ಬುಧವಾರ, 9 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಒತ್ತಡದ ಸೇವೆಯಿಂದ‌ ನೌಕರರ ನೆಮ್ಮದಿ ಹಾಳು; ಸುರೇಶ ಶಡಶ್ಯಾಳ

Published : 26 ಸೆಪ್ಟೆಂಬರ್ 2024, 15:47 IST
Last Updated : 26 ಸೆಪ್ಟೆಂಬರ್ 2024, 15:47 IST
ಫಾಲೋ ಮಾಡಿ
Comments

ತಿಕೋಟಾ: (ಬಬಲೇಶ್ವರ) ಹಲವು ಒತ್ತಡಗಳ ಮಧ್ಯೆ ಸಾರ್ವಜನಿಕರ ಸೇವೆ ಮಾಡುವದರಿಂದ ನೌಕರರ ನೆಮ್ಮದಿ ಹಾಳಾಗುತ್ತಿದೆ ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಸುರೇಶ ಶಡಶ್ಯಾಳ ಹೇಳಿದರು.

ಬಬಲೇಶ್ವರ ಪಟ್ಟಣದ ತಹಶಿಲ್ದಾರ ಕಛೇರಿ ಎದುರು ಗುರುವಾರ ತಾಲ್ಲೂಕ ಗ್ರಾಮ ಆಡಳಿತ ಅಧಿಕಾರಿಗಳ ಸಂಘ ವತಿಯಿಂದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಹಮ್ಮಿಕೊಂಡ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಬೆಂಬಲ ಸೂಚಿಸಿ ಅವರು ಮಾತನಾಡಿದರು.

ಕಡಿಮೆ ಸೌಲಭ್ಯ ಒದಗಿಸಿ ಹೆಚ್ಚಿನ ಸೇವೆ ಮಾಡುವುದಾಗಿದೆ. ಎಲ್ಲ ಸೇವೆಗಳು ಆನಲೈನದಲ್ಲಿ ಮಾಡಬೇಕು. ಹಳ್ಳಿಗಳಲ್ಲಿ ನೆಟ್ ಸಮಸ್ಯೆಯಾಗುತ್ತದೆ. ಸೇವೆ ಮಾಡಲು ಬೇಕಾದ ಎಲ್ಲ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕು. ಗ್ರಾಮ ಆಡಳಿತ ಅಧಿಕಾರಿಗಳ ಸಮಸ್ಯೆ ರಾಜ್ಯಾಧ್ಯಕ್ಷ ಷಡಕ್ಷರಿ ಅವರ ಗಮನಕ್ಕೂ ಬಂದಿದ್ದು, ನಿಮ್ಮ ಸಮಸ್ಯೆಗೆ ಪರಿಹಾರ ಸಿಗುವವರೆಗೂ ನೀವು ಹಮ್ಮಿಕೊಳ್ಳುವ ತಾಲ್ಲೂಕ, ಜಿಲ್ಲಾ ಹಾಗೂ ರಾಜ್ಯ ಹಂತದ ಮುಷ್ಕರಕ್ಕೆ ಬೆಂಬಲ ಸೂಚಿಸಿ ನಿಮ್ಮ ಜೊತೆ ಇರುತ್ತೇವೆ ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ನೌಕರ ಸಂಘದ ಖಜಾಂಚಿ ಜುಬೇರ ಕೆರೂರ, ಜಿಲ್ಲಾ ಕಂದಾಯ ಇಲಾಖಾ ನೌಕರ ಸಂಘದ ಅಧ್ಯಕ್ಷ ಜಿ. ಎಸ್. ರಾಜಾಪುರ, ತಾಲ್ಲೂಕ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷೆ ನೀಲಾ ಇಂಗಳೆ, ರವೀಂದ್ರ ಹೂಗಾರ, ನೀಜು ಮೇಲಿನಕೇರಿ, ಉದಯಕುಮಾರ ಕೋಟ್ಯಾಳ,ತಾಲ್ಲೂಕ ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ಅಧ್ಯಕ್ಷ ರಾಘವೇಂದ್ರ ಭಜಂತ್ರಿ, ಪ್ರದಾನ ಕಾರ್ಯದರ್ಶಿ ವಿ.ಬಿ.ಅರಬಿ, ಖಜಾಂಚಿ ಸದಾಶಿವ ಯಕ್ಸಂಬಿ, ರಾಜಶೇಖರ ಬಂಡಿ, ತಾಲ್ಲೂಕಿನ ಎಲ್ಲ ಗ್ರಾಮ ಆಡಳಿತ ಅಧಿಕಾರಿಗಳು ಹಾಗೂ ತಾಲೂಕಿನ ಎಲ್ಲ ಗ್ರಾಮ ಸಹಾಯಕರು ಇದ್ದರು.

ಬಬಲೇಶ್ವರ ಪಟ್ಟಣದ ತಹಶಿಲ್ದಾರ್‌ ಕಚೇರಿ ಎದುರು ತಾಲ್ಲೂಕು ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ವತಿಯಿಂದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಹಮ್ಮಿಕೊಂಡ ಅನಿರ್ದಿಷ್ಟಾವಧಿ ಮುಷ್ಕರದಲ್ಲಿ ಘೋಷಣೆ ಕೂಗುತ್ತಾ ಬೇಡಿಕೆ ಇಡೇರಿಸುವಂತೆ ಒತ್ತಾಯಿಸಿದರು.
ಬಬಲೇಶ್ವರ ಪಟ್ಟಣದ ತಹಶಿಲ್ದಾರ್‌ ಕಚೇರಿ ಎದುರು ತಾಲ್ಲೂಕು ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ವತಿಯಿಂದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಹಮ್ಮಿಕೊಂಡ ಅನಿರ್ದಿಷ್ಟಾವಧಿ ಮುಷ್ಕರದಲ್ಲಿ ಘೋಷಣೆ ಕೂಗುತ್ತಾ ಬೇಡಿಕೆ ಇಡೇರಿಸುವಂತೆ ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT