ಹೊರ್ತಿ: ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಮಳೆಯಿಂದ ಕಳೆದ ಎರಡು ಮೂರು ದಿನಗಳಿಂದ ಭೀಮಾ ನದಿಗೆ ನಿರಾ ಮತ್ತು ಉಜನಿ ಜಲಾಶಯದಿಂದ ಲಕ್ಷಾಂತರ ಕ್ಯುಸೆಕ್ ನೀರು ಹರಿಬಿಟ್ಟ ಕಾರಣ ಕರ್ನಾಟಕ -ಮಾಹಾರಾಷ್ಟ್ರ ವ್ಯಾಪ್ತಿಯ ಭೀಮಾ ನದಿಗೆ ಅಡ್ಡಲಾಗಿ ಕಟ್ಟಿರುವ ಬ್ಯಾರೇಜ್‌ಗಳ ರಸ್ತೆಗಳ ಮೇಲೆ ನೀರು ಬಂದು ಸಂಪರ್ಕ ಸ್ಥಗಿತಗೊಂಡಿದೆ.
ಭೀಮಾ ನದಿಯ ಬ್ಯಾರೇಜ್ ಸಂಪರ್ಕ ಕಲ್ಪಿಸುವ -ಧೂಳಖೇಡ, ಹಿಂಗಣಿ ಸೇರಿ ಬಹುತೇಕ ಬ್ಯಾರೇಜ್‌ಗಳಲ್ಲಿ ನೀರು ತುಂಬಿ ಹರಿಯುತ್ತಿದ್ದು, ಕೆಲ ರಸ್ತೆ ಸಂಪರ್ಕ ಸ್ಥಗಿತದಿಂದ ವಾಹನ ಸವಾರರು ಮತ್ತು ಗಡಿಯ ಗ್ರಾಮಗಳ ಸಂಬಂಧಪಟ್ಟ ರೈತರು ಸುತ್ತುವರಿದು ಬರುತ್ತಿದ್ದಾರೆ.
ನದಿ ತೀರದ ಜಮೀನಿನ ರೈತರ ಬೆಳೆಗೆ ನೀರು ತುಂಬಿ ಹರಿಯುತ್ತಿದ್ದು, ಪ್ರಮುಖ ಬೆಳೆಗಳಾದ ಕಬ್ಬು, ತೊಗರಿ, ಬಾಳೆ, ಹಾನಿ ಉಂಟಾಗಬಹುದು ಎಂದು ರೈತರಲ್ಲಿ ಆತಂಕ ಶುರುವಾಗಿದೆ.