ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರ್ಬಂಧದ ನಡುವೆಯೂ ಹೊಸ ವರ್ಷಾಚರಣೆ ಸಂಭ್ರಮ

Last Updated 31 ಡಿಸೆಂಬರ್ 2020, 15:37 IST
ಅಕ್ಷರ ಗಾತ್ರ

ವಿಜಯಪುರ: ನಗರ ಸೇರಿದಂತೆ ಜಿಲ್ಲೆಯಾದ್ಯಂತ ಬುಧವಾರ ರಾತ್ರಿ ಹೊಸ ವರ್ಷಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು.

ಕೋವಿಡ್‌ ಹಿನ್ನೆಲೆಯಲ್ಲಿ ನಿರ್ಬಂಧವಿದ್ದ ಕಾರಣ ಬಹುತೇಕರು ಮನೆಯಲ್ಲೇ ಕೇಕ್‌ ಕತ್ತರಿಸಿ, ಭಕ್ಷ್ಯ, ಭೋಜನವನ್ನು ಸವಿದು ಹೊಸ ವರ್ಷವನ್ನು ಸ್ವಾಗತಿಸಿದರು. ಪಟಾಕಿಯನ್ನು ಸಿಡಿಸಿ ಪರಸ್ಪರ ಶುಭಾಷಯ ವಿನಿಮಯ ಮಾಡಿಕೊಂಡರು.ವಾಟ್ಸ್‌ ಆ್ಯಪ್‌ ಸಂದೇಶಗಳು ಹರಿದಾಡಿದವು.

ಬೇಕರಿ, ಸ್ವೀಟ್‌ ಹೌಸ್‌ಗಳಲ್ಲಿ ಕೇಕ್‌ ಮತ್ತಿತರರ ಸಿಹಿ ತಿನಿಸುಗಳ ವ್ಯಾಪಾರ ಜೋರಾಗಿತ್ತು. ಮದ್ಯದ ಅಂಗಡಿಗಳಲ್ಲಿ ಬೆಳಿಗ್ಗೆಯಿಂದ ಸಂಜೆವರೆಗೂ ವ್ಯಾಪಾರ, ವಹಿವಾಟು ಭರ್ಜರಿಯಾಗಿತ್ತು. ಕೋಳಿ, ಕುರಿ ಮಾಂಸಕ್ಕೂ ಬೇಡಿಕೆ ಹೆಚ್ಚಾಗಿತ್ತು. ಪರಿಣಾಮ ದರದಲ್ಲೂ ಏರಿಕೆಯಾಗಿತ್ತು.

ಹೋಟೆಲ್‌, ಬಾರ್‌, ರೆಸ್ಟೋರೆಂಟ್‌ಗಳಲ್ಲಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಹೊಸ ವರ್ಷಾಚರಣೆಗೆ ನಿರ್ಬಂಧವಿದ್ದರೂ ವಿದ್ಯುತ್‌ ದೀಪಗಳಿಂದ ಆಲಂಕೃತವಾಗಿದ್ದವು. ರಾತ್ರಿ 9ರ ಬಳಿಕ ಬಾಗಿಲು ಬಂದ್‌ ಮಾಡಿದವಾರೂ ಅಷ್ಟರೊಳಗೆ ಒಂದಷ್ಟು ಗ್ರಾಹಕರು ಭೇಟಿ ನೀಡಿ, ಬಗೆ,ಬಗೆಯ ಭಕ್ಷ್ಯ, ಭೋಜನಗಳನ್ನು ಪಾರ್ಸೆಲ್‌ ಮಾಡಿಸಿಕೊಂಡು ಹೊಲ, ತೋಟಗಳಗೆ ತೆರಳಿ ಬೆಳದಿಂಗಳಲ್ಲಿ ಸ್ನೇಹಿತರೊಡಗೂಡಿ ವರ್ಷಾಚರಣೆ ಮಾಡುವ ಮೂಲಕ ಸಂಭ್ರಮಿಸಿದರು.

ಕಳೆದ ವರ್ಷಗಳಿಗೆ ಹೋಲಿಸಿದರೆ ಈ ವರ್ಷ ಹೊಸ ವರ್ಷಾಚರಣೆ ಹೆಚ್ಚು ರಂಗು ಪಡೆದಿಲ್ಲವಾದರೂ ಸರಳವಾಗಿ ಆಚರಣೆಗೊಂಡಿತು. ಅಹಿತಕರ ಘಟನೆಗಳು ನಡೆಯದಂತೆ ಪೊಲೀಸರು ಕಟ್ಟುನಿಟ್ಟಿನ ಕ್ರಮಕೈಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT