ಶನಿವಾರ, ಡಿಸೆಂಬರ್ 4, 2021
20 °C

ವಿಜಯಪುರ: ಗುಡುಗು ಸಹಿತ ಧಾರಾಕಾರ ಮಳೆ

ಪ್ರಜಾವಾಣ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಸೋಮವಾರ ತಡ ರಾತ್ರಿ ಹಾಗೂ ಮಂಗಳವಾರ ಬೆಳಿಗ್ಗೆ ಮತ್ತು ಮಧ್ಯಾಹ್ನ ಗುಡುಗು ಸಹಿತ ಧಾರಾಕಾರ ಮಳೆಯಾಗಿದೆ.

ವಿಜಯಪುರ ನಗರದಲ್ಲಿ ಸುಮಾರು ಒಂದು ತಾಸು ಸುರಿದ ಭಾರೀ ಮಳೆಯಿಂದ ರಸ್ತೆ ಮೇಲೆ ನೀರು ಉಕ್ಕಿ ಉರಿಯಿತು.

ಇಲ್ಲಿನ ಡಾ.ಬಿ.ಆರ್‌.ಅಂಬೇಡ್ಕರ್‌ ಸ್ಟೇಡಿಯಂ ಎದುರು ನಿರ್ಮಾಣ ಹಂತದಲ್ಲಿರುವ ಶಾಪೇಟೆ ರಸ್ತೆಯಲ್ಲಿ ಭಾರೀ ಪ್ರಮಾಣದಲ್ಲಿ ನೀರು ನಿಂತ ಪರಿಣಾಮ ಬೈಕುಗಳು ನೀರಿನಲ್ಲಿ ಮುಳುಗಿದವು. ಅಕ್ಕಪಕ್ಕದ ಮನೆಗಳಿಗೂ ನೀರು ನುಗ್ಗಿದ ಪರಿಣಾಮ ಜನಜೀವನ ಅಸ್ತವ್ಯಸ್ತವಾಯಿತು.

ಶಿಖರಖಾನೆ ರಸ್ತೆಯಲ್ಲೂ ನೀರು ನಿಂತ ಪರಿಣಾಮ ವಾಹನ ಸವಾರರು ಪರದಾಡಿದರು. ನಗರ ಬಹುತೇಕ ಗುಂಡಿಬಿದ್ದು ಹದಗೆಟ್ಟಿರುವ ರಸ್ತೆಗಳಲ್ಲಿ ಮಳೆ ನೀರು ನಿಂತಿದ್ದರಿಂದ ಸಾರ್ವಜನಿಕರ ಸಂಚಾರಕ್ಕೆ ಅಡಚಣೆಯಾಯಿತು.

ಮಳೆ ವಿವರ: ಬಸವನ ಬಾಗೇವಾಡಿ 26.4 ಮಿ,ಮೀ. ಮಳೆಯಾಗಿದೆ. ಮನಗೂಳಿ 32.2, ಆಲಮಟ್ಟಿ 23.5, ಹೂವಿನ ಹಿಪ್ಪರಗಿ 3, ಮಟ್ಟಿಹಾಳ 4, ನಾಗಠಾಣ 6.2, ಭೂತನಾಳ 46.8, ಹಿಟ್ನಳ್ಳಿ 3.4, ಕುಮಟಗಿ 12.8, ಅಗರಖೇಡ 1, ಹಲಸಂಗಿ 27, ಚಡಚಣ 3, ಝಳಕಿ 6.1, ಸಿಂದಗಿ 18, ಆಲಮೇಲ 2.8, ರಾಮನಹಳ್ಳಿ 1.2, ದೇವರ ಹಿಪ್ಪರಗಿ 1.8 ಮಿ.ಮೀ.ಮಳೆಯಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.