ತಾಂಬಾ: ಮಹಾರಾಷ್ಟ್ರದ ಸೋಲಾಪೂರ ಸಮೀಪದ ತುಳಜಾಪುರ ಅಂಬಾ ಭವಾನಿ ದೇವಸ್ಥಾನದಲ್ಲಿ ನವರಾತ್ರಿ ಮಹೋತ್ಸವ ಜರುಗುತ್ತಿದ್ದು, ರಾಜ್ಯದಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ತೆರಳಿ ದೇವಿಯ ದರ್ಶನ ಪಡೆಯುತ್ತಿದ್ದಾರೆ.
ಶುಕ್ರವಾರ ನಡೆದ ಅಂಬಾ ಭವಾನಿ ದೇವಸ್ಥಾನದಲ್ಲಿ ಲಕ್ಷಕೂ ಅಧಿಕ ಭಕ್ತರು ಪಾಲ್ಗೊಂಡಿದ್ದರು. ಮಂದಿರದಲ್ಲಿ ಬೆಳಿಗ್ಗೆಯಿಂದ ಆರಂಭಗೊಂಡ ಪೂಜೆ ಮಧ್ಯಾಹ್ನದ ವರೆಗೂ ನಡೆಯಿತು. ಆ ನಂತರ ಪೂರ್ಣಾಹುತಿ, ಹೋಮ ಹವನ ನೆರವೇರಿಸಲಾಯಿತು.
ಅ.23ರಂದು ಆಯುಧ ಪೂಜೆ, ಧಾರ್ಮಿಕ ವಿಧಿ ವಿಧಾನಗಳು ಜರುಗಲಿವೆ. ರಾತ್ರಿ 8ಕ್ಕೆ ಅಹ್ಮದನಗರ ಜಿಲ್ಲೆಯಿಂದ ಪಲ್ಲಕ್ಕಿ ಆಗಮಿಸಲಿದ್ದು, ರಾತ್ರಿ 11ಕ್ಕೆ ಮೆರವಣಿಗೆ ಜರುವುದು. 24ರಂದು ದೇವಿಯ ಮೂರ್ತಿ ಪಲ್ಲಕ್ಕಿಯಲ್ಲಿಟ್ಟು ಮಂದಿರದ ಪ್ರದಕ್ಷಿಣೆ ಹಾಕಲಾಗುತ್ತದೆ. ಆ ನಂತರ ಐದು ದಿನಗಳ ಅಂಬಾ ಭವಾನಿ ನಿದ್ರೆಯಲ್ಲಿ ಇರುತ್ತಾಳೆ ಎಂದು ಅಂಬಾ ಭವಾನಿ ದೇವಸ್ಥಾನದ ಅರ್ಚಕ ಶಂಕರ್ ಕದಂಮ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.