ಭಾನುವಾರ, ಆಗಸ್ಟ್ 14, 2022
20 °C
ಹಿಮಾಚಲ ಪ್ರದೇಶದ ರಾಜ್ಯಪಾಲ ರಾಜೇಂದ್ರ ಅರಳೇಕರ ಆಗಮನ

ಸೋಮದೇವರ ಹಟ್ಟಿ ದುರ್ಗಾದೇವಿ ಜಾತ್ರೆ ನಾಳೆಯಿಂದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ತಿಕೋಟಾ ತಾಲ್ಲೂಕಿನ ಸೋಮದೇವರ ಹಟ್ಟಿ ತಾಂಡಾದ ದುರ್ಗಾದೇವಿ ವಾರ್ಷಿಕ ಜಾತ್ರಾ ಮಹೋತ್ಸವ ಜೂನ್‌ 27 ಮತ್ತು 28 ರಂದು ನಡೆಯಲಿದೆ ಎಂದು ಶ್ರೀ ದುರ್ಗಾದೇವಿ ಟ್ರಸ್ಟ್‌ ಕಮಿಟಿ ಅಧ್ಯಕ್ಷ ಡಾ.ಜಗನು ಮಹಾರಾಜ ತಿಳಿಸಿದರು.

ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿಯ ಜಾತ್ರಾ ಮಹೋತ್ಸವದಲ್ಲಿ ಹಿಮಾಚಲ ಪ್ರದೇಶದ ರಾಜ್ಯಪಾಲ ರಾಜೇಂದ್ರ ಅರಳೇಕರ, ಕೇಂದ್ರ ಸಚಿವ ಶ್ರೀಪಾದ ನಾಯಕ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದರು.

ಸಚಿವರಾದ ಪ್ರಭು ಚವ್ಹಾಣ, ಶ್ರೀರಾಮುಲು, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ, ಶಾಸಕ ದೇವಾನಂದ ಚವ್ಹಾಣ, ಮಹಾರಾಷ್ಟ್ರ ಸಚಿವ ಬಾಳಾಸಾಹೇಬ ಪಾಟೀಲ, ಗೋವಾ ರಾಜ್ಯದ ವಿರೋಧ ಪಕ್ಷದ ನಾಯಕ ಮೈಕಲ್ ಲೋಬೊ, ಗೋವಾ ಸಚಿವ ಸುಭಾಶ್‌ ದೇಸಾಯಿ, ಗುಜರಾತ್‌ ಹೈಕೋರ್ಟ್‌ ನ್ಯಾಯಾಧೀಶ ಜಿ.ಕೆ.ಗೋಸಾವಿ ಮತ್ತಿತರರು ಭಾಗವಹಿಸಲಿದ್ದಾರೆ ಎಂದರು.

ಜೂನ್‌ 27ರಮದು ರಾತ್ರಿ 10ಕ್ಕೆ ಪುಣೆಯ ಕಲಾವಿದರ ತಂಡದಿಂದ ಮರಾಠಿ ತಮಾಶಾ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಜೂನ್‌ 28ರಂದು ಬೆಳಿಗ್ಗೆ 5ಕ್ಕೆ ದೇವಿಯ ಮಹಾ ಆರತಿ, 8ಕ್ಕೆ ದೇವಿಯ ಮಹಾಪ್ರಸಾದ, ಮಧ್ಯಾಹ್ನ 1ಕ್ಕೆ ಸಮುದಾಯ ಭವನ ಉದ್ಘಾಟನೆ ಹಾಗೂ ಮಧ್ಯಾಹ್ನ 3ಕ್ಕೆ ಧರ್ಮ ಸಭೆ ಹಾಗೂ ಅನ್ನ ಪ್ರಸಾದ, ರಾತ್ರಿ 8ಕ್ಕೆ ದೇವಿಯ ಆಯುಧ ಪೂಜೆ, ರಾತ್ರಿ 10ಕ್ಕೆ ಸಿದ್ದಿ ಬಂಜಾರ ಭಜನಾ ಕಾರ್ಯಕ್ರಮ ನಡೆಯಲಿದೆ ಎಂದರು.

ಸೋಮದೇವರ ಹಟ್ಟಿ ತಾಂಡಾದ ಶ್ರೀ ಮಾತಾ ದುರ್ಗಾದೇವಿ ದೇವಸ್ಥಾನಕ್ಕೆ 300 ವರ್ಷಗಳ ಇತಿಹಾಸ ಇದೆ. ಪ್ರತಿ ವರ್ಷ ಮಣ್ಣೆತ್ತಿನ ಅಮವಾಸ್ಯೆ ಹಾಗೂ ದಸರಾ ಹಬ್ಬದ ನಮಮಿಯಂದ ದೊಡ್ಡ ಉತ್ಸವ ನಡೆಯುತ್ತದೆ ಎಂದು ತಿಳಿಸಿದರು.

ಸಮಾಜದ ಮುಖಂಡರಾದ ರಾಜ್‌ಪಾಲ್‌ ಚವ್ಹಾಣ, ಬಿ.ಬಿ.ಲಮಾಣಿ, ಡಿ.ಎಲ್‌.ಚವ್ಹಾಣ, ರಾಜು ಜಾಧವ್‌, ಅಪ್ಪು ರಾಠೋಡ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.