ಶುಕ್ರವಾರ, ಅಕ್ಟೋಬರ್ 30, 2020
26 °C

ವಿದ್ಯಾರ್ಥಿ ಶೈಕ್ಷಣಿಕ ದತ್ತು ಪಡೆದ ಜೆಸಿಐ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗೋಕಾಕ: ನಾಗನೂರಿನ ಸರ್ಕಾರಿ ಪಿಯು ಕಾಲೇಜಿನಲ್ಲಿ ವ್ಯಾಸಂಗ ಮಾಡಿ ದ್ವಿತೀಯ ಪಿಯು (ಕಲಾ ವಿಭಾಗ) ವಾರ್ಷಿಕ ಪರೀಕ್ಷೆಯಲ್ಲಿ ಶೇ 90ರಷ್ಟು ಅಂಕಗಳನ್ನು ಪಡೆದಿರುವ ಮೂಡಲಗಿ ತಾಲ್ಲೂಕು ನಾಗನೂರಿನ ಧರೆಪ್ಪ ಸುಳನವರ ಅವರನ್ನು ಇಲ್ಲಿನ ಜೆಸಿಐ ಕ್ಲಬ್ ಶೈಕ್ಷಣಿಕ ದತ್ತು ಪಡೆದಿದೆ.

ಬಿಇಒ ಕಚೇರಿಯಲ್ಲಿ ಈ ಘೋಷಣೆ ಮಾಡಲಾಯಿತು. ಬಿಇಒ ಜಿ.ಬಿ. ಬಳಿಗಾರ ಅವರ ಸಲಹೆಯಂತೆ ಸಂಸ್ಥೆಯು ಸಹಾಯಹಸ್ತ ಚಾಚಿದೆ ಎಂದು ತಿಳಿಸಲಾಯಿತು. ವಿದ್ಯಾರ್ಥಿಯ ವ್ಯಾಸಂಗಕ್ಕೆ ತಗಲುವ ಶೈಕ್ಷಣಿಕ ವೆಚ್ಚ ಭರಿಸುವುದಾಗಿ ಪದಾಧಿಕಾರಿಗಳು ವಾಗ್ದಾನ ಮಾಡಿದರು.

ವಲಯ ಸಂಯೋಜಕ ವಿಷ್ಣು ಲಾತೂರ, ‘ವಿದ್ಯಾರ್ಥಿ ಅಪೇಕ್ಷಿಸುವ ಕಾಲೇಜಿಗೆ ಪ್ರವೇಶ ಕೊಡಿಸಲಾಗುವುದು. ಸ್ನಾತಕೋತ್ತರ ಅಧ್ಯಯನದತ್ತ ಒಲವು ಹೊಂದಿದ್ದರೂ ಅದಕ್ಕೂ ನೆರವಾಗುತ್ತೇವೆ’ ಎಂದು ತಿಳಿಸಿದರು.

‘ಸಂಸ್ಥೆಯು ಮುಂದೆಯೂ ಇಂತಹ ಜನಪರ ಕಾರ್ಯಗಳನ್ನು ಬೆಂಬಲಿಸಲಿ’ ಎಂದು ಬಿಇಒ ಬಳಿಗಾರ ಆಶಿಸಿದರು.

ಅಧ್ಯಕ್ಷ ರಜನಿಕಾಂತ ಮಾಳೋದೆ, ರಾಚಪ್ಪ ಅಮ್ಮಣಗಿ, ಶೇಖರ ಉಳ್ಳೇಗಡ್ಡಿ, ಮೀನಾಕ್ಷಿ ಸವದಿ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.