‘ಮುಂಗಾರಿನಲ್ಲಿ ಈರುಳ್ಳಿ ಬೇಸಾಯ ಸೂಕ್ತ’
ಇಂಡಿ: ಮುಂಗಾರು ಹಂಗಾಮಿನಲ್ಲಿ ಈರುಳ್ಳಿ ಬೇಸಾಯ ಸೂಕ್ತವಾಗಿದ್ದು, ಬಸವಂತ-780, ಎನ್-53, ಮತ್ತು ಭೀಮಾ ಸೂಪರ್ ತಳಿಗಳು ಉತ್ತಮವಾಗಿವೆ ಎಂದು ಕೃಷಿ ವಿಜ್ಞಾನಿ ಡಾ. ಹೀನಾ ಎಂ.ಎಸ್.ತಿಳಿಸಿದರು.
ಸೋಮವಾರ ಕೃಷಿ ವಿಜ್ಞಾನ ಕೇಂದ್ರದಲ್ಲಿ ಆಯೋಜಿಸಿದ್ದ ಈರುಳ್ಳಿ ಸಮಗ್ರ ಬೇಸಾಯ ಕ್ರಮಗಳು ಎನ್ನುವ ಕುರಿತು ಆನ್ ಲೈನ್ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಬಿತ್ತನೆ ಬೀಜವನ್ನು ಪಾದರಸ ಸಂಯುಕ್ತ ವಸ್ತು 2 ಗ್ರಾಂ ಅಥವಾ ಥೈರಮ್ 2.5 ಗ್ರಾಂ ಅಥವಾ ಕ್ಯಾಪ್ಟಾನ್ 2 ಗ್ರಾಂ ಅಥವಾ ಬಿನೋಮಿಲ್ 2 ಗ್ರಾಂ. ಒಂದು ಕೆ.ಜಿ. ಬೀಜಕ್ಕೆ ಉಪಚರಿಸುವುದರಿಂದ ನೇರಳೆ ಮಚ್ಚೆರೋಗ, ಕತ್ತುಕೊಳೆ ರೋಗ ಮುಂತಾದ ರೋಗ ಬಾಧೆಗಳು ನಿಯಂತ್ರಣವಾಗುತ್ತವೆ’ ಎಂದರು.
ವಿಜ್ಞಾನಿ ಡಾ. ಜಹೀರ್ ಅಹಮ್ಮದ್ ಮಾತನಾಡಿ, ಈರುಳ್ಳಿಗೆ ಬರುವ ಸಮಗ್ರ ಕೀಟ ಮತ್ತು ರೋಗ ನಿರ್ವಹಣೆ ಕುರಿತು ಮಾಹಿತಿ ನೀಡಿದರು.
ಎಕರೆಗೆ ಒಂದು ಚೀಲ ಬೇವಿನ ಹಿಂಡಿ ಸೇರಿಸುವುದರಿಂದ ಸಾಕಷ್ಟು ಕೀಟ ಮತ್ತು ರೋಗಗಳ ಬಾಧೆಯನ್ನು ತಡೆಗಟ್ಟಬಹುದು ಎಂದರು.
ವಿಜಯಪುರ ಕೃಷಿ ವಿಸ್ತರಣಾ ನಿರ್ದೇಶಕ ಡಾ.ಆರ್.ಬಿ.ಬೆಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿ, ‘ಈರುಳ್ಳಿ ಉತ್ಪಾದನೆಯಲ್ಲಿ ಜಗತ್ತಿನಲ್ಲಿ ಭಾರತ 2ನೇ ಸ್ಥಾನದಲ್ಲಿದೆ. ಮುಂಗಾರು ಹಂಗಾಮಿನಲ್ಲಿ ಶೇ 20ರಷ್ಟು
ಈರುಳ್ಳಿ ಉತ್ಪಾದನೆಯಾಗುತ್ತಿದೆ’ ಎಂದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.