ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪರಿಸರ ಸ್ನೇಹಿ ಗಣೇಶ ಮೂರ್ತಿ ಬಳಸಿ: ಸಿದ್ದಲಿಂಗಶ್ರೀ

Published : 19 ಆಗಸ್ಟ್ 2024, 13:22 IST
Last Updated : 19 ಆಗಸ್ಟ್ 2024, 13:22 IST
ಫಾಲೋ ಮಾಡಿ
Comments

ತಾಳಿಕೋಟೆ: ಪಿಒಪಿಯಿಂದ ನಿರ್ಮಿತ ಗಣಪನ ಮೂರ್ತಿ ಪರಿಸರಕ್ಕೆ ಮಾರಕವಾಗಿದೆ. ಆದ್ದರಿಂದ ಗಣಪತಿ ಹಬ್ಬದಲ್ಲಿ ಮಣ್ಣಿನಿಂದ ತಯಾರಿಸಿದ ಗಣಪತಿಗಳನ್ನು ಬಳಸಿ ಎಲ್ಲರೂ ಪರಿಸರ ಪ್ರಜ್ಞೆ ಮೆರೆಯಬೇಕು ಎಂದು ಖಾಸ್ಗತೇಶ್ವರ ಮಠದ ಪೀಠಾಧಿಪತಿ, ಬಾಲಶಿವಯೋಗಿ ಸಿದ್ದಲಿಂಗ ದೇವರು ಹೇಳಿದರು.

ಅವರು ಪಟ್ಟಣದ ಗಣೇಶ ನಗರದಲ್ಲಿ ವಿಜಯಪುರದ ದೃಶ್ಯ ಬಿಂಬಕಲಾ ಪ್ರತಿಷ್ಠಾನ ಸ್ಥಳೀಯ ಘಟಕದ ವತಿಯಿಂದ ಕ್ರಿಯೇಟಿವ್ ಫ್ಲವರ್ ಇವೆಂಟ್ ಡೆಕೊರೇಷನ್ ಕುಟೀರವನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದರು.

ಪಿಒಪಿ ಗಣಪತಿ ಮೂರ್ತಿಗಳನ್ನು ನೀರಿನಲ್ಲಿ ವಿಸರ್ಜಿಸಿದಾಗ ಅದು ನೀರಲ್ಲಿ ಬೇಗ ಕರಗದು. ಜೊತೆಗೆ ಅದಕ್ಕೆ ಲೇಪಿಸಿದ ರಾಸಾಯನಿಕ ಬಣ್ಣಗಳಿಂದ ನೀರಲ್ಲಿರುವ ಜೀವ ಜಂತುಗಳ ಪ್ರಾಣಕ್ಕೆ ತೊಂದರೆಯಾಗುತ್ತದೆ. ಮಣ್ಣಿನ ಮೂರ್ತಿ ಬಳಸುವುದರಿಂದ ಅದು ನೀರಿನಲ್ಲಿ ಸಹಜವಾಗಿ ಕರಗಿ ಹೋಗುತ್ತದೆ. ಯಾವುದೇ ರೀತಿಯ ಸಮಸ್ಯೆಗಳು ಉದ್ಬವಿಸುವುದಿಲ್ಲ. ಸಾರ್ವಜನಿಕರಲ್ಲಿ ಈ ಪ್ರಜ್ಞೆಯನ್ನು ಜಾಗೃತಿಗೊಳಿಸುತ್ತಿರುವ ದೃಶ್ಯಬಿಂಬ ಕಲಾ ಪ್ರತಿಷ್ಠಾನದವರ ಕಾರ್ಯ ಶ್ಲಾಘನೀಯವಾಗಿದೆ ಎಂದರು.

ಸಾಹಿತಿ ಅಶೋಕ ಹಂಚಲಿ ಹಾಗೂ ಹಸಿರು ಸಂಪದ ಬಳಗದ ಸಂಚಾಲಕ ಎಸ್.ಎಸ್.ಗಡೇದ ಮಾತನಾಡಿ, ಪ್ರತಿಷ್ಠಾನದವರು ಪರಿಸರಸ್ನೇಹಿ ಗಣೇಶನ ಮೂರ್ತಿಯನ್ನು ಖರೀದಿಸಿದವರಿಗೆ ಮೂರ್ತಿ ಜೊತೆಗೆ ಉಚಿತ ಸಸಿಗಳನ್ನು ವಿತರಿಸುತ್ತಿರುವುದು ತುಂಬಾ ಸಂತೋಷದ ವಿಷಯವಾಗಿದೆ ಎಂದರು.

ಈ ಸಮಯದಲ್ಲಿ ದೃಶ್ಯಬಿಂಬ ಕಲಾ ಪ್ರತಿಷ್ಠಾನದ ಮುಖ್ಯಸ್ಥ ಸತೀಶ ಕೇಮಶೆಟ್ಟಿ, ತಾಳಿಕೋಟೆ ಸಮುದಾಯ ಆರೋಗ್ಯ ಕೇಂದ್ರದ ಆಡಳಿತಾಧಿಕಾರಿ ಡಾ.ಶ್ರೀಶೈಲ ಹುಕ್ಕೇರಿ, ಡಾ.ಗಂಗಾಂಬಿಕ ಪಾಟೀಲ, ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ಉಪಾಧ್ಯಕ್ಷೆ ಸುವರ್ಣಾ ಬಿರಾದಾರ, ಶಿವನಗೌಡ ಬಿರಾದಾರ, ಶಾಂತು ಉಳ್ಳಾಗಡ್ಡಿ, ಸಂತೋಷ ಡಿಸಲೆ, ಈಶ್ವರ ಹೂಗಾರ, ಗುರುರಾಜ ಮಾನೆ ಹಾಗೂ ಪ್ರತಿಷ್ಠಾನದ ಪದಾಧಿಕಾರಿಗಳು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT