ತಾಳಿಕೋಟೆ: ಬಸವಾದಿ ಶರಣರ ವಚನಗಳನ್ನು ರಕ್ಷಿಸುವಲ್ಲಿ ಫ.ಗು. ಹಳಕಟ್ಟಿ ಕೊಡುಗೆ ಅಪಾರವಾಗಿದೆ ಎಂದು ಕಸಾಪ ಗೌರವ ಕಾರ್ಯದರ್ಶಿ ವಕೀಲ ಗಂಗಾಧರ ಕಸ್ತೂರಿ ಹೇಳಿದರು.

ತಾಲ್ಲೂಕು ಆಡಳಿತದ ವತಿಯಿಂದ ತಹಶೀಲ್ದಾರ್ ಕಾರ್ಯಾಲಯದ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ವಚನ ಪಿತಾಮಹ ಫ.ಗು.ಹಳಕಟ್ಟಿ ಅವರ ಜನ್ಮ ದಿನಾಚರಣೆ ಹಾಗೂ ವಚನ ಸಾಹಿತ್ಯ ಸಂರಕ್ಷಣಾ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದರು.

ವಚನಗಳನ್ನು ಮುದ್ರಿಸಿ ಪ್ರಕಟಿಸಲು ಫ.ಗು.ಹಳಕಟ್ಟಿ ಅವರ ಬಳಿ ಹಣ ಇಲ್ಲದಿದ್ದಾಗ ತಮ್ಮ ಸ್ವಂತ ಮನೆಯನ್ನೇ ಮಾರಿ ಮುದ್ರಣ ಯಂತ್ರವನ್ನು ಖರೀದಿಸಿದರು. ಮುರುಕು ಸೈಕಲ್ ಮೇಲೆ ತಿರುಗಾಡಿ ಬಾಡಿಗೆ ಮನೆಯಲ್ಲಿ ಜೀವನ ಸಾಗಿಸಿ ಈ ಶ್ರೇಷ್ಠ ಕೆಲಸವನ್ನು ಮಾಡಿದರು. ಸುಮಾರು 250 ವಚನಕಾರರ ಸಾಹಿತ್ಯವನ್ನು ಸಂಶೋಧಿಸಿ ಪ್ರಕಟಿಸಿದರು. ಅವರು ಈ ಕಾರ್ಯ ಮಾಡದೇ ಹೋದಲ್ಲಿ ಜನಸಾಮಾನ್ಯರಿಗೆ ಶರಣರ ವಚನಗಳ ನೈಜ ಪರಿಚಯವೇ ಆಗುತ್ತಿರಲಿಲ್ಲ, ಅವರ ಬದುಕಿನ ಆದರ್ಶಗಳನ್ನು ನಾವೆಲ್ಲರೂ ಅನುಸರಿಸುವ ಅಗತ್ಯ ಇದೆ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ತಹಶೀಲ್ದಾರ್ ಡಾ.ವಿನಯಾ ಹೂಗಾರ, ಹಳಕಟ್ಟಿ ಅವರು ಕೇವಲ ವಚನಗಳ ಸಂರಕ್ಷಣೆ ಹಾಗೂ ಬೆಳೆಸುವ ಕಾರ್ಯವನ್ನು ಮಾತ್ರ ಮಾಡಲಿಲ್ಲ. ಅವರೊಬ್ಬ ಶ್ರೇಷ್ಠ ಸಮಾಜಸೇವಕರಾಗಿದ್ದರು. ವಿಜಯಪುರ ನಗರದ ಭೂತನಾಳ ಕೆರೆ ನಿರ್ಮಾಣ, ಸಿದ್ದೇಶ್ವರ ಸಹಕಾರಿ ಸಂಘ, ಬಿಎಲ್ಡಿಇ ಶಿಕ್ಷಣ ಸಂಸ್ಥೆ ಸ್ಥಾಪನೆ ಹಾಗೂ ಮಹಿಳೆಯರಿಗಾಗಿ ಮೂರು ಶಾಲೆಗಳ ನಿರ್ಮಾಣ ಮಾಡಿದ್ದರು ಎಂದು ಸ್ಮರಿಸಿದರು.

ಫ.ಗು.ಹಳಕಟ್ಟಿ ಅವರ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಲಾಯಿತು.

ಡಾ.ಶ್ರೀಶೈಲ ಹುಕ್ಕೇರಿ, ಜಿ.ಜಿ.ಮದರಕಲ್ಲ, ಇಸಿಓ ಸುರೇಶ ಹಿರೇಮಠ, ಸಿಆರ್ ಪಿಗಳಾದ ರಾಜು ವಿಜಾಪುರ ಮತ್ತು ಸಂಗಮೇಶ ಪಾಲ್ಕಿ, ಈರಣ್ಣ ಕಲಬುರ್ಗಿ, ಶಿವಲಿಂಗಪ್ಪ ಪಾಲ್ಕಿ, ಮಹಾಂತೇಶ ಮುರಾಳ, ಜಗದೀಶ ಬಿಳೆಭಾವಿ, ಅಶೋಕ ಚಿನಗುಡಿ, ಪ್ರಭು ಸಣ್ಣಕ್ಕಿ, ಅನಿತಾ ಸಜ್ಜನ, ಮಹಾನಂದ ಉಮರ್ಜಿ, ಸುಮಂಗಲಾ, ಶೈಲಶ್ರೀ ಕಂಚಾಣಿ, ಮಹಾಂತಗೌಡ ದೊರೆಗೋಳ, ಮುನ್ನಾ ಅತ್ತಾರ, ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.