ಸಿಂದಗಿ: ಪದವಿ ಪೂರ್ವ ಕಾಲೇಜುಗಳ ರಾಜ್ಯಮಟ್ಟದ ಕುಸ್ತಿ ಪಂದ್ಯಾವಳಿ ಸಿಂದಗಿಯಲ್ಲಿ ನಡೆಯಲಿರುವುದು ಹೆಮ್ಮೆಯ ವಿಷಯ. ಪಂದ್ಯಾವಳಿ ಯಶಸ್ಸಿಗಾಗಿ ಸಂಪೂರ್ಣ ಸಹಕಾರ ನೀಡುವೆ. ನಮ್ಮ ಶಿಕ್ಷಣ ಸಂಸ್ಥೆ ತಾಲ್ಲೂಕು ಶಿಕ್ಷಣ ಪ್ರಸಾರಕ ಮಂಡಳಿಯ ವತಿಯಿಂದ ಕುಸ್ತಿಪಟುಗಳಿಗೆ, ಜಿಲ್ಲೆಯ ಎಲ್ಲ ಪಿಯು ಕಾಲೇಜುಗಳ ಪ್ರಾಚಾರ್ಯರು, ಉಪನ್ಯಾಸಕರು ಹಾಗೂ ನಿರ್ಣಾಯಕರಿಗೆ ಒಟ್ಟು ಸಾವಿರಕ್ಕೂ ಅಧಿಕ ಜನರಿಗೆ ಮೂರು ದಿನಗಳು ಉಪಹಾರ, ಊಟದ ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆ ನೀಡಿದರು.

ಪಟ್ಟಣದ ಹೊರವಲಯ ಬ್ಯಾಕೋಡ ರಸ್ತೆಯಲ್ಲಿನ ಎಲೈಟ್ ವಿಜ್ಙಾನ ಪಿಯು ಕಾಲೇಜಿನಲ್ಲಿ ಶನಿವಾರ ಶಾಲಾ ಶಿಕ್ಷಣ(ಪದವಿ ಪೂರ್ವ) ಇಲಾಖೆ ಏರ್ಪಡಿಸಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ತಾಲ್ಲೂಕು ಆಡಳಿತ ತನು,ಮನ, ಧನದಿಂದ ಸಹಾಯ-ಸಹಕಾರ ನೀಡುವುದು. ಅಲ್ಲದೇ ಕ್ರೀಡಾ ಸ್ನೇಹಿತರ ಬಳಗದಿಂದಲೂ ಆರ್ಥಿಕ ಸಹಾಯ ಮಾಡಲಾಗುವುದು ಎಂದು ತಿಳಿಸಿದರು.

ವಿಜಯಪುರ ಜಿಲ್ಲಾ ಪಿಯು ಕಾಲೇಜುಗಳ ದೈಹಿಕ ಶಿಕ್ಷಣ ಉಪನ್ಯಾಸಕರ ಸಂಘದ ಅಧ್ಯಕ್ಷ ಶಾಂತು ದುರ್ಗಿ ಪ್ರಾಸ್ತಾವಿಕವಾಗಿ ಮಾತನಾಡಿ, ದೇಶಿ ಕ್ರೀಡೆ ಕುಸ್ತಿ ರಾಜ್ಯಮಟ್ಟದ ಪಂದ್ಯಾವಳಿ ಯಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳ ಪಿಯು ಕಾಲೇಜುಗಳಿಂದ 900 ಕುಸ್ತಿಪಟುಗಳು ಭಾಗವಹಿಸಲಿದ್ದಾರೆ ಎಂದು ಹೇಳಿದರು.

ಇಲಾಖೆಯ ಶಾಖಾಧಿಕಾರಿ ಪ್ರಕಾಶ ಗೊಂಗಡಿ ಮಾತನಾಡಿ, ಪಂದ್ಯಾವಳಿ ಪಟ್ಟಣದ ತಾಲ್ಲೂಕು ಶಿಕ್ಷಣ ಪ್ರಸಾರಕ ಮಂಡಳಿಯ ಎಚ್.ಜಿ.ಪಿಯು ಕಾಲೇಜು ಮೈದಾನದಲ್ಲಿ ಅಕ್ಟೋಬರ್ 23,24 ಮತ್ತು 25 ಮೂರು ದಿನಗಳ ಕಾಲ ನಡೆಯಲಿದೆ. ಜಿಲ್ಲಾ ಸಚಿವರು, ಶಿಕ್ಷಣ ಸಚಿವರನ್ನು ಆಹ್ವಾನಿಸಲಾಗುವುದು ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಉಪನಿರ್ದೇಶಕ ಚಂದ್ರಶೇಖರ ಹೊಸಮನಿ ಅವರು ಶಾಸಕ ಅಶೋಕ ಮನಗೂಳಿಯವರನ್ನು ಇಲಾಖೆಯ ವತಿಯಿಂದ ಸನ್ಮಾನಿಸಿದರು. ಎಲೈಟ್ ಸಂಸ್ಥೆಯ ಸಂಸ್ಥಾಪಕ ಎಂ.ಎಂ.ಅಸಂತಾಪುರ, ವಿಜಯಪುರ ಜಿಲ್ಲಾ ಪ್ರಾಚಾರ್ಯರ ಮಹಾಮಂಡಳ ಅಧ್ಯಕ್ಷ ಕೆ.ಆಯ್.ಉಪ್ಪಾರ, ಪಿಯು ಕಾಲೇಜು ಉಪನ್ಯಾಸಕರ ಸಂಘದ ಅಧ್ಯಕ್ಷ ಎಂ.ಡಿ.ಹೆಬ್ಬಿ, ಪ್ರಾಚಾರ್ಯರಾದ ಕೆ.ಜಿ.ಲಮಾಣಿ, ಎಲ್.ಆಯ್.ಹುನಶಿಕಟ್ಟಿ, ಬಿ.ಡಿ.ದೋಟಿಹಾಳ, ಬಿ.ಎಂ.ಸಿಂಗನಳ್ಳಿ, ಎ.ಆರ್.ಹೆಗ್ಗನದೊಡ್ಡಿ ಹಾಗೂ ಬಿ.ಎಸ್.ಗೌರಿ, ಪಿ.ಸಿ.ನಾಟೀಕಾರ, ಎಸ್.ಆರ್.ಮುತ್ತಗಿ ಮತ್ತು ನಿವೃತ್ತ ದೈಹಿಕ ಶಿಕ್ಷಣ ಉಪನ್ಯಾಸಕ ಕೆ.ಎಚ್.ಸೋಮಾಪುರ ವೇದಿಕೆಯಲ್ಲಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.