ವಿಜಯಪುರ: ಕನೇರಿ ಸ್ವಾಮೀಜಿಗಳು ಆಡುಭಾಷೆಯಲ್ಲಿ ಬಾಯಿತಪ್ಪಿ ಆಡಿರುವ ಮಾತನ್ನು ದೀರ್ಘಕ್ಕೆ ಒಯ್ಯಬಾರದು, ಈ ವಿಚಾರ ಇಲ್ಲಿಗೆ ಮುಗಿಸುವುದು ಒಳ್ಳೆಯದು. ಅವರಾಡಿದ ಮಾತನ್ನೇ ಇಟ್ಟುಕೊಂಡು ನಿರ್ಬಂಧ ಹೇರುವುದರಲ್ಲಿ ಅರ್ಥವಿಲ್ಲ ಎಂದು ಸಚಿವ ಶಿವಾನಂದ ಪಾಟೀಲ ಹೇಳಿದರು.

ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಸಭ್ಯ, ಅಶ್ಲೀಲ ಪದಗಳನ್ನ ಸ್ವಾಮೀಜಿಗಳು, ಮಠಾಧೀಶರು ಸೇರಿದಂತೆ ಯಾರ ಬಾಯಿಂದಲೂ ಬರಬಾರದು ಎಂದರು.

ಇತ್ತೀಚಿನ ದಿನಗಳಲ್ಲಿ ವೀರಶೈವ-ಲಿಂಗಾಯತ ಎಂದೆಲ್ಲ ಭಿನ್ನಾಭಿಪ್ರಾಯ ಕೇಳಿ ಬರುತ್ತಿರುವುದು ದುರದೃಷ್ಟಕರ. ಲಿಂಗಾಯತ-ವೀರಶೈವ ಬೇರೆ, ಬೇರೆಯಲ್ಲ. ಕಾಯಕ-ದಾಸೋಹ ತತ್ವ ಸಾರಿರುವ ಬಸವಾದಿ ಶರಣರ ಆಶಯ ಈಡೇರಿಸುವಲ್ಲಿ ಎಲ್ಲ ಮಠಾಧೀಶರು ಸೇರಿ ಸಾಮರಸ್ಯದಿಂದ ಹೋಗಬೇಕು ಎಂಬುದು ನನ್ನ ವಿನಂತಿ ಎಂದರು.
.ಕನ್ಹೇರಿ ಸ್ವಾಮೀಜಿ ಹೇಳಿಕೆ ಅವಿವೇಕದ ಪರಮಾವಧಿ: ಶಿವಾನಂದ ಸ್ವಾಮೀಜಿ.ವಿಜಯಪುರ ಪ್ರವೇಶ ನಿರ್ಬಂಧ ಪ್ರಶ್ನಿಸಿದ್ದ ಕಾಡಸಿದ್ದೇಶ್ವರ ಸ್ವಾಮೀಜಿ ಅರ್ಜಿ ವಜಾ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.