ನಿಡಗುಂದಿ: ಪಟ್ಟಣದ ಮೋತಿಶ್ಯಾವಾಲಿ ದರ್ಗಾದ ಉರುಸ್ ಎರಡು ದಿನ ಸಂಭ್ರಮದಿಂದ ಜರುಗಿತು.ಉರುಸ್ ಅಂಗವಾಗಿ ಬುಧವಾರ ರಾತ್ರಿ ಗಂಧ ಜರುಗಿತು. ರಾತ್ರಿಯಿಡೀ ರಿವಾಯತ್ ಪದಗಳು ರಂಜಿಸಿದವು. ಗುರುವಾರ ಬೆಳಿಗ್ಗೆಯಿಂದಲೇ ದರ್ಗಾದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆದವು.

ಭಕ್ತರು ದರ್ಗಾಕ್ಕೆ ಹೂವುಗಳನ್ನು ಏರಿಸುವುದು ಕಂಡು ಬಂದಿತು. ಮಧ್ಯಾಹ್ನ ಎತ್ತಿನ ಗಾಡಿ ಓಟದ ಸ್ಪರ್ಧೆ ಜರುಗಿತು. ಕಾನ್ನಾಳದ ಮಾರುತೇಶ್ವರ ಎತ್ತಿನ ಗಾಡಿ ಓಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ (5 ಗ್ರಾಂ ಚಿನ್ನ), ಲೋಕಾಪುರದ ಭೀಮಣ್ಣ ದ್ವಿತೀಯ ಸ್ಥಾನ (₹ 7501), ಮುತ್ತಗಿಯ ಕರಿಸಿದ್ದೇಶ್ವರ ತೃತೀಯ ಸ್ಥಾನ (₹ 5001) ಪಡೆದರು. ಉಸುಕಿನ ಚೀಲ ಹೊರುವ ಸ್ಪರ್ಧೆಯನ್ನೂ ಆಯೋಜಿಸಲಾಗಿತ್ತು.

ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು. ಮೋತಿಸಾಬ್ ಮುಲ್ಲಾ, ಮುಕ್ತುಮ್ಸಾಬ್ ಮುಲ್ಲಾ, ಶಿವಾನಂದ ಅವಟಿ, ಪರಶುರಾಮ ಕಾರಿ, ಚಂದ್ರಾಮಪ್ಪ ದಳವಾಯಿ, ಬಾಬು ಮುಚ್ಚಂಡಿ, ಮೋತಿಸಾಬ್ ಬಾಣಕಾರ, ಲಾಲ್ಸಾಬ್ ಬಾಣಕಾರ, ಬಾಷಾಸಾಬ್ ಯಂಡಿಗೇರಿ, ದಸ್ತಗೀರಸಾಬ್ ಬಾಣಕಾರ, ಲಾಲಸಾಬ್ ನದಾಫ್, ನಿಂಗಪ್ಪ ಹುಗ್ಗಿ ಇನ್ನಿತರರು ಉರುಸ್ನ ನೇತೃತ್ವ ವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.