ಬುಧವಾರ, ಡಿಸೆಂಬರ್ 2, 2020
17 °C

ಶಮಿ ವೃಕ್ಷಕ್ಕೆ ಮಹಿಳೆಯರ ವಿಶೇಷ ಪೂಜೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದೇವರ ಹಿಪ್ಪರಗಿ: ನವರಾತ್ರಿ ಅಂಗವಾಗಿ ಕಳೆದ 9 ದಿನಗಳಿಂದ ಆಚರಿಸಿದ ಬನ್ನಿ ಮಹಾಕಾಳಿ ವೃಕ್ಷ ಪೂಜಾ ವೃತವನ್ನು ಮಹಿಳೆಯರು  ಸೋಮವಾರ ವಿಜಯದಶಮಿಯಂದು ಪೂಜೆ ಸಲ್ಲಿಸಿ ಸಂಪನ್ನಗೊಳಿಸಿದರು.

ಸತತ 9 ದಿನಗಳ ಕಾಲ ಪೂಜೆ ಸಲ್ಲಿಸಿ ಕೊನೆಯ ದಿನದಂದು ವೃಕ್ಷಕ್ಕೆ ಸೀರೆ ಉಡಿಸಿ ವಿಶೇಷ ಪೂಜೆ ಮಾಡಿ, ನೈವಿಧ್ಯ ನೀಡಿ ನಂತರ ವೃತ ಕೈಗೊಂಡ ಎಲ್ಲ ಮಹಿಳೆಯರಿಗೆ ಉಡಿ ತುಂಬುವುದರ ಮೂಲಕ ವೃತ ಸಂಪನ್ನಗೊಳಿಸಿದರು.

ಉಡಿ ತುಂಬುವ ಕಾರ್ಯಕ್ರಮದಲ್ಲಿ ಸುವರ್ಣಾ ನಾಶೀಮಠ, ಗಂಗಾಂಬಿಕಾ ಹಿರೇಮಠ, ಪೂಜಾ ಹಿರೇಮಠ, ಮೀನಾಕ್ಷಿ ಮಸಬಿನಾಳ, ಸರೋಜಾ ಪಾಟೀಲ, ಗಾಯತ್ರಿ ವಡ್ಡೋಡಗಿ, ರೇವತಿ ಬುದ್ನಿ, ಚಿತ್ರಾ ಪಾಟೀಲ, ರೇಖಾ ಪಾಟೀಲ, ದಾನಮ್ಮಾ ಹೂಗಾರ, ಮಂಜುಳಾ ಮಣೂರ, ಕಸ್ತೂರಿ ವಡ್ಡೋಡಗಿ, ರೇಣುಕಾ ತುಂಬಗಿ, ರೇಣುಕಾ ದಾನಗೊಂಡ , ನೀಲಮ್ಮಾ ಯಾಳಗಿ, ಪಾರ್ವತಿ ಇಂಡಿ, ಗೀತಾ ಇಂಡಿ, ಮಂಜುಳಾ ಬಬಲೇಶ್ವರ, ಸಾಧನಾ ಬಬಲೇಶ್ವರ, ಜ್ಯೋತಿ ಮೂಲಿಮನಿ, ಅಶ್ವಿನಿ ಕೋರಿ, ಸಂಗೀತಾ ಬಿರಾದಾರ, ರೇಣುಕಾ ಪ್ಯಾಟಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.