ತಾಳಿಕೋಟೆ: ಪಟ್ಟಣ ಸೇರಿದಂತೆ ತಾಲ್ಲೂಕಿನಾದ್ಯಂತ ಮಂಗಳವಾರ ಕಾರ ಹುಣ್ಣಿಮೆ ಸಂಭ್ರಮ ಮನೆ ಮಾಡಿತ್ತು. ಮುಂಗಾರು ಆರಂಭದ ಮೊದಲ ಹಬ್ಬವೇ ಕಾರಹುಣ್ಣಿಮೆ ಆಗಿರುವುದರಿಂದ ರೈತರು ತಮ್ಮ ಕೃಷಿಕಾರ್ಯದ ಜೊತೆಗಾರ ಬಸವಣ್ಣನಿಗೆ ವಿಶೇಷ ಪೂಜೆ, ಗೌರವ ತೋರುವ ಹಬ್ಬವಿದು.

ಬೆಳಿಗ್ಗೆಯೇ ರೈತರು ಡೋಣಿ ನದಿ, ಹಳ್ಳ ಸೇರಿದಂತೆ ವಿವಿಧೆಡೆ ತಮ್ಮ ಎತ್ತುಗಳನ್ನು ಕರೆದೊಯ್ದು ತೊಳೆದರು. ವಿಧವಿಧವಾದ ಗುಲಾಲು ಹಚ್ಚಿದರು. ಕೊಂಬಿಗೆ ಬಣ್ಣ, ಕೊಮ್ಮಣಸು, ಹಣೆಗೆ ಬಾಸಿಂಗ ಕಟ್ಟಿದರು. ಕೊರಳಲ್ಲಿ ಗಂಟೆ ಕಟ್ಟಿ, ಮಾಲೆ ಹಾಕಿ ಮನೆಯವರೆಲ್ಲ ಸೇರಿ ಭಕ್ತಿಯ ಪೂಜೆ ಸಲ್ಲಿಸಿದರು. ಹೋಳಿಗೆ ಮಾಡಿ ಹಬ್ಬದೂಟ ಸವಿದರು. ನಂತರ ಊರವರ ಜೊತೆಗೆ ಸೇರಿ ತಮ್ಮ ಎತ್ತುಗಳನ್ನು ಮೆರವಣಿಗೆಗಾಗಿ ಕರೆದುಕೊಂಡು ಹೋದರು. ಎತ್ತುಗಳನ್ನೆಲ್ಲ ಜೊತೆ ಮಾಡಿಕೊಂಡು ಓಡಿಸುತ್ತ ಕರಿ ಹರಿಯುವ ಸಂಭ್ರಮದಲ್ಲಿ ಪಾಲ್ಗೊಂಡರು.

ಬ.ಸಾಲವಾಡಗಿ ಗ್ರಾಮ: ತಾಲ್ಲೂಕಿನ ಬ.ಸಾಲವಾಡಗಿ ಗ್ರಾಮದಲ್ಲಿ ಸಿದ್ಧನಗೌಡ ನಿಂಗನಗೌಡ ಅನಂತರಡ್ಡಿ ಅವರ ಮನೆಯಲ್ಲಿ ಪುಟ್ಟಿಗಳಲ್ಲಿ ಇಡಲಾಗಿದ್ದ ವಿವಿಧ ಧಾನ್ಯಗಳಲ್ಲಿ ಮುಂಕಟ (ಮುಂದೆ) ಬಂದ ಎತ್ತು- ಜೋಳ, ಸಜ್ಜಿ, ಗೋದಿ, ಕಡಲಿ, ಹತ್ತಿ ತಿಂದು ಸ್ವಲ್ಪ ನೀರು ಕುಡಿದರೆ, ಹಿಂಕಟ ಎತ್ತು ನೀರು ಜಾಸ್ತಿ ಕುಡಿಯಿತು. ಇದರರ್ಥ ಮುಂಗಾರಿನಲ್ಲಿ ಜೋಳ, ಸಜ್ಜಿ, ಗೋದಿ, ಕಡಲಿ, ಹತ್ತಿ ಚೆನ್ನಾಗಿ ಬರುತ್ತವೆ ಎಂದೂ ನಂಬಿಕೆ ಇದೆ ಎಂದು ಗ್ರಾಮದ ರೈತರು ತಿಳಿಸಿದರು.

ಕರಿ ಹರಿಯುವಾಗ ಐದು ಎತ್ತುಗಳಲ್ಲಿ ಬಿಳಿ ಎತ್ತು ಮುಂದೆ ಬಂದಿದ್ದರಿಂದ ಬಿಳಿ ಬಣ್ಣದಲ್ಲಿನ ಧಾನ್ಯಗಳು ಚೆನ್ನಾಗಿ ಆಗುತ್ತವೆ ಎಂದು ತಿಳಿಸಿದರು. ನಂತರ ಗ್ರಾಮದ ಎತ್ತುಗಳೆಲ್ಲ ಅಲ್ಲಮಪ್ರಭು ದೇವಸ್ಥಾನಕ್ಕೆ ಬಂದು ಪ್ರದಕ್ಷಿಣ ಹಾಕಿ ಹೋದವು.

ಸಿಂದಗಿ ವರದಿ: ರೈತರ ಹಬ್ಬ ಕಾರಹುಣ್ಣಿಮೆ ಸಿಂದಗಿಯಲ್ಲಿ ಸಂಭ್ರಮದಿಂದ ಆಚರಿಸಲಾಯಿತು. ರೈತರು ಎತ್ತುಗಳಿಗೆ ಮೈ ತೊಳೆದು ಮೈಗೆ ಬಣ್ಣ ಹಚ್ಚಿ ಝುಲಾ ಕಟ್ಟಿ ಶೃಂಗರಿಸಿದ್ದರು. ಪಟ್ಟಣದ ಅಗಸಿಯಲ್ಲಿ ಸಂಜೆ ಎತ್ತುಗಳ ಕರಿ ಹರಿಯುವ ಕಾರ್ಯಕ್ರಮ ನಡೆಯಿತು.

ಬಿಳಿ ಎತ್ತು, ಕಪ್ಪುಮಿಶ್ರಿತ ಬಿಳಿ ಬಣ್ಣದ ಎತ್ತಿನ ಮಧ್ಯೆ ಕರಿ ಹರಿಯುವ ಸ್ಪರ್ಧೆ ಯಲ್ಲಿ ಬಿಳಿ ಎತ್ತು ಕರಿ ಹರಿಯಿತು.
ಫಲ ಭರಿತ ಜೋಳ ಬೆಳೆ ಫಸಲು ಬಿಳಿ ಎತ್ತಿನ ಸಂದೇಶವಾಗಿದೆ. ಒಟ್ಟಾರೆ ಮಳೆ-ಬೆಳೆ ಹಿನ್ನಡೆ ಎಂದು ಎಂದು ರೈತರು ಅಭಿಪ್ರಾಯಪಟ್ಟರು.

ಸಂಪ್ರದಾಯದಂತೆ ಕಾರಹುಣ್ಣಿಮೆ ಕರಿ ಹರಿಯುವ ಕಾರ್ಯಕ್ರಮದಲ್ಲಿ ಊರಿನ ಗೌಡರು ಶಂಕರಗೌಡ ಪಾಟೀಲ, ತಲಾಟಿ ರಾಮನಗೌಡ ರಾಂಪೂರ, ವಾಲೀಕಾರ ಸಂತೋಷ, ಪುರಸಭೆ ಸದಸ್ಯ ರಾಜಣ್ಣ ನಾರಾಯಣಕರ ಇದ್ದರು.

ನಾಲತವಾಡ ವರದಿ: ಗ್ರಾಮೀಣ ಸೊಗಡಿನ ಕಾರ ಹುಣ್ಣಿಮೆಯನ್ನು ಹೋಬಳಿಯ ವಿವಿಧ ಗ್ರಾಮಗಳು ಸೇರಿದಂತೆ ಪಟ್ಟಣದ ರೈತರು ಸಂಭ್ರಮದಿಂದ ಆಚರಿಸಿದರು.

ಹಬ್ಬದ ಅಂಗವಾಗಿ ಪಟ್ಟಣ ಹಾಗೂ ಹಳ್ಳಿಗಳ ವಿವಿಧೆಡೆ ಎತ್ತುಗಳ ಕರಿ ಹರಿಯಲಾಯಿತು. ಆ ಮೂಲಕ ಕಡು ಬೇಸಿಗೆ ಕಳೆದು ಮುಂಗಾರು ಸ್ವಾಗತಿಸಲು ಈ ಹಬ್ಬ ಸಾಕ್ಷಿಯಾಗಿತ್ತು. ರೈತರು ತಮ್ಮ ಎತ್ತು ಹಾಗೂ ಹೋರಿಗಳ ಮೈ ತೊಳೆದು ಆಕರ್ಷಕವಾಗಿ ಶೃಂಗರಿಸಿದ್ದರು. ಎತ್ತು, ಹೋರಿಗಳ ಕೊಂಬುಗಳಿಗೆ ಬಣ್ಣ ಬಳಿಯಲಾಗಿತ್ತು. ಜೊತೆಗೆ ಮೈಮೇಲೆ ವಿಶೇಷವಾದ ಚಿತ್ತಾರ ಬಿಡಿಸಿ ಮೆರವಣಿಗೆ ಮಾಡಿ ಗಮನ ಸೆಳೆದರು.

ಮಕ್ಕಳ ಸಂಭ್ರಮ: ಪಟ್ಟಣದ ಶಂಕರ ಭಾರತಿ ಪ್ರಾಥಮಿಕ ಶಾಲೆಯ ಮಕ್ಕಳು ಪ್ರಗತಿಶೀಲ ರೈತ ಗೋವಿಂದರೆಡ್ಡಿ ತಾತರೆಡ್ಡಿಯವರ ಎರಡು ಜೊತೆ ಎತ್ತುಗಳಿಗೆ ಶೃಂಗರಿಸಿ ಪೂಜಿಸಿ, ಮೇವನ್ನು ತಿನ್ನಿಸಿ ಶಾಲಾ ಆವರಣದಲ್ಲಿ ಕರಿ ಹರಿಯುವ ಮೂಲಕ ಸಂಭ್ರಮಿಸಿದರು.

ಬಸವನಬಾಗೇವಾಡಿ ವರದಿ: ಪಟ್ಟಣ ಸೇರಿದಂತೆ ತಾಲ್ಲೂಕಿನ ವಿವಿಧೆಡೆ ಮಂಗಳವಾರ ಸಂಪ್ರದಾಯದಂತೆ ಎತ್ತುಗಳ ಕರಿಹರಿದು ಸಂಭ್ರಮದ ಕಾರಹುಣ್ಣಿಮೆ ಆಚರಿಸಲಾಯಿತು.

ರೈತರು ಬೆಳಗ್ಗೆ ತಮ್ಮ ಎತ್ತುಗಳು ಸೇರಿದಂತೆ ದನಕರುಗಳ ಮೈ ತೊಳೆದು ವಿವಿಧ ಬಣ್ಣಗಳಿಂದ ಗುಲಾ ಹಚ್ಚಿ ಅಲಂಕರಿಸಿ ಕೊಂಬುಗಳಿಗೆ ಬಣ್ಣ ಹಚ್ಚಿ, ರಿಬ್ಬನ್, ಗೊಂಡೆ ಕಟ್ಟಿದರು. ಎತ್ತು ಹಾಗೂ ಹೋರಿಗಳ ಕೊರಳಿಗೆ ಗೆಜ್ಜೆ ಸರ, ಹೊಸ ಮೂಗುದಾರ, ಹಣೆಪಟ್ಟಿ, ಕಾಲಿಗೆ ಕಪ್ಪು ದಾರ ಕಟ್ಟಿ ಶೃಂಗರಿಸಿ ನಂತರ ಕುಟುಂಬ ಸದಸ್ಯರೊಂದಿಗೆ ಪೂಜೆ ಸಲ್ಲಿಸಿದರು.

ಕೊಲ್ಹಾರ ರಸ್ತೆಯಲ್ಲಿರುವ ಗಣಪತಿ ವೃತ್ತ ಸಂಪ್ರದಾಯದಂತೆ ಎತ್ತುಗಳನ್ನು ಕರೆತಂದು ಕರಿ ಹರಿದರೆ, ವಿಜಯಪುರ ರಸ್ತೆಯಲ್ಲಿನ ಗುರ್ಜಿ ಕಟ್ಟಿ, ಕೆರೆಯ ಮುಂಭಾಗ ಸಂಗೊಳ್ಳಿರಾಯಣ್ಣ ವೃತ್ತದಲ್ಲಿ ರೈತರು ಕರುಗಳನ್ನು ರಸ್ತೆಯಲ್ಲಿ ಕರೆದುತಂದು ಕರಿ ಹರಿದರು. ಇದೇ ವೇಳೆಯಲ್ಲಿ ಮೇಲೆತ್ತರಕ್ಕೆ ತೂಗು ಹಾಕಿದ ಬೇವಿನ ತಪ್ಪಲು, ಕೊಬ್ಬರಿ ಬಟ್ಟಲನ್ನು ಯುವಕರು ಹಿಡಿದುಕೊಳ್ಳಲು ಯತ್ನಿಸುತ್ತಿರುವುದು ಗಮನ ಸೆಳೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.