ವಿಜಯಪುರ: ಕರಾಳ ಕೃಷಿ ನೀತಿ ಮತ್ತು ಕಾರ್ಮಿಕ ಕೋಡ್ ಹಿಂಪಡೆಯುವ ಕುರಿತು ಸಂಸತ್ ಅಧಿವೇಶನದಲ್ಲಿ ಧ್ವನಿ ಎತ್ತುವಂತೆ ಆಗ್ರಹಿಸಿ ವಿವಿಧ ಸಂಘಟನೆಗಳ ಮುಖಂಡರು ನಗರದ ಹಳೆಯ ಪ್ರವಾಸಿ ಮಂದಿರದಲ್ಲಿರುವ ಸಂಸದರ ಕಚೇರಿಯಲ್ಲಿ ರಮೇಶ ಜಿಗಜಿಣಗಿ ಅವರಿಗೆ ಶನಿವಾರ ಮನವಿ ಸಲ್ಲಿಸಿದರು.

ಪ್ರಾಂತ ರೈತ ಸಂಘಟನೆ, ಅಖಿಲ ಭಾರತ ಕೃಷಿಯೇತರ ಮಜದೂರ್ ಸಂಘಟನೆ, ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ, ಸಿಐಟಿಯು, ಎಐಯುಟಿಯುಸಿ, ಬ್ಯಾಂಕ್ ಯೂನಿಯನ್ ಮತ್ತು ಎಐಡಿವೈಒ, ಎಐಎಂಎಸ್ಎಸ್ ಮಹಿಳಾ ಸಂಘಟನೆ, ಜನವಾದಿ ಮಹಿಳಾ ಸಂಘಟನೆ ಮುಖಂಡರು ಹಾಜರಿದ್ದರು.

ಸರ್ಕಾರದ ಕೃಷಿ ನೀತಿ ವಿರುದ್ಧ ರೈತ ಚಳವಳಿ ಪ್ರಬಲವಿರುವ ಐದು ರಾಜ್ಯಗಳಲ್ಲಿ, ಗ್ರಾಮೀಣ ಮತದಾರರು ಹೆಚ್ಚಿರುವ 159 ಕ್ಷೇತ್ರಗಳಲ್ಲಿ ಬಿಜೆಪಿ ಮೈತ್ರಿಕೂಟ ಹಿನ್ನಡೆ ಅನುಭವಿಸಿದೆ. ಇದಕ್ಕೆ ಕೃಷಿ ವಲಯದ ಬಿಕ್ಕಟ್ಟು, ಕೃಷಿ ನೀತಿಗಳೇ ಕಾರಣ. ರೈತಪರ ಸುಧಾರಣೆಗಳನ್ನು ತರಲು ಅಗತ್ಯ ಒತ್ತು ನೀಡಬೇಕು ಎಂದು ಮನವಿ ಮಾಡಿದರು.

ಕೃಷಿ ನೀತಿ ಹಿಂಪಡೆಯಲು ಆಗ್ರಹಿಸಿ ರೈತರು ಸುದೀರ್ಘ ಹೋರಾಟ ನಡೆಸಿದ್ದಾರೆ. ಅಂದಾಜು 736 ರೈತರು ಪ್ರಾಣ ಕಳೆದುಕೊಂಡಿದ್ದಾರೆ. ಲಕ್ಷಾಂತರ ರೈತರು ಕಷ್ಟ-ನಷ್ಟಗಳನ್ನು ಅನುಭವಿಸಿದರು. ಆದರೂ ಸಮಸ್ಯೆ ಬಗೆಹರಿದಿಲ್ಲ. ಈ ಬಗ್ಗೆ ಸಂಸದರು ಸರ್ಕಾರದ ಗಮನ ಸೆಳೆದರು ರೈತ ನೀತಿ ಹಿಂಪಡೆಯುವಂತೆ ಮನವೊಲಿಸಬೇಕೆಂದು ಒತ್ತಾಯಿಸಿದರು.

ನಿರುದ್ಯೋಗ, ಬೆಲೆ ಏರಿಕೆಯಿಂದ ಜನ ಸಂಕಷ್ಟ ಅನುಭವಿಸುತ್ತಿದ್ದಾರೆ. ಭಾರತದಲ್ಲಿ ಪ್ರತಿನಿತ್ಯ ಸರಾಸರಿ 31 ಜನ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಆಳವಾದ ಕೃಷಿ ಬಿಕ್ಕಟ್ಟು, ರೈತರ ಆತ್ಮಹತ್ಯೆಗಳು, ಹೆಚ್ಚುತ್ತಿರುವ ಸಂಪತ್ತಿನ ಅಸಮಾನತೆ ಮುಂತಾದ ಸಮಸ್ಯೆಗಳ ಪರಿಹಾರಕ್ಕೆ ಸರ್ಕಾರದ ನೀತಿಗಳಲ್ಲಿ ಬದಲಾವಣೆ ಅಗತ್ಯವಿದೆ ಎಂದು ತಿಳಿಸಿದರು.

ಮನವಿ ಸ್ವೀಕರಿಸಿದ ಸಂಸದ ರಮೇಶ ಜಿಗಜಿಣಗಿ, ಅಧಿವೇಶನದಲ್ಲಿ ಲಿಖಿತವಾಗಿ ಪ್ರಶ್ನೆ ಕೇಳುವುದಾಗಿ ಭರವಸೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.