ವಿಜಯಪುರ: ದೇಶದಾದ್ಯಂತ ಇಂಡಿಯಾ ಟುಡೆ ವಾರಪತ್ರಿಕೆ ಮತ್ತು ಎಂಡಿಆರ್ಎ ಸಂಸ್ಥೆ ಜಂಟಿಯಾಗಿ ನಡೆಸಿದ ವೈದ್ಯಕೀಯ ವಿವಿಗಳ ಸಮೀಕ್ಷೆಯಲ್ಲಿ ಅತ್ಯುತ್ತಮ ವಿವಿ ಪಟ್ಟಿಯಲ್ಲಿ ದೇಶದಲ್ಲಿಯೇ ವಿಜಯಪುರದ ಬಿಎಲ್ಡಿಇ ಡೀಮ್ಡ್ ವಿವಿ 13ನೇ ಸ್ಥಾನ ಪಡೆದಿದೆ.

ದೆಹಲಿಯ ಏಮ್ಸ್ ಪ್ರಥಮ, ಪಾಂಡಿಚೇರಿಯ ಜಿಪ್ಮೇರ್ ವಿವಿ ದ್ವಿತೀಯ, ಲಕ್ನೋದ ಕಿಂಗ್ ಜಾರ್ಜ್ ತೃತೀಯ ಸ್ಥಾನ ಹಾಗೂ ಬೆಂಗಳೂರಿನ ನಿಮ್ಹಾನ್ಸ್ ನಾಲ್ಕನೇ ಸ್ಥಾನ ಪಡೆದುಕೊಂಡಿವೆ.

ವೈದ್ಯಕೀಯ ಕ್ಷೇತ್ರದಲ್ಲಿನ ಸಂಶೋಧನೆಗಳು, ವಿಶ್ವವಿದ್ಯಾಲಯ ಅಗತ್ಯ ಮೂಲ ಸೌಕರ್ಯ, ಸುಸಜ್ಜಿತ ಆಸ್ಪತ್ರೆ, ವಿದ್ಯಾರ್ಥಿಗಳ ಕಲಿಕೆ ಕ್ರಮ, ನುರಿತ ಬೋಧಕರು, ರಾಷ್ಟ್ರೀಯ, ಅಂತರರಾಷ್ಟ್ರೀಯ ಎಲ್ಲ ಮಾನದಂಡಗಳನ್ನು ಅಳವಡಿಸಿಕೊಂಡಿರುವುದು ಈ ಸಾಧನೆಗೆ ಕಾರಣವಾಗಿದೆ ಎಂದು ಉಪಕುಲಪತಿ ಡಾ.ಆರ್.ಎಸ್. ಮುಧೋಳ ಹರ್ಷ ವ್ಯಕ್ತಪಡಿಸಿದ್ದಾರೆ.

ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಸಚಿವ, ಬಿಎಲ್ಡಿಇ ಡೀಮ್ಡ್ ವಿವಿ ಕುಲಾಧಿಪತಿ ಎಂ.ಬಿ. ಪಾಟೀಲ, ಆಡಳಿತ ಮಂಡಳಿ ಸದಸ್ಯರು ಹರ್ಷ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.