ಭಾನುವಾರ, ಸೆಪ್ಟೆಂಬರ್ 26, 2021
23 °C

ಪೌರಕಾರ್ಮಿಕರಿಗೆ ಸನ್ಮಾನ ಸೆ.13ಕ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ಡಿ.ಆರ್‌.ಮಮದಾಪುರ ಪರಿವಾರದಿಂದ ಮಹಾನಗರ ಪಾಲಿಕೆಯ 500 ಪೌರಕಾರ್ಮಿಕರಿಗೆ ಸನ್ಮಾನ ಕಾರ್ಯಕ್ರಮವನ್ನು ಸೆಪ್ಟೆಂಬರ್‌ 13ರಂದು ಮುಕುಂದ ನಗರದಲ್ಲಿರುವ ಭಾರತೀಯ ಜೀವ ವಿಮಾ ನಿಗಮದ ಮುಂಭಾಗದಲ್ಲಿ ಹಮ್ಮಿಕೊಳ್ಳಲಾಗಿದೆ. 

ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಎಲ್‌ಐಜಿ ಪ್ರತಿನಿಧಿ ಡಿ.ಆರ್‌.ಮಮದಾಪುರ, ಕೋವಿಡ್‌ ಸಮಯದಲ್ಲಿ ಜೀವದ ಹಂಗು ತೊರೆದು ನಗರದ ಸ್ವಚ್ಛತೆ ಮಾಡುವ ಮೂಲಕ ಆರೋಗ್ಯಕರ ವಾತಾವರಣ ನಿರ್ಮಾಣದಲ್ಲಿ ಪೌರಕಾರ್ಮಿಕರ ಪಾತ್ರ ಮುಖ್ಯವಾಗಿರುವುದರಿಂದ ಅವರಿಗೆ ಪರಿವಾರದಿಂದ ಸನ್ಮಾನಿಸಲಾಗುವುದು ಎಂದರು.

ಮಹಿಳಾ ಪೌರಕಾರ್ಮಿಕರಿಗೆ ಸೀರೆ, ಕುಪ್ಪಸ ಹಾಗೂ ಪುರುಷ ಪೌರಕಾರ್ಮಿಕರಿಗೆ ಪ್ಯಾಂಟ್‌, ಶರ್ಟ್‌ ನೀಡಿ ಹಾಗೂ ಗಡಿಯಾರ, ಶಾಲು, ಹಾರ ನೀಡಿ ಸನ್ಮಾನಿಸಲಾಗುವುದು ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಪಿ.ಸುನೀಲ್‌ ಕುಮಾರ್‌, ಮಹಾನಗರ ಪಾಲಿಕೆ ಆಯುಕ್ತ ವಿಜಯ್‌ ಮೆಕ್ಕಳಕಿ, ಎಲ್‌ಐಜಿ ಬೆಳಗಾವಿ ವಿಭಾಗದ ಹಿರಿಯ ವಿಭಾಗಾಧಿಕಾರಿ ಅಜಿತ್‌ ದಾಮೋದರ ವಾರಕರಿ, ಮಾರುಕಟ್ಟೆ ಪ್ರಬಂಧಕ ಎ.ಆರ್‌.ಗಡಕರ, ಎಲ್‌ಐಸಿ ವಿಜಯಪುರ ಮುಖ್ಯ ಪ್ರಬಂಧಕ ಎಲ್‌.ಎಸ್‌.ಸುನೀಲ ಪ್ರಕಾಶ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು. 

ಡಾ.ಪ್ರಭು ಮಮದಾಪುರ, ಬಸವರಾಜ ಆಲೂರು, ಎಲ್‌ಐಸಿ ಅಭಿವೃದ್ಧಿ ಅಧಿಕಾರಿ ಎಸ್‌.ಎಂ.ಪವಾರ್‌ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.