ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋದಾಮು ದುರಂತ: ಅಂತಿಮಹಂತದಲ್ಲಿ ರಕ್ಷಣಾ ಕಾರ್ಯಾಚರಣೆ: ಮತ್ತೆರಡು ಮೃತದೇಹ ಹೊರಕ್ಕೆ

Published 5 ಡಿಸೆಂಬರ್ 2023, 5:35 IST
Last Updated 5 ಡಿಸೆಂಬರ್ 2023, 5:35 IST
ಅಕ್ಷರ ಗಾತ್ರ

ವಿಜಯಪುರ: ನಗರದ ಅಲಿಯಾಬಾದ್ ಕೈಗಾರಿಕಾ ಪ್ರದೇಶದ ರಾಜ್ ಗುರು ಫುಡ್ ಗೋದಾಮಿನಲ್ಲಿ ಮೆಕ್ಕೆಜೋಳ ಸಂಸ್ಕರಣ ಘಟಕ ಕುಸಿದು, ಅದರ ಅಡಿಯಲ್ಲಿ ಸಿಲುಕಿ ಸಾವನಪ್ಪಿರುವ ಕಾರ್ಮಿಕರ ಹೊರತೆಗೆಯುವ ಕಾರ್ಯಾಚರಣೆ ಅಂತಿಮ ಹಂತ ತಲುಪಿದೆ.

ಪುಣೆಯಿಂದ ಬೆಳಿಗ್ಗೆ ಘಟನಾ ಸ್ಥಳಕ್ಕೆ ಬಂದಿರುವ 30 ಜನರಿರುವ ಎನ್ ಡಿಆರ್ ಎಫ್ ತಂಡ ಕಾರ್ಯಾಚರಣೆಯನ್ನು ಚುರುಕುಗೊಳಿಸಿದೆ.

ಬೆಳಿಗ್ಗೆ 10 ಗಂಟೆ ಬಳಿಕ ಮತ್ತಿಬ್ಬರು ಕಾರ್ಮಿಕರ ಶವ ಹೊರತೆಗೆದರು.

ಬಿಹಾರದ ‌ಕೃಷ್ಣ ಕುಮಾರ್(28) ಮತ್ತು ಗುಲಾಲ್ ಚಂದ್ ಮುಖಿಯಾ(40)ಎಂದು ಗುರುತಿಸಲಾಗಿದೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ ಸೋನಾವಣೆ ಮಾತನಾಡಿ, ಈಗಾಗಲೇ ಏಳು ಕಾರ್ಮಿಕರ ಶವವನ್ನು ಹೊರತರಲಾಗಿದೆ. ಬಹುತೇಕ ಕಾರ್ಯಾಚರಣೆ ಮುಗಿದಿದೆ ಎಂದರು.

ದುರ್ಘಟನೆಗೆ ಕಾರಣರಾದ ಗೋದಾಮಿನ ಮಾಲೀಕ ಮತ್ತು

ಸೂಪರ್ ವೈಸರ್ ವಿರುದ್ಧ ಎಪಿಎಂಸಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ತನಿಖೆ ಕೈಗೊಳ್ಳಲಾಗಿದೆ. ಆರೋಪಗಳನ್ನು ಶೀಘ್ರ ವಶಕ್ಕೆ ಪಡೆಯಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT