ಶನಿವಾರ, 7 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮುದ್ದೇಬಿಹಾಳ | ವೀರಭದ್ರೇಶ್ವರ ಜಾತ್ರೆ: ಅದ್ದೂರಿ ಮೆರವಣಿಗೆ

Published 20 ಆಗಸ್ಟ್ 2024, 14:19 IST
Last Updated 20 ಆಗಸ್ಟ್ 2024, 14:19 IST
ಅಕ್ಷರ ಗಾತ್ರ

ಮುದ್ದೇಬಿಹಾಳ: ಪಟ್ಟಣದ ಕಿಲ್ಲಾದಲ್ಲಿರುವ ಗುಗ್ಗಳ ಬಸವೇಶ್ವರ ಹಾಗೂ ವೀರಭದ್ರೇಶ್ವರ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ಮಂಗಳವಾರ ನಡೆಯಿತು.

ಬೆಳಿಗ್ಗೆ ಕೃಷ್ಣಾ ನದಿಗೆ ದೇವರ ಮೂರ್ತಿಗಳು, ಪಲ್ಲಕ್ಕಿ, ಕಳಸವು ಗಂಗಸ್ಥಳಕ್ಕೆ ಹೋಗಿ ಬಳಿಕ ಪಿಲೇಕೆಮ್ಮ ದೇವಸ್ಥಾನದಿಂದ ಸಕಲ ವಾದ್ಯಗಳೊಂದಿಗೆ ಪುರವಂತರ ಸೇವೆಯೊಂದಿಗೆ ಅದ್ದೂರಿಯಾಗಿ ಮೆರವಣಿಗೆ ನಡೆಯಿತು. ಮೆರವಣಿಗೆಯಲ್ಲಿ ಬೊಂಬೆಗಳ ಕುಣಿತ ಆಕರ್ಷಕವಾಗಿತ್ತು.

ವೀರಭದ್ರೇಶ್ವರ ಪಲ್ಲಕ್ಕಿ ಮಹಾ ಉತ್ಸವವು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾಗಿ ಕಿಲ್ಲಾದಲ್ಲಿರುವ ದೇವಸ್ಥಾನಕ್ಕೆ ತೆರಳಿತು.

ಪುರವಂತರಾದ ಅಪ್ಪಣ್ಣ ಸಿದ್ದಾಪೂರ, ಆನಂದ ಪತ್ತಾರ, ಕಾಂತು ಹೆಬ್ಬಾಳ, ಗುರುಯ್ಯ ಮುದ್ನೂರಮಠ, ಚಂದ್ರಶೇಖರ ಪ್ಯಾಟಿಗೌಡರ, ಶಶಿಕಾಂತ ಮುತ್ತಗಿ, ಮಾಂತು ಪ್ಯಾಟಿಗೌಡರ ಹಾಗೂ ಸೇವಾಕರ್ತರಾದ ಉದಯ ರಾಯಚೂರ, ಅಶೋಕ ಹುರಕಡ್ಲಿ, ಬಸವರಾಜ ನಾಶಿ, ಶ್ರೀಶೈಲ್ ಅಮರಣ್ಣವರ, ರವಿ ಅಮರಣ್ಣವರ,ಶಾಹೀಲ್ ನಾಗಠಾಣ, ಸಿದ್ಧಯ್ಯ ಮಹಾಂತಯ್ಯನಮಠ, ಮಾನಪ್ಪ ಪತ್ತಾರ ಪಾಲ್ಗೊಂಡಿದ್ದರು.

ಮದ್ಯಾಹ್ನ ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಪ್ರಭುರಾಜ ಕಲ್ಬುರ್ಗಿ ಅವರು ತಂದೆ ತಾಯಿ ಸ್ಮರಣಾರ್ಥ ಪ್ರಸಾದ ಸೇವೆ ಮಾಡಿದ್ದರು. ಕಿಲ್ಲಾದಲ್ಲಿರುವ ಕಾಳಿಕಾ ದೇವಸ್ಥಾನ, ವೀರಭದ್ರೇಶ್ವರ ದೇವರ ಮೂರ್ತಿಗಳಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು.

ಶಾಸಕ ಸಿ.ಎಸ್.ನಾಡಗೌಡ ಅಪ್ಪಾಜಿ ದೇವಸ್ಥಾನಕ್ಕೆ ಭೇಟಿ ನೀಡಿ ವೀರಭದ್ರೇಶ್ವರ ದೇವರ ದರ್ಶನ ಪಡೆದುಕೊಂಡರು.

ವೀರಭದ್ರೇಶ್ವರ ದೇವರ ಮೂರ್ತಿ
ವೀರಭದ್ರೇಶ್ವರ ದೇವರ ಮೂರ್ತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT