ಸೋಮವಾರ, ಆಗಸ್ಟ್ 10, 2020
21 °C
ಸಿದ್ಧೇಶ್ವರ ಬ್ಯಾಂಕ್‌ ಎಟಿಎಂ ಕಾರ್ಡ್ ಬಿಡುಗಡೆ

ವಿಜಯಪುರ | ಹಣ ದುಡಿಯುವ ಕ್ಷೇತ್ರ ಬ್ಯಾಂಕ್‌: ಅಮೃತಾನಂದ ಸ್ವಾಮೀಜಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ಶ್ರೀ ಸಿದ್ಧೇಶ್ವರ ಸಹಕಾರಿ ಬ್ಯಾಂಕಿನ ಸಂಸ್ಥಾಪ‍ಕ ಡಾ.ಫ.ಗು.ಹಳಕಟ್ಟಿಯವರ 140ನೇ ಜನ್ಮದಿನದ ಸವಿನೆನಪಿಗಾಗಿ ಎ.ಟಿ.ಎಂ. ಕಾರ್ಡ್‌ ಬಿಡುಗಡೆ ಮಾಡಲಾಯಿತು.

ಬ್ಯಾಂಕಿನ ಕೇಂದ್ರ ಕಚೇರಿಯಲ್ಲಿ ಗುರುವಾರ ನಡೆದ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಬಾಲಗಾಂವದ ಅಮೃತಾನಂದ ಸ್ವಾಮೀಜಿ ಅವರು ಎ.ಟಿ.ಎಂ. ಕಾರ್ಡ್‌ ಲೋಕಾರ್ಪಣೆ ಮಾಡಿದರು.

ಬ್ಯಾಂಕ್‌ ಎಂದರೆ ಹಣವನ್ನು ದುಡಿಯುವ ಕ್ಷೇತ್ರವಾಗಿದೆ. ಠೇವಣಿ ಎಂಬುದು ಬೀಜವಿದ್ದಂತೆ ಇದರಿಂದ ಗ್ರಾಹಕರಿಗೆ ಲಕ್ಷ, ಕೋಟಿ ಫಲ ಸಿಗುತ್ತದೆ ಎಂದು ಹೇಳಿದರು.

ಸಿದ್ಧೇಶ್ವರ ಸಹಕಾರ ಬ್ಯಾಂಕ್ ವಿಜಯಪುರ ಜನರ ಆಶಾಕಿರಣವಾಗಿದೆ. ತಾಂತ್ರಿಕ ಯುಗದಲ್ಲಿ ಒಂದು ಹೆಜ್ಜೆ ಮುಂದೆ ಹೋಗಿ ಎ.ಟಿ.ಎಂ. ಲೋಕಾರ್ಪಣೆ ಆಗುತ್ತಿರುವುದು ಸ್ವಾಗತಾರ್ಹ ಎಂದರು.

ಮುಂದಿನ ದಿನಮಾನಗಳಲ್ಲಿ ಬ್ಯಾಂಕ್‌ ಇನ್ನಷ್ಟು ಉತ್ತರೋತ್ತರವಾಗಿ ಬೆಳೆಯಲಿ. ಬ್ಯಾಂಕಿನ ಆಡಳಿತ ಮಂಡಳಿ, ಸಿಬ್ಬಂದಿ ಹಾಗೂ ಗ್ರಾಹಕರು ಬ್ಯಾಂಕಿನ ವಾರಸುದಾರರಾಗಿ ಕೆಲಸ ಮಾಡಬೇಕು ಎಂದರು.

ಸಿದ್ಧೇಶ್ವರ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಹರ್ಷಗೌಡ ಎಸ್.ಪಾಟೀಲ ಮಾತನಾಡಿ, ಸಂಸ್ಥಾಪಕರ ಜನ್ಮದಿನದ ಸವಿನೆನಪಿಗಾಗಿ ಬಿ.ಡಿ.ಎ.ದಿಂದ ಗಣೇಶನಗರದಲ್ಲಿ ಷೇರುದಾರರಿಗೆ ಸಭಾಭವನವನ್ನು ನಿರ್ಮಿಸುವುದಕ್ಕಾಗಿ ನಿವೇಶನವನ್ನು ಪಡೆದುಕೊಂಡಿದೆ ಎಂದು ತಿಳಿಸಿದರು.

ಬ್ಯಾಂಕ್‌ ತಾಂತ್ರಿಕತೆಯಲ್ಲಿ ಹಿಂದೆ ಬೀಳದಂತೆ ಅಗತ್ಯ ಕ್ರಮಕೈಗೊಳ್ಳಲಾಗುವುದು ಎಂದರು.

ವಿಜಯಪುರ ಜಿಲ್ಲೆಯ ಸಹಕಾರ ಇಲಾಖೆ ಉಪನಿಬಂಧಕ ಪಿ.ಬಿ.ಕಾಳಗಿ, ಜಿಲ್ಲೆಯ ಎಲ್ಲ ತಾಲ್ಲೂಕು ಕೇಂದ್ರಗಳಲ್ಲಿ ಸಿದ್ಧೇಶ್ವರ ಬ್ಯಾಂಕಿನ ಶಾಖೆಯನ್ನು ಆರಂಭಿಸುವಂತೆ ಸಲಹೆ ನೀಡಿದರು.

ಸಹಕಾರ ಕ್ಷೇತ್ರಗಳಲ್ಲಿ ಶತಮಾನ ಕಂಡ ಕೆಲವೆ ಕೆಲವು ಬ್ಯಾಂಕುಗಳಲ್ಲಿ ಸಿದ್ಧೇಶ್ವರ ಬ್ಯಾಂಕ್‌ ಒಂದಾಗಿದೆ ಎಂದರು.

ನಿರ್ದೇಶಕ ರವೀಂದ್ರ ಬಿಜ್ಜರಗಿ, ಪ್ರಧಾನ ವ್ಯವಸ್ಥಾಪಕ ಎಸ್.ಎಲ್.ಇಂಡಿ, ಬ್ಯಾಂಕಿನ ಉಪಾಧ್ಯಕ್ಷ ಆರ್.ಎಚ್.ಬಿದನೂರ ಹಾಗೂ ನಿರ್ದೇಶಕರಾದ ಎ.ಎಂ.ಪಟ್ಟಣಶೆಟ್ಟಿ, ಜಿ.ಎಸ್. ಗಚ್ಚಿನಮಠ, ಆರ್.ಎಂ.ಪಾಟೀಲ ಉಪ್ಪಲದಿನ್ನಿ, ಡಾ.ವಿ.ಎನ್.ಪಾಟೀಲ ಮುಳವಾಡ, ವಿ. ಆರ್.ಅವರಂಗಾಬಾದ, ಎಸ್.ಜಿ.ಗಚ್ಚಿನಕಟ್ಟಿ, ವಿ.ಎಸ್.ಪಾಟೀಲ ಮಸಬಿನಾಳ, ವಿ.ಡಿ.ಇಜೇರಿ, ಎಸ್.ಎಸ್.ಜತ್ತಿ, ವಿ.ಡಿ.ಕರ್ಪೂರಮಠ, ಆರ್.ಎಸ್.ಬಿಜ್ಜರಗಿ, ಎಸ್.ಎಸ್.ಪಾಟೀಲ ತೊನಶ್ಯಾಳ, ಪಿ.ಎಸ್.ಬಗಲಿ, ಜಿ.ಎಸ್.ಗಂಗನಳ್ಳಿ, ಎಸ್.ಎಸ್.ಭೋಗಶೆಟ್ಟಿ, ಭೋರಮ್ಮ ಬಿ.ಗೊಬ್ಬೂರ, ಎಸ್.ಎಸ್.ಭೋವಿ, ಎಸ್.ಎಂ. ಹುಂಡೆಕಾರ, ಎನ್.ಆರ್.ಪಾಟೀಲ ಮುಳವಾಡ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.