ಇಂಡಿ: ತಾಲ್ಲೂಕಿನಲ್ಲಿ ಅನಧಿಕೃತವಾಗಿ ಇಟ್ಟಿಗೆ ತಯಾರಿಕೆಯಲ್ಲಿ ಅನೇಕರು ನಿರಂತರವಾಗಿದ್ದು ವ್ಯಾಪಕವಾಗಿದೆ. ಇದಕ್ಕೆ ಕಡಿವಾಣ ಹಾಕಬೇಕಾಗಿದ್ದ ಸಂಬಂಧಿಸಿದ ಇಲಾಖೆಯವರು ಕ್ರಮ ಕೈಗೊಳ್ಳದಿರುವ ಬಗ್ಗೆ ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ.

ಸುಮಾರು 10 ವರ್ಷಗಳಿಂದ ಇಂಡಿ ಪಟ್ಟಣ ಸುತ್ತಲಿನ ಪ್ರದೇಶದಲ್ಲಿ ಹಾಗೂ ತಾಲ್ಲೂಕಿನ ಬಹುತೇಕ ಗ್ರಾಮಿಣ ಪ್ರದೇಶದಲ್ಲಿಯೂ ಕೂಡಾ ಸಾಕಷ್ಟು ಇಟ್ಟಿಗೆ ತಯಾರಿಕ್ಕೆ ನಡೆಯುತ್ತಿದ್ದು, ಇವುಗಳನ್ನು ಅನಧಿಕೃತವಾಗಿ ತಯಾರಿಸುವುದರಿಂದ ಪ್ರತಿ ವರ್ಷ ಸರ್ಕಾರಕ್ಕೆ ಬರುವ ಅಪಾರ ಪ್ರಮಾಣದ ಆದಾಯ ಬರುತ್ತಿಲ್ಲ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಗಮನ ನೀಡುತ್ತಿಲ್ಲದಿರುವುದು ಸೋಜಿಗದ ಸಂಗತಿಯೇ ಸರಿ.

ಕೃಷಿಗಾಗಿ ಬಳಸಬೇಕಿದ್ದ ನೂರಾರು ಹೆಕ್ಟರ್ ಪ್ರದೇಶದಲ್ಲಿ ನೂರಾರು ಇಟ್ಟಿಗೆ ಭಟ್ಟಿಗಳು ತಲೆ ಎತ್ತಿವೆ. ಇದಕ್ಕೆ ಅಗತ್ಯವಿರುವ ಮಣ್ಣನ್ನು ಇಂಡಿ ಪಟ್ಟಣಕ್ಕೆ ಸಮೀಪದಲ್ಲಿರುವ ಭೀಮಾ ನದಿಯ ದಂಡೆಗೆ ಇರುವ ಫಲವತ್ತಾದ ಕೃಷಿ ಜಮೀನಿನಲ್ಲಿಯ ಮಣ್ಣನ್ನು ರೈತರ ಮನ ಒಲಿಸಿ ಕಡಿಮೆ ದರದಲ್ಲಿ ಖರೀದಿ ಮಾಡುತ್ತಿದ್ದಾರೆ. ಇದರಿಂದ ಫಲವತ್ತಾದ ಕೃಷಿ ಭೂಮಿ ಬರಡಾಗುತ್ತಿದೆ. ಇದಕ್ಕೆ ಕಡಿವಾಣವೇ ಇಲ್ಲ.

ಇಂಡಿ ಪಟ್ಟಣದ ಸುತ್ತಮುತ್ತಲಿನ ಪ್ರದೇಶದಲ್ಲಿ ಸಿದ್ದವಾಗುವ ಇಟ್ಟಿಗೆಗಳು ಅಕ್ರಮವಾಗಿ ದೂರದ ಕಲಬುರಗಿ, ಶಹಾಪೂರ, ಸುರಪುರ, ವಿಜಯಪುರ, ಬೀದರ್ ಅಲ್ಲದೇ, ಪಕ್ಕದ ಸೋಲಾಪುರ ಜಿಲ್ಲೆಯ ಟಾಕಳಿ, ಮಂದರೂಪ, ತೇರಾಮೈಲ್, ಔರಾದ, ಸೋಲಾಪೂರ ಮುಂತಾದ ಕಡೆ ರಫ್ತಾಗುತ್ತದೆ.

ರೈತರು ತಮ್ಮ ಕೃಷಿಭೂಮಿಯಲ್ಲಿ ಬೇಸಿಗೆ ಬೆಳೆ ಬೆಳೆಯುವ ಬದಲಾಗಿ ಅನಧಿಕೃತವಾಗಿ ಇಟ್ಟಿಗೆ ತಯಾರಿಕರಿಗೆ ಬಾಡಿಗೆ ನೀಡುತ್ತಿದ್ದಾರೆ. ಇದೇ ರೀತಿ ಮುಂದುವರೆದರೆ ಭೀಮಾ ನದಿಯ ಸುತ್ತಮುತ್ತಲಿನ ಕೃಷಿ ಭೂಮಿ ಕೆಲವೇ ವರ್ಷಗಳಲ್ಲಿ ಬರಡಾಗುವ ಹಂತದಲ್ಲಿದೆ ಎಂದು ಸಾರ್ವಜನಿಕರು ದೂರಿದ್ದಾರೆ.

ಸ್ಥಳೀಯ ಗ್ರಾಮ ಪಂಚಾಯಿತಿಯವರು ಸಹ ಈ ಪ್ರಕರಣದ ಬಗ್ಗೆ ಕಂಡೂ ಕಾಣದಂತೆ ವರ್ತಿಸುತ್ತಿದ್ದಾರೆ. ಇಟ್ಟಂಗಿ ತಯಾರಿಕೆಗಾಗಿ ಕೆಲವು ಕಡೆ ಭೂಮಿಯನ್ನು ಅತಿಕ್ರಮಣ ಮಾಡಿರುವ ಬಗ್ಗೆ ಸಾರ್ವಜನಿಕರ ದೂರಿದ್ದಾರೆ. ಸ್ವಂತ ಮನೆ ನಿರ್ಮಾಣಕ್ಕೆಂದು ಇಟ್ಟಂಗಿ ತಯಾರಿಸುತ್ತೇವೆ ಎಂದು ಕಂದಾಯ ಇಲಾಖೆಗೆ ತಪ್ಪು ಮಾಹಿತಿ ನೀಡಿ ಅನಧಿಕೃತವಾಗಿ ಬೃಹತ್ ಪ್ರಮಾಣದಲ್ಲಿ ಇಟ್ಟಿಗೆ ತಯಾರಿಸಿ, ಮಾರಾಟ ಮಾಡುತ್ತಿದ್ದಾರೆ.

ಈ ಭಾಗದಲ್ಲಿ ಇಟ್ಟಂಗಿ ಭಟ್ಟಿಗಳಿಂದ ವಾಯುಮಾಲಿನ್ಯ ಹೆಚ್ಚಾಗಿದೆ. ಯಾವುದೇ ಇಟ್ಟಂಗಿ ಭಟ್ಟಿ ಪಟ್ಟಣ ಹಾಗೂ ಗ್ರಾಮೀಣ ಪ್ರದೇಶಗಳಿಂದ ಸುಮಾರು 5 ಕಿ.ಮೀ ದೂರವಿರಬೇಕು ಎಂಬ ನಿಯಮವಿದೆ. ಆದರೂ ಇಟ್ಟಂಗಿ ಮಾಲಿಕರು ಈ ಕಾನೂನು ಗಾಳಿಗೆ ತೊರಿ ರಾಜರೋಷವಾಗಿ ಯಾವುದೇ ಪರವಾನಗಿ ಇಲ್ಲದೆ ಇಟ್ಟಂಗಿ ಸಿದ್ದಗೊಳಸುತ್ತಿದ್ದಾರೆ.

ಮಕ್ಕಳ ಬಳಕೆ: ಇಟ್ಟಂಗಿ ತಯಾರಿಕೆಯಲ್ಲಿ ಮಹಾರಾಷ್ಟ್ರ, ಆಂಧ್ರಪ್ರದೇಶ, ತಮಿಳುನಾಡು ಮುಂತಾದ ರಾಜ್ಯಗಳಿಂದ ಬಂದಿರುವ ನೂರಾರು ಬಡ ಕುಟುಂಬಗಳು ಇಂಡಿ ತಾಲ್ಲೂಕಿನ ಇಟ್ಟಂಗಿ ಭಟಿಗಳಲ್ಲಿ ವಾಸ್ತವ್ಯ ಹೂಡಿದ್ದಾರೆ. ಅವರ ಜೀವನಕ್ಕೆ ಯಾವದೇ ಸೌಲಭ್ಯಗಳಿಲ್ಲ. ಶುದ್ದ ಕುಡಿಯುವ ನೀರಿಲ್ಲ, ಶೌಚಾಲಯವಿಲ್ಲ, ಇರಲು ಕೇವಲ 8X 8 ಅಡಿ ಅಳತೆಯ ಪತ್ರಾಸ್ ಶೆಡ್ ಮಾತ್ರ ನೀಡಲಾಗಿದೆ.

ಬೇಸಿಗೆಯಲ್ಲಿ ಅವರ ಜೀವನ ಹೇಳತೀರದಷ್ಟು ಕಷ್ಟಮಯವಾಗಿತ್ತು. ಅವರ ಚಿಕ್ಕ ಚಿಕ್ಕ ಮಕ್ಕಳು ದಿನಕ್ಕೆ ಸುಮಾರು 10 ಗಂಟೆಗಳ ಕಾಲ ಇಟ್ಟಂಗಿ ಭಟಿಯಲ್ಲಿ ಕೆಲಸ ಮಾಡುತ್ತಾರೆ. ಈ ಬಗ್ಗೆ ಶಿಕ್ಷಣ ಇಲಾಖೆಯಾಗಲೀ, ಸಮಾಜಕಲ್ಯಾಣ ಇಲಾಖೆಯಾಗಲೀ ಇಲ್ಲವೇ ಶಿಶು ಅಭಿವೃದ್ಧಿ ಇಲಾಖೆಯಾಗಲೀ ಯಾವುದೇ ಕ್ರಮ ಜರುಗಿಸಿಲ್ಲ.

ಕಾಯಿಲೆಗಳಿಗೆ ಆಹ್ವಾನ: ಇಟ್ಟಂಗಿ ತಯಾರಿಕೆಗೆ ಕೆಲವು ರಾಸಾಯನಿಕ ವಸ್ತುಗಳ ಅಗತ್ಯವಿದೆ. ಅವನ್ನು ಬಳಸಿ ಇಟ್ಟಿಗೆ ಸುಡುವುದರಿಂದ ತೀವ್ರತರದ ವಾಯುಮಾಲಿನ್ಯವುಂಟಾಗುತ್ತಿದೆ. ವಿಷಯಕಾರಿ ಅನಿಲ ಬಿಡುಗಡೆಯಿಂದ ಸುತ್ತಲಿನ ಮನೆಗಳಲ್ಲಿ ವಾಸಿಸುವ ಜನರಿಗೆ ರೋಗಗಳು ಕಾಣಿಸಿಕೊಳ್ಳುತ್ತಿವೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಕ್ರಮ ಜರುಗಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.