ಶನಿವಾರ, ಜನವರಿ 16, 2021
28 °C

ಮತಗಟ್ಟೆ ಅಧಿಕಾರಿಗಳಿಗೆ ತರಬೇತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತಾಳಿಕೋಟೆ: ಗ್ರಾಮ ಪಂಚಾಯಿತಿ ಚುನಾವಣಾ ಕಾರ್ಯಕ್ಕೆ ನೇಮಕಗೊಂಡಿರುವ ಸಿಬ್ಬಂದಿ ಮುಕ್ತ, ಪಾರದರ್ಶಕ ಹಾಗೂ ನ್ಯಾಯ ಸಮ್ಮತವಾಗಿ ನಡೆದುಕೊಳ್ಳಬೇಕು. ಅದಕ್ಕಾಗಿ ನಿಯಮಗಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಿ ಎಂದು ಎಂದು ತಹಶೀಲ್ದಾರ ಅನಿಲಕುಮಾರ ಢವಳಗಿ ಹೇಳಿದರು.

ಅವರು ಪಟ್ಟಣದ ಎಸ್‌.ಕೆ. ಮಹಾವಿದ್ಯಾಲಯದಲ್ಲಿ ಮತಗಟ್ಟೆ ಪಿಆರ್‌ಒ ಹಾಗೂ ಎಪಿಆರ್‌ಒ ಗಳಿಗೆ ಆಯೋಜಿಸಲಾಗಿದ್ದ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಬುಧವಾರ ಮಾತನಾಡಿದರು.

ವೇದಿಕೆಯಲ್ಲಿ ಶಿರಸ್ತೇದಾರ ಶ್ರೀಶೈಲ ರಾಘಪ್ಪಗೋಳ , ಸಮುದಾಯ ಆರೋಗ್ಯ ಕೇಂದ್ರದ ಆಡಳಿತಾಧಿಕಾರಿ ಡಾ.ಶ್ರೀಶೈಲ ಹುಕ್ಕೇರಿ, ಮಾಸ್ಟರ್ ಟ್ರೈನರ್ ಗಳಾದ ಶರಣಬಸಪ್ಪ ಗಡೇದ, ಅನಿಲಕುಮಾರ ಇರಾಜ, ಎಸ್. ವಿ.ಜಾಮಗೊಂಡಿ, ವಿ.ಎನ್.ಯಾತಗಿರಿ, ಆನಂದ ತಳವಾರ, ವಿಶ್ವನಾಥ ಗಣಾಚಾರಿ, ಸುರೇಶ ವಾಲಿಕಾರ ಇದ್ದರು.

ಮಾಸ್ಟರ್ ಟ್ರೈನರ್ ಗುಂಡುರಾವ್ ಧನಪಾಲ ಸ್ವಾಗತಿಸಿದರು. ಮಾಸ್ಟರ್ ಟ್ರೈನರ್ ಅಪ್ಪಾಸಾಹೇಬ್ ಮೂಲಿಮನಿ ನಿರೂಪಿಸಿದರು. ತರಬೇತಿಯಲ್ಲಿ 123 ಮತಗಟ್ಟೆ ಅಧ್ಯಕ್ಷಾಧಿಕಾರಿಗಳು ಹಾಗೂ ಮೊದಲ ಮತಗಟ್ಟೆ ಅಧಿಕಾರಿಗಳು. ಕಚೇರಿಯ ಎಫ್‌ಡಿಸಿಗಳಾದ ಆರ್.ಎಸ್. ಬಾಬಾನಗರ, ಹರೀಶ ಕುಲಕರ್ಣಿ,ಎಸ್‌ಡಿಸಿ ಎಂ.ಎಂ.ಅತ್ತಾರ, ಡಿಇಒ ಬಿ.ಎನ್. ಶಿವಯೋಗಿ, ಗ್ರಾಮ ಲೆಕ್ಕಿಗರಾದ .ಕಿಶೋರ್ ಹಜೇರಿ, ಎಸ್.ಎಸ್.ಡಂಬಳ, ಎಸ್.ಎಸ್.ಕಂಚ್ಯಾಣಿ, ಹಾಗೂ ಗಣಕಯಂತ್ರ ನಿರ್ವಾಹಕರಾದ ವಿರೇಶ ಬಿರಾದಾರ, ರಾಜು ಪಾಟೀಲ ಇತರರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು