ತಾಳಿಕೋಟೆ: ತಾಲ್ಲೂಕಿನಾದ್ಯಂತ ಒಂದು ವಾರದಿಂದ ಮಳೆಯ ಅರ್ಭಟ ಹಾಗೂ ಡೋಣಿ ನದಿ ಜಲಾನಯನ ಪ್ರದೇಶದಲ್ಲಿ ಸುರಿಯುತ್ತಿರುವ ಮಳೆಯಿಂದ ಡೋಣಿ ನದಿಗೆ ಬಂದ ಪ್ರವಾಹವು ತನ್ನ ಎಡಬಲ ದಂಡೆಗಳ ಜಮೀನುಗಳಲ್ಲಿ ನುಗ್ಗಿದ್ದರಿಂದ ಅಪಾರ ಪ್ರಮಾಣದ ಬೆಳೆ ನಾಶಕ್ಕೆ ಕಾರಣವಾಗಿದೆ.

’ಡೋಣಿ ಹರಿದರೆ ನಾಡೆಲ್ಲ ಕಾಳು’ ಎನ್ನುವ ನಾಣ್ಣುಡಿಗೆ ಅಪವಾದವೆಂಬಂತೆ ಡೋಣಿ ನದಿ ನುಗ್ಗಿದ ಜಮೀನುಗಳಲ್ಲಿ ಬೆಳೆ ಹಾಳು ಎನ್ನುವ ಸ್ಥಿತಿಗೆ ಬಂದಿದೆ ಎಂಬುದು ರೈತರ ಆರೋಪವಾಗಿದೆ.

ತಾಳಿಕೋಟೆ ತಾಲ್ಲೂಕು ವ್ಯಾಪ್ತಿಯ ನದಿ ತೀರದ ಎಡ ಬಲಗಳಲ್ಲಿರುವ ನಾಗೂರ, ಹರನಾಳ, ಕಲ್ಲದೇವನಹಳ್ಳಿ, ತಾಳಿಕೋಟೆ, ಗುತ್ತಿಹಾಳ, ಬೊಮ್ಮನಹಳ್ಳಿ, ಬೋಳವಾಡ, ತುಂಬಗಿ, ಸಾಸನೂರ ಮೊದಲಾದ ಗ್ರಾಮಗಳ ಜಮೀನುಗಳಲ್ಲಿ ನದಿ ನೀರು ಒತ್ತರಿಸಿ ನಿಂತಿದೆ. ಇದರಿಂದ ಕಣ್ಣಿಗೆ ಹಬ್ಬವನ್ನುಂಟು ಮಾಡುತ್ತಿದ್ದ ಹಸಿರು ಬೆಳೆ ಬಾಡಿ ಮುದುಡಿ ನಿಂತಿದೆ. ತೊಗರಿ ಬೆಳೆಯಂತೂ ಸೆಟೆರೋಗ ತಗುಲಿ ಸಂಪೂರ್ಣ ನಾಶವಾಗಿದೆ. ಹತ್ತಿ ಬೆಳೆಯೂ ಹಾಳಾಗಿದೆ.

ಇದರ ಜೊತೆಗೆ ಡೋಣಿ ನದಿ ತಂದು ಹಾಕಿರುವ ಹೂಳಿನಲ್ಲಿ ರೈತರು ನಡೆದಾಡುವ ಸ್ಥಿತಿಯೂ ಇಲ್ಲದಂತಹ ವಾತಾವರಣ ನಿರ್ಮಾಣವಾಗಿದೆ ಎನ್ನುತ್ತಾರೆ ನಾಗೂರ ರೈತ ಶಿವರಾಯ ಗುಂಡಕನಾಳ.

’ಹೆಚ್ಚು ಕಡಿಮೆ ಸಾವಿರಾರು ಎಕರೆ ಜಮೀನುಗಳಲ್ಲಿರುವ ಬೆಳೆ ಸಂಪೂರ್ಣ ನಾಶವಾಗಿದೆ. ಡೋಣಿ ನದಿ ಪ್ರವಾಹ ಹೆಚ್ಚುತ್ತಲಿದೆ ಸದ್ಯಕ್ಕೆ 1730 ಹೆಕ್ಟೇರ್ ಬೆಳೆ ನಾಶವಾಗಿರುವ ಬಗ್ಗೆ ಪ್ರಾಥಮಿಕ ಮಾಹಿತಿಯನ್ನು ತಾಲ್ಲೂಕು ಆಡಳಿತದ ಮೂಲಕ ಜಿಲ್ಲಾಡಳಿತಕ್ಕೆ ಸಲ್ಲಿಸಲಾಗಿದೆ. ಇದರಲ್ಲಿ 910 ಹೆಕ್ಟೇರ್ ತೊಗರಿ ಬೆಳೆ, 780 ಹೆಕ್ಟೇರ್ ಹತ್ತಿ ಬೆಳೆ ಇದೆ. ಇದು ಡೋಣಿ ನದಿಯಿಂದ ಆದ ಹಾನಿಯಾಗಿದೆ.. ಮಳೆಯಿಂದ ಆದ ಹಾನಿಯ ಸಮೀಕ್ಷೆ ನಡೆಯಬೇಕಿದೆ ಓರಿಯಂಟಲ್ ಇನ್ಸೂರನ್ಸ ಕಂಪನಿಗೆ 616 ರೈತರು ಟೋಲ್ ನಂಬರ್ 18004256678 ಬಳಸಿ ದೂರು ಸಲ್ಲಿಸಿದ್ದಾರೆ’ ಎಂದು ಕೃಷಿ ಅಧಿಕಾರಿ ಮಹೇಶ ಜೋಶಿ ಮಾಹಿತಿ ಹಂಚಿಕೊಂಡರು.

’ಬೆಳೆ ಪರಿಹಾರವನ್ನು ಕಂದಾಯ, ಕೃಷಿ ಮತ್ತು ತೋಟಗಾರಿಕೆ ಇಲಾಖೆಗಳ ಮೂಲಕ ಜಂಟಿ ಸಮೀಕ್ಷೆ ನಡೆಸಿ ಅರ್ಹ ಫಲಾನುಭವಿಗೆ ಮೂಲಕ ಜಿಲ್ಲಾಡಳಿತದ ಮೂಲಕ ಪರಿಹಾರ ಒದಗಿಸಲಾಗುವುದು’ ಎಂದು ತಹಶೀಲ್ದಾರ ಡಾ. ವಿನಯಾ ಹೂಗಾರ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.