಮತ್ತೆ ಮುಂದಿನ ಬಾರಿ ಅದೇ ಸ್ಥಳದಲ್ಲಿ ಕಾಲುವೆ ಕುಸಿಯುವುದು ಸಾಮಾನ್ಯವಾಗಿ ಬಿಟ್ಟಿದೆ. ಹೀಗಾಗಿ ಶಾಶ್ವತ ಪರಿಹಾರಕ್ಕೆ ಕಾಲುವೆ ಭಾಗದ ರೈತರು ಒತ್ತಾಯಿಸಿದ್ದಾರೆ.

ಕಾಮಗಾರಿ ಪೂರ್ಣ ಯಾವಾಗ?

ಸದ್ಯ ಮಳೆಗಾಲ ಆರಂಭವಾಗಿರುವ ಕಾರಣ ಅಪೂರ್ಣವಾದ ಕಾಲುವೆಗಳಿಗೆ ಹೆಚ್ಚಿನ ನೀರು ಹರಿಸಲಾಗಿಲ್ಲ. ಇದರಿಂದ ದೊಡ್ಡ ಅನಾಹುತ ತಪ್ಪಿದೆ. ಒಂದು ವೇಳೆ ಕ್ಯೂಸೆಕ್ ಗಟ್ಟಲೆ ನೀರು ಹರಿಯುವ ವೇಳೆ ಕಾಲುವೆ ಕುಸಿದಿದ್ದರೆ ಅಕ್ಕಪಕ್ಕದ ಜಮೀನುಗಳಿಗೆ ನೀರು ನುಗ್ಗಿ ದೊಡ್ಡ ಅನಾಹುತ ಸಂಭವಿಸುವ ಸಾಧ್ಯತೆ ಇತ್ತು. ಸುಮಾರು ಐದು ಸಾವಿರ ಎಕರೆ ಪ್ರದೇಶಕ್ಕೆ ನೀರು ಪೂರೈಸುವ ಕಾಲುವೆ ಇದಾಗಿದೆ. ‘ಈಗಾಗಲೇ ನಿರ್ಮಾಣವಾದ ಕಾಲುವೆಯಲ್ಲಿ ಬೆಳೆದ ಜಂಗಲ್ ಹಾಗೂ ಹೂಳು ತೆಗೆಯುವಲ್ಲಿ ಅಧಿಕಾರಿ ಹಾಗೂ ಗುತ್ತಿಗೆದಾರರಿಂದ ಸಂಪೂರ್ಣ ನಿರ್ಲಕ್ಷ್ಯದ ಆರೋಪ ಕೇಳಿ ಬಂದಿದೆ. ಚಿಮ್ಮಲಗಿ ಏತನೀರಾವರಿ ಪೂರ್ವ ಕಾಲುವೆ ಅಡಿಯಲ್ಲಿಯಲ್ಲಿ ಬರುವಂತಹ ಸೀಳುಗಾಲುವೆ ಲ್ಯಾಟ್ರಲ್ 13-ಎ ಕಾಲುವೆ ಕಾಮಗಾರಿ ಸದ್ಯ ಅಮರೇಶ್ವರ ದೇವಸ್ಥಾನದ ಹತ್ತಿರ ಕಾಲುವೆ ಪೂರ್ಣವಾಗ ಬೇಕು ಅಡ್ಡ ರಸ್ತೆ ಸೇತುವೆ ನಿರ್ಮಾಣ ನೆಪವೊಡ್ಡಲಾಗಿತ್ತು. ಸೇತುವೆ ನಿರ್ಮಾಣ ಆಗಿದೆ ಕಾಲುವೆ ಪೂರ್ಣಗೊಳಿಸಿ ನಾಲೆಯ ಕೊನೆಯ ತುದಿಯಲ್ಲಿ ಬರುವ ರೈತರ ಹೊಲಕ್ಕೆ ನೀರು ಹರಿಸುವಲ್ಲಿ ನಿರ್ಲಕ್ಷ್ಯ ಹಾಗೂ ನಿಧಾನವಾಗಿ ಕಾಲುವೆ ಕೆಲಸ ಮಾಡಲಾಗುತ್ತಿದೆ’ ಎನ್ನುವುದು ರೈತರ ಹಾಗೂ ರೈತ ಮುಖಂಡರ ಆಕ್ರೋಶಕ್ಕೆ ಕಾರಣವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.