ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಲ ದಾರಿ ಸಮಸ್ಯೆ ಇತ್ಯರ್ಥ: ತಹಶೀಲ್ದಾರ್‌ಗೆ ಅಧಿಕಾರ

ಕಂದಾಯ ಸಚಿವ ಆರ್‌.ಅಶೋಕ್ ಭರವಸೆ
Last Updated 5 ಏಪ್ರಿಲ್ 2022, 12:29 IST
ಅಕ್ಷರ ಗಾತ್ರ

ವಿಜಯಪುರ: ಜಮೀನುಗಳಿಗೆ ಹೋಗುವ ದಾರಿ ಸಮಸ್ಯೆ ಇತ್ಯರ್ಥ ಮಾಡುವ ಅಧಿಕಾರವನ್ನು ಶೀಘ್ರದಲ್ಲೇ ತಹಶೀಲ್ದಾರ್‌ಗೆ ವಹಿಸಿಕೊಡಲಾಗುವುದು ಎಂದು ಕಂದಾಯ ಸಚಿವ ಆರ್. ಅಶೋಕ್‌ ಭರವಸೆ ನೀಡಿದ್ದಾರೆ ಎಂದು ಅಖಂಡ ಕರ್ನಾಟಕ ರೈತ ಸಂಘದ ರಾಜ್ಯ ಕಾರ್ಯದರ್ಶಿ ಅರವಿಂದ ಕುಲಕರ್ಣಿ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಮಂಗಳವಾರ ಕಂದಾಯ ಸಚಿವರ ಮನೆಗೆ ತೆರಳಿ ರೈತ ಸಂಘದ ಪದಾಧಿಕಾರಿಗಳು ಮನವಿ ಸಲ್ಲಿಸಿದ ಬಳಿಕ ಸಚಿವರು ಭರವಸೆ ನೀಡಿದ್ದಾರೆ ಎಂದರು.

ರೈತ ಮುಖಂಡ ಅರವಿಂದ ಕುಲಕರ್ಣಿ ಮಾತನಾಡಿ, ಜಮೀನುಗಳಿಗೆ ಹೋಗುವ ವಹಿವಾಟು ದಾರಿ ಸಮಸ್ಯೆ ತೀವ್ರವಾಗುತ್ತಿದೆ. ದಾರಿ ಇಲ್ಲದ ಕಾರಣ ಜಮೀನುಗಳ ಬಿತ್ತನೆಗೆ ತೊಂದರೆಯಾಗುತ್ತಿದೆ. ಇದರಿಂದಾಗಿ ಹಳ್ಳಿಗಳಲ್ಲಿ ರೈತರ ಮಧ್ಯೆ ಹೊಡೆದಾಟಗಳು ನಡೆಯುತ್ತಿವೆ. ಜಮೀನು ಹೂಳುಬಿದ್ದು ರೈತ ಕುಟುಂಬಗಳು ಬೀದಿಪಾಲಾಗುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ತಹಶಿಲ್ದಾರರಿಗೆ ಮೊದಲಿದ್ದ ಅಧಿಕಾರವನ್ನು ಮರು ವಹಿಸಿಕೊಡಬೇಕು ಎಂದು ಮನವಿ ಮಾಡಿದರು.

ರಾಜ್ಯದಾದ್ಯಂತ ಜಮೀನುಗಳನ್ನು ಪುನಃ ಮೋಜಣಿ ಮಾಡಿಸಿ ಹದ್ದು ಗುರುತಿಸಬೇಕು. ಇದರಿಂದ ಖರಾಬು ಕ್ಷೇತ್ರ ಗುರುತಿಸಿ ಅದನ್ನೇ ವಹಿವಾಟು ದಾರಿ ಎಂದು ಪರಿಗಣಿಸಬೇಕು. ಖರಾಬು ಕ್ಷೇತ್ರವಿಲ್ಲದ ಜಮೀನುಗಳಲ್ಲಿ ತಹಶೀಲ್ದಾರರು ಇಜಿಲೆಂಟ್ ಕಾಯ್ದೆ ಒಳಗಡೆ ದಾರಿ ಮಾಡಿಕೊಡಬೇಕು ಎಂದು ಕೋರಿದರು.

ಮನವಿ ಸ್ವೀಕರಿಸಿ ಮಾತನಾಡಿದ ಸಚಿವ ಆರ್.ಅಶೋಕ, ದಾರಿ ಸಮಸ್ಯೆ ಸರ್ಕಾರದ ಗಮನಕ್ಕಿದ್ದು, ಇದರಿಂದ ರಾಜ್ಯದಾದ್ಯಂತ ರೈತರಿಗೆ ತೀವ್ರ ಸಮಸ್ಯೆಯಾಗಿದೆ. ಶೀಘ್ರದಲ್ಲಿ ದಾರಿ ಸಮಸ್ಯೆ ಇತ್ಯರ್ಥಪಡಿಸಲು ಜಮೀನು ಮೋಜಣಿ ಮಾಡಿಸಲಾಗುವುದು ಎಂದು ಭರವಸೆ ನೀಡಿದರು.

ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸದಾಶಿವ ಬರಟಗಿ,ಬಸವನ ಬಾಗೇವಾಡಿ ತಾಲ್ಲೂಕು ಉಪಾಧ್ಯಕ್ಷ ಹೊನಕೇರೆಪ್ಪ ತೆಲಗಿ, ಚಂದ್ರಾಪ ಹಿಪ್ಪಲಿ, ಶಕೀಲದಾರ ಕರ್ಜಗಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT