ಇಂಡಿ: ‘ಜಗತ್ತಿಗೆ ಬೇಕಿರುವುದನ್ನು ಸಿದ್ಧೇಶ್ವರ ಶ್ರೀ ನೀಡಿದ್ದಾರೆ. ಪ್ರೇಮ, ಕರುಣೆ, ಸಾಮರಸ್ಯವನ್ನು ವಿಶ್ವಕ್ಕೆ ಸಾರಿದ್ದಾರೆ. ಇಂದಿನ ಪ್ರಪಂಚಕ್ಕೆ ಶ್ರೀಗಳು ಹೇಳಿರುವ ಜ್ಞಾನದ ವಾಣಿ ದಾರಿ ದೀಪವಾಗಿದೆ’ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.

ನಗರದ ಶ್ರೀ ಜಿ.ಆರ್.ಗಾಂಧಿ ಮಹಾವಿದ್ಯಾಲಯದಲ್ಲಿ 18 ದಿನಗಳವರೆಗೆ ನಡೆದ ಶ್ರೀ ಅಮೃತಾನಂದ ಶ್ರೀಗಳ ಪ್ರವಚನದ ಮುಕ್ತಾಯ ಸಮಾರಂಭ ಮತ್ತು ಸಿದ್ಧೇಶ್ವರ ಶ್ರೀಗೆ ನುಡಿನಮನ ಕಾರ್ಯಕ್ರಮದಲ್ಲಿ ಬುಧವಾರ ಭಾಗವಹಿಸಿ, ಮಾತನಾಡಿದರು.

ಮುರಘೇಂದ್ರ ಶಿವಾಚಾರ್ಯರರು ಮಾತನಾಡಿ, ‘ಸಿದ್ಧೇಶ್ವರ ಶ್ರೀಗಳು ನಮ್ಮನ್ನು ತಪಸ್ಸು, ಜ್ಞಾನ ಮತ್ತು ಆಧ್ಯಾತ್ಮದ ಕಡೆಗೆ ಒಯ್ದರು. ಲೌಕಿಕ ವಿಚಾರಗಳಿಗೆ ಮನಸ್ಸು ಕೊಡದೇ ನಮಗೆ ಅಧ್ಯಾತ್ಮ, ಸಂಸ್ಕಾರದ ಪರಿಶುದ್ಧ ಸಂದೇಶ ನೀಡಿದ್ದಾರೆ’ ಎಂದರು.

ಅಮಲಾಜರಿಯ ಜ್ಞಾನ ಮಾಯಾನಂದ ಶ್ರೀ ಮಾತನಾಡಿ, ‘ಮಾನವನ ಸ್ವಾರ್ಥಕ ಬದುಕಿಗೆ ಬೇಕಾಗುವ ಸಂಸ್ಕಾರ, ಸಾಮರಸ್ಯ, ಉತ್ತಮ ಆಚಾರ ವಿಚಾರ, ಮೌಲ್ಯಗಳು ಶ್ರೀಗಳ ಪ್ರವಚನದಲ್ಲಿದ್ದು, ಅವರ ಪ್ರವಚನ ಮನುಕುಲಕ್ಕೆ ದಾರಿದೀಪವಾಗಿದ್ದವು’ ಎಂದರು.

ಬಸವಾನಂದ ಶ್ರೀ, ಮಹೇಶಾನಂದ ಶ್ರೀ, ಅಮೃತಾನಂದ ಶ್ರೀ, ಪ್ರವಚನ ಸಮಿತಿಯ ಕಾಸುಗೌಡ ಬಿರಾದಾರ, ಬಿ.ಡಿ.ಪಾಟೀಲ, ಧರ್ಮರಾಜ ಮುಜಗೊಂಡ, ಅವಿನಾಶ ಬಗಲಿ, ಅನೀಲಗೌಡ ಬಿರಾದಾರ, ಡಿ.ಆರ್.ಶಹಾ, ಮಾತನಾಡಿದರು.

ಚಿಕ್ಕಲಗಿಯ ಶರಣಾನಂದ ಶ್ರೀ, ಮುಳಸಾವಳಗಿಯ ಲಿಂಗರಾಜ ಶ್ರೀ, ಗಣೇಶಾನಂದ ಶ್ರೀ, ಸದಾಶಿವ ಶ್ರೀ, ಶಿವಾನಂದ ಶರಣರು ಕರ್ಜಗಿ, ಶಿರಗುಪ್ಪಿಯ ಭೈರವನಾಥ ಶ್ರೀ, ಜಗದೀಶ್ ಕ್ಷತ್ರಿ, ಶ್ರೀಶೈಲ ಸಣ್ಣಕ್ಕಿ, ದೇವೆಂದ್ರ ಕುಂಬಾರ, ಪ್ರಶಾಂತ ಗವಳಿ, ಸಂತೋಷ ಗವಳಿ, ಬಾಳು ಮುಳಜಿ, ಅನಿಲ ಜಮಾದಾರ, ಮಹೇಸ ಹೂಗಾರ, ಸಿದ್ದು ಲಾಳಸಂಗಿ, ಧನರಾಜ ಮುಜಗೊಂಡ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.