ಬುಧವಾರ, ಮೇ 25, 2022
29 °C
ಪಾರದರ್ಶಕ, ನ್ಯಾಯಸಮ್ಮತ ಚುನಾವಣೆ ಆಯೋಜನೆ

ಡಿಸಿ, ಸಿಇಒ, ಎಸಿಗೆ  ರಾಜ್ಯ ಪ್ರಶಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ಜಿಲ್ಲೆಯಲ್ಲಿ ವಿವಿಧ ಚುನಾವಣೆಯನ್ನು ಪಾರದರ್ಶಕ, ನ್ಯಾಯಸಮ್ಮತವಾಗಿ ಮತ್ತು ಯಶಸ್ವಿಯಾಗಿ ನಡೆಸಿದ ಜಿಲ್ಲೆಯ ನಾಲ್ವರು ಅಧಿಕಾರಿಗಳಿಗೆ ರಾಜ್ಯ ಚುನಾವಣಾ ಆಯೋಗ ರಾಜ್ಯಮಟ್ಟದ ಪ್ರಶಸ್ತಿ ನೀಡಿ ಗೌರವಿಸಿದೆ.

ಬೆಂಗಳೂರಿನಲ್ಲಿ ರಾಜ್ಯ ಮುಖ್ಯ ಚುನಾವಣಾಧಿಕಾರಿಗಳ ಅಧ್ಯಕ್ಷತೆಯಲ್ಲಿಮಂಗಳವಾರ ನಡೆದ 12 ನೇ ರಾಷ್ಟ್ರೀಯ ಮತದಾರರ ದಿನಾಚರಣೆಯಲ್ಲಿ ಜಿಲ್ಲೆಯ ನಾಲ್ವರು ಹಿರಿಯ ಅಧಿಕಾರಿಗಳಿಗೆ ರಾಜ್ಯಪಾಲರು ವರ್ಚ್ಯುವೆಲ್‌ ಮೂಲಕ ಪ್ರಶಸ್ತಿ ನೀಡಿ ಸನ್ಮಾನಿಸಿದರು.

ಜಿಲ್ಲಾ ಚುನಾವಣಾಧಿಕಾರಿಯಾದ ಜಿಲ್ಲಾಧಿಕಾರಿ ಪಿ.ಸುನೀಲ್‌ಕುಮಾರ್ ಅವರಿಗೆ ‘ಬೆಸ್ಟ್ ಪರ್ಪೊರ್ಮನ್ಸ್‌ ಇನ್ ಎಲೆಕ್ಟ್ರೋಲ್ ಪ್ರಾಕ್ಟಿಸಿಸ್‍‘ ಪ್ರಶಸ್ತಿ, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋವಿಂದ ರೆಡ್ಡಿ ಅವರಿಗೆ ‘ಬೆಸ್ಟ್ ಪರ್ಪೊರ್ಮನ್ಸ್‌ ಇನ್ ಸ್ವೀಪ್‍’, ಇಂಡಿ ಉಪವಿಭಾಗಾಧಿಕಾರಿ ರಾಹುಲ್ ಸಿಂಧೆ ಅವರಿಗೆ ‘ಬೆಸ್ಟ್ ಪರ್ಪೊರ್ಮನ್ಸ್‌  ರಿರ್ಟನಿಂಗ್ ಆಫೀಸರ್’ ಹಾಗೂ ತಿಕೋಟಾ ಪಿಯು ಕಾಲೇಜಿನ ಎ.ಬಿ ಜತ್ತಿ ಅವರಿಗೆ ‘ಬೆಸ್ಟ್ ಪರ್ಪೊರ್ಮನ್ಸ್‌ ಎಲೆಕ್ಟ್ರೋಲ್ ಲಿಟ್ರೆಸಿ ಕ್ಲಬ್’ ಪ್ರಶಸ್ತಿ ಲಭಿಸಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.