ಗುರುವಾರ , ಸೆಪ್ಟೆಂಬರ್ 23, 2021
22 °C

ಆಲಮಟ್ಟಿ: ಸಂಗೀತ ಕಾರಂಜಿ ಉದ್ಯಾನಕ್ಕೆ ನುಗ್ಗಿದ ನೀರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಆಲಮಟ್ಟಿ(ವಿಜಯಪುರ): ಆಲಮಟ್ಟಿ ಜಲಾಶಯದಿಂದ ನೀರು ಬಿಟ್ಟ ಕಾರಣ ಜಲಾಶಯದ ತಳಪಾತ್ರದಲ್ಲಿರುವ ಸಂಗೀತ ಕಾರಂಜಿ ಉದ್ಯಾನದೊಳಗೆ ನೀರು ಬಂದಿದೆ.

ಸಂಗೀತ ಕಾರಂಜಿಯ ನೀರು ನದಿಗೆ ಸೇರಿಸಲು ಹಾಕಿದ ಡ್ರೈನೇಜ್ ಪೈಪ್ ಅನ್ನು ನದಿಗೆ ಸೇರಿಸಲಾಗಿದೆ. ನದಿಯ ನೀರು ಅದೇ ಪೈಪ್ ಮೂಲಕ ಸಂಗೀತ ಕಾರಂಜಿಯೊಳಗೆ ಬಂದಿದೆ.

ಇದರಿಂದ ಉದ್ಯಾನದ ಆವರಣ ತುಂಬ ನೀರು ಆವರಿಸಿದೆ. ಲಾಕ್ ಡೌನ್ ಕಾರಣ ಸ್ಥಗಿತಗೊಂಡಿದ್ದ ಸಂಗೀತ ಕಾರಂಜಿ ಸೋಮವಾರ ಆರಂಭಗೊಂಡಿತ್ತು. ಈಗ ತಾತ್ಕಾಲಿಕ ವಾಗಿ ಬಂದ್ ಮಾಡಲಾಗಿದೆ ಎಂದು ಮುಖ್ಯ ಎಂಜಿನಿಯರ್ ಎಚ್. ಸುರೇಶ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು