ವಿಜಯಪುರ: ಲಾಕ್ಡೌನ್ ಪರಿಹಾರಧನ ಪಾವತಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಎಐಯುಟಿಯುಸಿ ಸಂಯೂಜಿತ ಕರ್ನಾಟಕ ರಾಜ್ಯ ಸಂಯುಕ್ತ ಕಟ್ಟಡ ಕಾರ್ಮಿಕರ ಸಂಘದಿಂದಜಿಲ್ಲಾ ಕಾರ್ಮಿಕ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.

ಘೋಷಣೆಯಾದ ₹3 ಸಾವಿರ ಪರಿಹಾರಧನ ಎಲ್ಲ ಕಾರ್ಮಿಕರಿಗೆ ಜಮೆ ಮಾಡಬೇಕು, ಕೊರೊನಾ ಸೋಂಕಿಗೆ ತುತ್ತಾದ ಕಾರ್ಮಿಕರ ಚಿಕಿತ್ಸಾ ವೆಚ್ಚ ಸಂಪೂರ್ಣ ಮಂಡಳಿ ಭರಿಸಬೇಕು, ಆಹಾರದ ಕಿಟ್ ಮತ್ತು ಸುರಕ್ಷಾ ಕಿಟ್ ಇಲಾಖೆಯಿಂದ ವಿತರಿಸಬೇಕು ಒತ್ತಾಯಿಸಿದರು.

ಲಸಿಕೆಯ ನೆಪದಲ್ಲಿ ಖಾಸಗಿ ಆಸ್ಪತ್ರೆಗಳಿಗೆ ಮಂಡಳಿಯ ಹಣ ಕೊಡುವುದನ್ನು ರದ್ದುಮಾಡಬೇಕು, ಸಹಾಯಧನಕ್ಕಾಗಿ ಸಲ್ಲಿಸಿದ ಅರ್ಜಿಗಳನ್ನು ಕೂಡಲೆ ವಿಲೇವಾರಿ ಮಾಡಬೇಕು, ಮನೆ ನಿರ್ಮಾಣಕ್ಕೆ ₹ 5 ಲಕ್ಷ ಸಹಾಯಧನ ನೀಡಬೇಕು ಎಂದು ಒತ್ತಾಯಿಸಿದರು.

ಕೋವಿಡ್-19 ಸೋಂಕಿನಿಂದ ಸಾವಿಗೀಡಾದ ಕಾರ್ಮಿಕರ ಕುಟುಂಬಕ್ಕೆ ₹ 10 ಲಕ್ಷ ಪರಿಹಾರ ಧನ ನೀಡಬೇಕು ಎಂದು ಆಗ್ರಹಿಸಿದರು.

ಸಂಘದ ಸಂಚಾಲಕ ಸುನೀಲ ಸಿದ್ರಾಮಶೆಟ್ಟಿ, ಸಂಘದ ಸದಸ್ಯರಾದ ಮಹಾದೇವಿ ಧರ್ಮಶೆಟ್ಟಿ, ಮಲ್ಲಯ್ಯ ಗೌರಿ, ರಸೂಲ ಇನಾಮದಾರ, ಜಮಿಲಾ ಇನಾಮದಾರ, ಸಾವಿತ್ರಿ ಮಲಕಣ್ಣವರ, ರಾಮು ಆಸಂಗಿ, ಮಹಮ್ಮದ್ ದಳವಾಯಿ, ಶೌಕತ್ಅಲಿ ಹುಂಡೇಕಾರ, ಯಾಸಿನ್ ಹಳ್ಳಿ, ಹಣಮಂತ ಹತ್ತರಕಿಹಾಳ, ಆತ್ಮನಂದ ರಜಪೂತ, ಮಲಕಪ್ಪ ಕೊಲಕಾರ, ಚಂದ್ರಶೇಖರ, ತಿಪ್ಪಣ್ಣ ಮುಂತಾದ ಕಾರ್ಮಿಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.