ವಿಜಯಪುರ: ನಗರದ ಅಲ್ ಅಮಿನ್ ವೈದ್ಯಕೀಯ ಮಹಾವಿದ್ಯಾಲಯದ ದ್ವಿತೀಯ ವರ್ಷದಲ್ಲಿ ಓದುತ್ತಿರುವ ಕಾಶ್ಮೀರದ ವಿದ್ಯಾರ್ಥಿ ಹಮೀಮ್ ಗುಲಾಂ ಅಹ್ಮದ್ ಭಟ್ಗೆ ಅದೇ ಕಾಲೇಜಿನ ಐವರು ಹಿರಿಯ ವಿದ್ಯಾರ್ಥಿಗಳು ರ್ಯಾಗಿಂಗ್ ಮತ್ತು ದೈಹಿಕ ಹಿಂಸೆ ನೀಡಿದ ಆರೋಪ ಕೇಳಿಬಂದಿದೆ.

ಪ್ರಕರಣದ ಸಂಬಂಧ ಕಾಲೇಜಿನ ಹಿರಿಯ ವಿದ್ಯಾರ್ಥಿಗಳಾದ ವಿಜಯಪುರ ನಗರದ ಮಹಮ್ಮದ್ ಝೈನುಲ್(23), ಬಳ್ಳಾರಿ ಜಿಲ್ಲೆಯ ಸಂಡೂರಿನ ಸಮೀರ್ ತಾಡಪತ್ರಿ (24), ರಾಯಚೂರು ಜಿಲ್ಲೆ ಮುದಗಲ್ನ ಶೇಕ್ ಸಾವುದ್ (23), ಬಳ್ಳಾರಿ ಜಿಲ್ಲೆ ಶಿರಗುಪ್ಪದ ಮನ್ಸೂರ್ ಭಾಷಾ (24), ಹಾಗೂ ಇಂಡಿ ತಾಲ್ಲೂಕಿನ ಹಿಂಗಣಿಯ ಮುಜಾಫರ್ ಜಮಾದಾರ(23) ಎಂಬುವವರನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ.

ಪ್ರಧಾನಿ, ಮುಖ್ಯಮಂತ್ರಿಗೆ ಟ್ವಿಟ್:

‘ನಮ್ಮ ಮಗನಿಗೆ ಹಿರಿಯ ವಿದ್ಯಾರ್ಥಿಗಳು ರ್ಯಾಗಿಂಗ್ ಮಾಡಿದ್ದು, ಆತನಿಗೆ ರಕ್ಷಣೆ ನೀಡಿ’ ಎಂದು ಕಾಶ್ಮೀರದಲ್ಲಿರುವ ವಿದ್ಯಾರ್ಥಿಯ ತಂದೆ ಗುಲಾಂ ಅಹ್ಮದ್ ಭಟ್ ಟ್ವಿಟ್ ಮಾಡಿದ್ದಾರೆ. ಪ್ರಧಾನಮಂತ್ರಿ, ಕೇಂದ್ರ ಗೃಹ ಸಚಿವ, ಕಾಶ್ಮೀರ ಮತ್ತು ಕರ್ನಾಟಕ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಗೂ ಟ್ವಿಟ್ ಟ್ಯಾಗ್ ಮಾಡಿದ್ದಾರೆ.

ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ವಿದ್ಯಾರ್ಥಿ ಹಮೀಮ್ ಭಟ್, ‘ಕ್ರಿಕೆಟ್ ಆಡುವಾಗ ಗಲಾಟೆಯಾಗಿತ್ತು. ಬಳಿಕ ಹಾಸ್ಟೆಲ್ಗೆ ಬಂದ ಕಾಲೇಜಿನ ಹಿರಿಯ ವಿದ್ಯಾರ್ಥಿಗಳು ಹಲ್ಲೆ ಮಾಡಿದರು. ಒತ್ತಾಯಪೂರ್ವಕವಾಗಿ ನನಗೆ ಅಲ್ ಅಮಿನ್ ಸೆಲ್ಯೂಟ್ ಮಾಡಬೇಕು, ಹಾಡು ಹೇಳಬೇಕು, ನೃತ್ಯ ಮಾಡಬೇಕು ಎಂದು ಹೇಳಿದರು. ಇನ್ನೂ ನಾಲ್ಕು ವರ್ಷ ಇಲ್ಲಿಯೇ ಇರುತ್ತೀಯಾ ಹುಷಾರ್ ಎಂದು ಎಚ್ಚರಿಕೆ ನೀಡಿದ್ದಾರೆ’ ಎಂದು ಆರೋಪಿಸಿದ್ದಾರೆ.

ಕ್ರಮಕ್ಕೆ ಸೂಚನೆ:

ಜಿಲ್ಲಾಧಿಕಾರಿ ಟಿ.ಭೂಬಾಲನ್ ಸೂಚನೆ ಮೇರೆಗೆ ವಿಜಯಪುರ ಮತ್ತು ತಿಕೋಟಾ ತಹಶೀಲ್ದಾರ್ ಹಾಗೂ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಯವರು ಕಾಲೇಜಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಹಿರಿಯ ವಿದ್ಯಾರ್ಥಿಗಳಿಂದ ಹಲ್ಲೆಗೊಳಗಾದ ಕಾಶ್ಮೀರಿ ವಿದ್ಯಾರ್ಥಿ ಹಮೀಮ್ ಅವರನ್ನು ಭೇಟಿ ಮಾಡಿ, ಯೋಗಕ್ಷೇಮ ವಿಚಾರಿಸಿದರು.

‘ವಿದ್ಯಾರ್ಥಿಗೆ ಯಾವುದೇ ಗಾಯಗಳಾಗಿಲ್ಲ ಹಾಗೂ ವಿದ್ಯಾರ್ಥಿಯು ದೈಹಿಕವಾಗಿ ಆರೋಗ್ಯಕರವಾಗಿದ್ದಾನೆ’ ಎಂದು ವರದಿ ನೀಡಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಜಿಲ್ಲಾಧಿಕಾರಿ ಟಿ.ಭೂಬಾಲನ್, ‘ಘಟನೆಯ ವಿವರವನ್ನು ಸರ್ಕಾರದ ವೈದ್ಯಕೀಯ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಮೊಹ್ಮದ್ ಮೊಹಸಿನ್ ಅವರಿಗೆ ನೀಡಲಾಗಿದೆ. ಹಲ್ಲೆಗೊಳಗಾದ ವಿದ್ಯಾರ್ಥಿಗೆ ಸೂಕ್ತ ಸಹಾಯ ಹಾಗೂ ಹಲ್ಲೆ ಮಾಡಿರುವ ಹಿರಿಯ ವಿದ್ಯಾರ್ಥಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ’ ಎಂದರು.

‘ಹಲ್ಲೆ ಮಾಡಿದ ವಿದ್ಯಾರ್ಥಿಗಳ ವಿರುದ್ದ ಸೂಕ್ತ ಕಾನೂನ ಕ್ರಮ ಕೈಗೊಳ್ಳಲಾಗುವುದು’ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ರ್ಯಾಗಿಂಗ್ ಅಲ್ಲ:

ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಅಲ್ ಅಮಿನ್ ವೈದ್ಯಕೀಯ ಕಾಲೇಜಿನ ವೈದ್ಯಕೀಯ ಸುಪರಿಡೆಂಟ್ ಡಾ.ಜಿಲಾನಿ ಅವಟಿ, ‘ಕಾಶ್ಮೀರಿ ವಿದ್ಯಾರ್ಥಿ ಹಮೀಮ್ ಭಟ್ ನಾಯಕನಾಗಿರುವ ಕ್ರಿಕೆಟ್ ತಂಡ ಮತ್ತು ಸ್ಥಳೀಯ ವಿದ್ಯಾರ್ಥಿಗಳ ಕ್ರಿಕೆಟ್ ತಂಡದ ನಡುವೆ ಕಾಲೇಜಿನ ಮೈದಾನದಲ್ಲಿ ಮಂಗಳವಾರ ಸಂಜೆ ಕ್ರಿಕೆಟ್ ಪಂದ್ಯ ನಡೆದಿದ್ದು, ಈ ಸಂದರ್ಭದಲ್ಲಿ ಪರಸ್ಪರ ವಾಗ್ವಾದ, ಜಗಳ ನಡೆದಿದೆ. ಇದು ರ್ಯಾಗಿಂಗ್ ಅಲ್ಲ, ಅಂತಹ ಘಟನೆಗಳು ಇದುವರೆಗೂ ಕಾಲೇಜಿನಲ್ಲಿ ನಡೆದಿಲ್ಲ. ಕಾಲೇಜಿನಲ್ಲಿ ಕಮಿಟಿ ಇದೆ. ವಿಚಾರಣೆ ನಡೆಸುತ್ತೇವೆ, ತಪ್ಪಿತಸ್ಥ ವಿದ್ಯಾರ್ಥಿಗಳ ವಿರುದ್ಧ ಶಿಸ್ತುಕ್ರಮಕೈಗೊಳ್ಳಲಾಗುವುದು’ ಎಂದು ತಿಳಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.