ಸೋಮವಾರ, ಜನವರಿ 24, 2022
28 °C
ವಿಜಯಪುರ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ

ಹಳ್ಳಿಗಳು ಅಭಿವೃದ್ಧಿಯಾದರೆ ದೇಶ ಸಮೃದ್ಧಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಬಲೇಶ್ವರ: ಹಳ್ಳಿಗಳು ಅಭಿವೃದ್ಧಿ ಹೊಂದಿದರೆ ದೇಶವು ಸಮೃದ್ಧಿಯಾಗುತ್ತದೆ ಎಂದು ವಿಜಯಪುರ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ಉಪ್ಪಲಗಿರಿ ಸಂಗಮನಾಥನ ದೇವಾಲಯದ ಆವರಣದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನೂತನ ಕಟ್ಟಡದ ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಬಾಳೆ, ಕಬ್ಬು,ಮಾವು,ನಿಂಬೆ, ಸೇಬು, ದ್ರಾಕ್ಷಿ,ಬಿಳಿಜೋಳ, ಗೋಧಿ, ತೊಗರೆ, ಹೆಸರು, ಸಜ್ಜೆ,ಕುಸಿಬಿ,ಸೂರ್ಯಪಾನ ತಿನ್ನುವ ಎಣ್ಣೆಯ ಕಾಳು, ವಿವಿಧ ಧಾನ್ಯಗಳನ್ನು ಭೂಮಿತಾಯಿ ಕೊಡುತ್ತಾಳೆ, ನಾವು ಸಂತೋಷದಿಂದ ಇರಲು ಭೂಮಿ ತಾಯಿಯೇ ಕಾರಣ ಎಂದರು.

ಹಗಲು-ರಾತ್ರಿಯೆನ್ನದೆ ಬೆಳೆ ಬೆಳೆಯುವ ರೈತರು ಈ ದೇಶದ ಎಲ್ಲ ಜನತೆಗೆ ಉಣಬಡಿಸುತ್ತಾರೆ. ವಜ್ರ ವೈಢೂರ್ಯಗಳನ್ನು ತಿನ್ನಲು ಆಗುವುದಿಲ್ಲ. ಆದರೆ, ಒಂದು ಬೊಗಸೆ ಅನ್ನ ಇರದಿದ್ದರೆ ತೊಂದರೆಯಾಗುತ್ತದೆ. ನೀವು ಬೆಳೆದ ಅನ್ನವನ್ನು ದೇವರೆಂದು ಕಾಣಿ ಎಂದು  ಹೇಳಿದರು.

ಸಹಕಾರಿ ಧ್ವಜಾರೋಹಣ ನೆರವೇರಿಸಿದ ಜಿಲ್ಲಾ ವಿಡಿಸಿಸಿ ಬ್ಯಾಂಕಿನ ಅಧ್ಯಕ್ಷರಾದ ಶಾಸಕ ಶಿವಾನಂದ ಎಸ್. ಪಾಟೀಲ, ಸಹಕಾರಿ ರಂಗದಲ್ಲಿ ರೈತರಿಗೆ ಅನೇಕ ಯೋಜನೆಗಳು ಇದ್ದು, ಇವುಗಳನ್ನು ಸದುಪಯೋಗಪಡಿಸಿಕೊಳ್ಳಬೇಕು. ಬ್ಯಾಂಕುಗಳ ಅಭಿವೃದ್ಧಿಗೆ ಎಲ್ಲ ರೈತರ ಸರಕಾರ ಬಹಳ ಮುಖ್ಯವಾಗಿದೆ ಎಂದು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮಾಜಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ, ಬ್ಯಾಂಕು ಹಾಗೂ ಸಂಘಗಳಿಂದ ಸಮಯಕ್ಕೆ ಸರಿಯಾಗಿ ಬಡ್ಡಿ ಇರಲಾರದೆ ರೈತರಿಗೆ ಹಣ ಕೊಡಬೇಕು. ಅಂದಾಗ ಮಾತ್ರ ನಮ್ಮ ದೇಶದಲ್ಲಿ ಅನ್ನದಾತನ ಸೇವೆ ಸಲ್ಲಿಸದ ಹಾಗೆ ಆಗುತ್ತದೆ ಎಂದರು.

ವಿಜಯಪುರ ವನಶ್ರೀ ಸಂಸ್ಥಾನಮಠದ ಡಾ. ಜಯಬಸವ ಕುಮಾರ ಮಹಾಸ್ವಾಮಿ, ಭೈರವಾಡಗಿ ಗುರುಪಾದ ಸ್ವಾಮಿ, ಮಮದಾಪುರದ ಅಭಿನವ ಮುರುಗೇಂದ್ರ ಮಹಾಸ್ವಾಮಿ, ಉಪ್ಪಲದಿನ್ನಿ ಸಿದ್ದಲಿಂಗಯ್ಯ ಹಿರೇಮಠ ಆಶೀರ್ವಚನ ನೀಡಿದರು.

ಮಾಜಿ ಸಚಿವ ಸಂಗಣ್ಣ ಬೆಳ್ಳುಬ್ಬಿ, ಕರ್ನಾಟಕ ರಾಜ್ಯ ಬೀಜ ಮತ್ತು ಸಾವಯುವ ಪ್ರಮಾಣ ಸಂಸ್ಥೆ  ಅಧ್ಯಕ್ಷ ವಿಜಯಗೌಡ ಎಸ್. ಪಾಟೀಲ, ಮಮದಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ಗಂಗೂಬಾಯಿ ಸಿಂಧೆ, ಉಪಾಧ್ಯಕ್ಷ ಮಲ್ಲಿಕಾರ್ಜುನ ಗಂಗೂರ, ಗುರುಲಿಂಗಪ್ಪ ಅಂಗಡಿ, ಸಂಗು ಸಜ್ಜನ, ರವಿ ಲೋಣಿ, ಸಿದ್ದಪ್ಪ ಬೀಳಗಿ, ಅಶೋಕ ಗೌಡ ಪಾಟೀಲ, ಮಲ್ಲಿಕಾರ್ಜುನ ಬಿರಾದಾರ, ಕೃಷ್ಣ ಕುಲಕರ್ಣಿ, ಶಿವನಗೌಡ ಬಿರಾದರ, ಗೌಡಪ್ಪಗೌಡ ಪಾಟೀಲ, ಅಶೋಕ ಗುಡದಿನ್ನಿ, ಬಿ.ಜಿ. ವೆಂಡೆಗಾರ,  ಸಂಘದ ಅಧ್ಯಕ್ಷ ಚಂದ್ರಶೇಖರ್ ಪೂಜಾರಿ, ಉಪಾಧ್ಯಕ್ಷ ಮಲ್ಲಪ್ಪ ಕುರುಬರ ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.