ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಭಾರತೀಯ ರಾಜಕಾರಣದ ಧೃವತಾರೆ ಉಪಾಧ್ಯಯ’

Last Updated 12 ಫೆಬ್ರುವರಿ 2021, 15:54 IST
ಅಕ್ಷರ ಗಾತ್ರ

ವಿಜಯಪುರ: ಪಂಡಿತ್‌ ದೀನ ದಯಾಳ ಉಪಾಧ್ಯಯರುಭಾರತದ ರಾಜಕಾರಣದಲ್ಲಿ ಕಂಡು ಬರುವ ಅಪರೂಪದ ರಾಜಕಾರಣಿ. ತಮಗಾಗಿ ಬಾಳದೇ ತಮ್ಮ ಜೀವನವನ್ನು ದೇಶಕ್ಕಾಗಿ ಮುಡಿಪಾಗಿಟ್ಟಿದ್ದರು ಎಂದು ಬಿಜೆಪಿ ಬೆಳಗಾವಿ ವಿಭಾಗದ ಸಂಘಟನಾ ಪ್ರಧಾನ ಕಾರ್ಯದರ್ಶಿ ಪ್ರಕಾಶ ಅಕ್ಕಲಕೋಟ ಹೇಳಿದರು.

ನಗರದ ರಾಜ ರಾಜೇಶ್ವರಿ ಕಲ್ಯಾಣಮಂಟಪದಲ್ಲಿ ಭಾರತೀಯ ಜನತಾ ಪಾರ್ಟಿ ವತಿಯಿಂದ ಪಂಡಿತ್‌ ದೀನ ದಯಾಳ ಉಪಾಧ್ಯಾಯರ ಪುಣ್ಯ ತಿಥಿ ಅಂಗವಾಗಿ ಏರ್ಪಡಿಸಿದ್ದ ಸಮರ್ಪಣಾ ದಿನಾಚರಣೆಯಲ್ಲಿ ಅವರು ಮಾತನಾಡಿದರು.

ಉಪಾಧ್ಯಾಯ ಅವರು ಸರಳ ಜೀವನ, ಉದಾತ್ತ ಚಿಂತನೆಗಳನ್ನು ಮೈಗೂಡಿಸಿಕೊಂಡಿದ್ದರು. ಏಕಾತ್ಮ ಮಾನವತಾವಾದ ತತ್ವದ ಪ್ರತಿಪಾದಕರಾಗಿ ರಾಷ್ಟ್ರಕಾರ್ಯ ವ್ಯಕ್ತಿಗತ ಸ್ವಾರ್ಥಕ್ಕಿಂತಲೂ ದೊಡ್ಡದು, ಮನುಷ್ಯ ತನಗಾಗಿ ಬಾಳದೇ ರಾಷ್ಟ್ರಕ್ಕಾಗಿ ಬಾಳಬೇಕು ಎಂದು ಭಾರತೀಯರ ಕರ್ತವ್ಯವನ್ನು ಜಾಗೃತಗೊಳಿಸಿದ ಚಿಂತಕರಾಗಿದ್ದಾರೆ ಎಂದರು.

ಪಂಡಿತ್ ದೀನ ದಯಾಳ ಉಪಾಧ್ಯಾಯ ಅವರು ಭಾರತದ ರಾಜಕಾರಣದಲ್ಲಿ ಕಂಡು ಬಂದ ಅಪರೂಪದ ಆದರ್ಶ ವ್ಯಕ್ತಿ. ಇವರು ಜನಸಂಘದ ಅಪ್ರತಿಮ ವಾಗ್ಮಿ, ಸಂಘಟನಾ ಚತುರರಾಗಿದ್ದರು ಎಂದು ಹೇಳಿದರು.

ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ನಗರ ಮಂಡಲ ಅಧ್ಯಕ್ಷ ಮಳುಗೌಡ ಪಾಟೀಲ, ಗೋಪಾಲ ಘಟಕಾಂಬಳೆ, ಶಿಲ್ಪಾ ಕುದರಗೊಂಡ, ಬಸವರಾಜ ಬಿರಾದಾರ, ಪಾಪುಸಿಂಗ್ ರಜಪೂತ, ಭೀಮಾಶಂಕರ ಹದನೂರ, ವಿಜಯ ಜೋಶಿ, ಛಾಯಾ ಮಸಿ, ಭರತ ಕೋಳಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT