ವಿಜಯಪುರ: ಕಾಂಗ್ರೆಸ್ ಮುಖಂಡ ಮಹಾದೇವ ಸಾಹುಕಾರ ಬೈರಗೊಂಡ ಅವರು ನ.2 ರಂದು ಚಲಿಸುತ್ತಿದ್ದ ಕಾರಿಗೆ ನಗರದ ಹೊರವಲಯದ ಕನ್ನಾಳ ಕ್ರಾಸ್ ಹತ್ತಿರ ಟಿಪ್ಪರ್‌ನಿಂದ ಡಿಕ್ಕಿ ಹೊಡೆಸಿ, ಗುಂಡಿನ ದಾಳಿ ನಡೆಸುವ ಮೂಲಕ ಕೊಲೆಗೆ ಯತ್ನಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾ ತಂಡ ಮತ್ತೆ ಇಬ್ಬರನ್ನು ಬಂಧಿಸಿದೆ.

ವಿಜಯಪುರ ನರಗದ ಬಂಬಳ ಅಗಸಿಯ ಹಣಮಂತ ಮಳೆಪ್ಪನ್ನವರ ಉರುಫ್ ಪೂಜಾರಿ (23) ಹಾಗೂ ಈರಣ್ಣ ರಾಮ ಬಡಿಗೇರ (20) ಬಂಧಿತ ಆರೋಪಿಗಳಾಗಿದ್ದಾರೆ. ಕೃತ್ಯಕ್ಕೆ ಬಳಸಿದ್ದ ಎರಡು ಮೊಬೈಲ್ ವಶಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಮಪ್ ಅಗರವಾಲ್ ತಿಳಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ 19 ಜನರನ್ನು ಪೊಲೀಸರು ಬಂಧಿಸಿದ್ದಾರೆ. ದುಷ್ಕರ್ಮಿಗಳು ನಡೆಸಿದ ಗುಂಡಿನ ದಾಳಿಯಲ್ಲಿ ಮಹಾದೇವ ಬೈರಗೊಂಡ ಅವರ ಕಾರು ಚಾಲಕ ಮತ್ತು ಮ್ಯಾನೇಜರ್ ಸೇರಿದಂತೆ ಇಬ್ಬರು ಸಾವನಪ್ಪಿದ್ದಾರೆ. ಗುಂಡೇಟಿನಿಂದ ತೀವ್ರವಾಗಿ ಗಾಯಗೊಂಡಿರುವ ಮಹಾದೇವ ಸಾಹುಕಾರ ಅವರಿಗೆ ಹೊರರಾಜ್ಯದ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಭದ್ರತೆ ದೃಷ್ಟಿಯಿಂದ ಯಾವ ಸ್ಥಳ ಎಂಬುದನ್ನು ಗೌಪ್ಯವಾಗಿಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.