ತಿಕೋಟಾ: ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ಬಡ ಗ್ರಾಮೀಣ ಮಕ್ಕಳ ಕಲಿಕೆಗೆ ಶಕ್ತಿ ಬರಲಿ ಎಂದು ಮುಂಬೈ ಮೂಲದ ಸೇಠ್ ತಾಪಿದಾಸ್, ತುಳಸಿದಾಸ ಹಾಗೂ ವೃಜದಾಸ ಚಾರಿಟೇಬಲ್ ಟ್ರಸ್ಟ್‌ನ ಸಂಯೋಜಕ ವಿ.ಎಂ. ಸಿಂದಗಿ ಹೇಳಿದರು.
ತಾಲ್ಲೂಕಿನ ಹೊನವಾಡ ಗ್ರಾಮದ ವಿದ್ಯಾವರ್ಧಕ ಸಂಘ, ವಿದ್ಯಾಚೇತನ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ ಹೊನವಾಡ ತೋಟ-2 ಶಾಲೆಗಳಿಗೆ ಶನಿವಾರ ಟ್ರಸ್ಟ್ ವತಿಯಿಂದ ₹ 3 ಲಕ್ಷ ವೆಚ್ಚದ (ಪ್ರತಿ ಶಾಲೆಗೆ ₹ 1 ಲಕ್ಷ) ಉಚಿತ ಅತ್ಯಾಧುನಿಕ ಸ್ಮಾರ್ಟ್ ಬೋರ್ಡ್ ವಿತರಿಸಿ ಅವರು ಮಾತನಾಡಿದರು.
ಹಿರಿಯ ಉಪನ್ಯಾಸಕ ಹಾಗೂ ತಾಲ್ಲೂಕು ಕಸಾಪ ಅಧ್ಯಕ್ಷ ಎಸ್.ಜಿ. ಲಕ್ಕುಂಡಿಮಠ ಮಾತನಾಡಿದರು. ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ನಳನಿಕಾಂತ ಸಾವಂತ, ಬಿ.ಎಂ. ಸಿಂದಗಿ, ಎಲ್.ಆರ್. ಪಾಟೀಲ್, ಮಹಾಂತೇಶ ಸಜ್ಜನ, ಪಿ.ಎಂ. ಕಮತಗಿ, ಎಸ್.ಬಿ. ಪಾಂಡೇಗಾವಿ, ಶಿಕ್ಷಕ ಎಚ್.ಎನ್. ಮೊಹಿತೆ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.