ಭಾನುವಾರ, ಜನವರಿ 17, 2021
28 °C

ಹೊಸ ವರ್ಷದ ಸಂಭ್ರಮಾಚರಣೆ ಅಪಘಾತದಲ್ಲಿ ಇಬ್ಬರ ದುರ್ಮರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮುದ್ದೇಬಿಹಾಳ: ‘ಹೊಸ ವರ್ಷದ ಶುಭಾಶಯಗಳು’ ಎಂದು ಗುರುವಾರ ತಡರಾತ್ರಿ ಡಾಂಬರು ರಸ್ತೆಯ ಮೇಲೆ ಬರೆಯುತ್ತಿದ್ದವರ ಮೇಲೆ ಕಾರೊಂದು ಹಾಯ್ದು ಸ್ಥಳದಲ್ಲಿಯೇ ಇಬ್ಬರು ಸಾವನ್ನಪ್ಪಿದ ಘಟನೆ ಮಂಗಳೂರು ಜಿಲ್ಲೆಯ ಕಾರ್ಕಳ ತಾಲ್ಲೂಕಿನ ಮಿಯಾರು ಕಾಜರಬೈಲು ಬಳಿ ನಡೆದಿದೆ.

ಘಟನೆಯಲ್ಲಿ ಮೃತರಾದವರು ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲ್ಲೂಕಿನ ಕೇಸಾಪೂರ ಗ್ರಾಮದ ಶರಣಪ್ಪ ಗೌಡರ (27) ಹಾಗೂ ಸಿದ್ದಣ್ಣ ನಾಗರಬೆಟ್ಟ (30) ಆಗಿದ್ದರೆ, ಅಪಘಾತದಲ್ಲಿ ತೀವ್ರ ಗಾಯಗೊಂಡಿರುವ ತೌಸೀಫ ಅಹ್ಮದ ಸಿಕ್ಕಲಗಾರ (20) ಹಾಗೂ ಬಸವರಾಜ ಭೋವೇರ(25) ಅವರ ಸ್ಥಿತಿ ಚಿಂತಾಜನಕ ಎನ್ನಲಾಗಿದೆ

ಇವರೆಲ್ಲ ಜೆಸಿಬಿ ಹಾಗೂ ಟಿಪ್ಪರ್ ನಡೆಸುವ ಕೆಲಸ ಮಾಡುತ್ತಿದ್ದು ಅತ್ಯಂತ ಬಡತನದ ಕುಟುಂಬದವರು. ಪ್ರಕರಣ ಕಾರ್ಕಳ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ಮೃತರ ಶವಗಳನ್ನು ಮರಣೋತ್ತರ ಪರೀಕ್ಷೆಯ ನಂತರ ಸಂಬಂಧಿಕರಿಗೆ ಒಪ್ಪಿಸಲಾಗಿದೆ. ಮೃತರ ಅಂತ್ಯಕ್ರಿಯೆ ಶುಕ್ರವಾರ ತಡರಾತ್ರಿ ನಡೆಯಲಿದೆ ಎಂದು ಗ್ರಾಮದ ಗಣ್ಯರಾದ ಶಾಂತಗೌಡ ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.