ಸೋಮವಾರ, ಅಕ್ಟೋಬರ್ 19, 2020
24 °C

ಮಾತೃ ದೇವೊ ಭವ

ಶಿವಪ್ರಕಾಶ ಶಿವಾಚಾರ್ಯ ಸ್ವಾಮೀಜಿ, ಪದ್ಮರಾಜ ಒಡೆಯರ ಹಿರೇಮಠ, ಬಸವನಬಾಗೇವಾಡಿ, ವಿಜಯಪುರ ಜಿಲ್ಲೆ Updated:

ಅಕ್ಷರ ಗಾತ್ರ : | |

Prajavani

ಮನೆಯೇ ಮೊದಲ ಪಾಠಶಾಲೆ. ಜನನಿ ತಾನೆ ಮೊದಲ ಗುರು. ಜನನಿಯಿಂದ ಕಲಿತ ನಾವೇ ಧನ್ಯರು ಅನ್ನುವಂತ ಮಾತನ್ನು ನಾವು ಚಿಕ್ಕವರಿದ್ದಾಗ  ಕೇಳಿದ್ದೇವೆ. ಈ ಭೂಮಿಯ ಮೇಲೆ ತಾಯಿಗೆ ಕೊಡುವ ಗೌರವ ಬಹಳ ದೊಡ್ಡದು. ಅದಕ್ಕಾಗಿ ಜಗತ್ತಿನ ಮಹಾಪುರುಷರೆಲ್ಲರೂ ಮಾತೃಭಕ್ತರೇ ಆಗಿದ್ದರೆನ್ನುವುದಕ್ಕೆ ಸಾಕ್ಷಿ ಇದೆ.

ಸನ್ಯಾಸಿಯಾದ ಮೇಲೂ ಶ್ರೀ ಶಂಕರಾಚಾರ್ಯರು ಅವರ ಮಾತೆಯ ಅಂತ್ಯಸಂಸ್ಕಾರಕ್ಕೆ ಬಂದು, ತಾಯಿಯ ಅಂತಿಮ ಆಸೆ ಪೂರ್ಣಗೊಳಿಸಿದರು. ಸಮರ್ಥ ರಾಮದಾಸರು ಸರ್ವಸಂಗ ಪರಿತ್ಯಾಗಿಗಳಾದ ಮೇಲೂ, ಶ್ರೀರಾಮನ ದರ್ಶನ ಪಡೆದ ಮೇಲೂ ವೃದ್ಧಮಾತೆಯ ದರ್ಶನಕ್ಕೆ ಮರಳಿ ಬಂದು ಆಕೆಗೂ ರಾಮ ದರ್ಶನ ಮಾಡಿಸಿದರು. ಆ ಮಹಾಭಕ್ತರು ಮಾತೃಋಣವನ್ನು ತೀರಿಸುವ ಹಾಗೂ ಮಾತೆಯ ಮಹಿಮೆಯನ್ನು ಲೋಕಕ್ಕೆ ತಿಳಿಸಲು ತೋರಿದ್ದು ಆದರ್ಶಗಳಲ್ಲವೇ?

ಛತ್ರಪತಿ ಶಿವಾಜಿ ಮಹಾರಾಜ, ಸ್ವಾಮಿ ವಿವೇಕಾನಂದ, ಮಹಾತ್ಮ ಗಾಂಧಿ ಮೊದಲಾದವರು ತಾಯಿಯ ತೊಡೆಯಲ್ಲೆ ತೊದಲಾಡಿ ಆಕೆಯಿಂದಲೇ ಉತ್ತಮ ಸಂಸ್ಕಾರ ಹೊಂದಿದವರೆಂದು ಇತಿಹಾಸ ಓದಿದವರಿಗೆ ತಿಳಿದೇ ಇದೆ.

ವಿಶ್ವ ವಿಜೇತ ನೆಪೋಲಿಯನ್‌ಗೆ ಯಾರೋ ಕೇಳಿದರಂತೆ. ನಿನ್ನ ದೃಷ್ಟಿಯಲ್ಲಿ ಈ ಜಗತ್ತಿನ ಮಹಾಪುರುಷ ಯಾರು? ಆತ ತಕ್ಷಣವೇ ‘ನನ್ನ ತಾಯಿ’ ಎಂದು ಉತ್ತರಿಸಿದನಂತೆ. ಆದ್ದರಿಂದ ನಾವೆಲ್ಲರೂ ತಾಯಿ ತಂದೆಯನ್ನು ಗೌರವಿಸೋಣ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.