ಹೊರ್ತಿ: ‘ಮಕ್ಕಳಿಗೆ ಶಿಕ್ಷಣದ ಜೊತೆ ಉತ್ತಮ ಸಂಸ್ಕಾರ ನೀಡಬೇಕಾದ ಅಗತ್ಯತೆ ಇದೆ’ ಎಂದು ಲೇಖಕಿ ಭಾವನಾ ಬೆಳಗೆರೆ ಹೇಳಿದರು.

ಹೊರ್ತಿಯ ವಿಜಯಪುರ–ಸೋಲಾಪುರ ಎನ್ಎಚ್ -52 ರ ದೇಗಿನಾಳ ಕ್ರಾಸ್ನಲ್ಲಿರುವ ಸರ್ವೋದಯ ಇಂಗ್ಲಿಷ್ ಮಾಧ್ಯಮ ಹಾಗೂ ಪದವಿ ಪೂರ್ವ ಮಹಾವಿದ್ಯಾಲಯದ 15ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಭೀಮಾತೀರದವರು ಹಂತಕರಲ್ಲ, ಕೆಲವೊಂದು ಜನರ ವೈಯಕ್ತಿಕ ವಿರೋಧಿಯಿಂದ ಕೆಟ್ಟ ಘಟನೆಗಳನ್ನು ಬಿಟ್ಟರೇ, ಉಳಿದೆಲ್ಲವು ಶಾಂತಿಪ್ರಿಯರು, ಒಳ್ಳೆಯ ಹಿತ ಚಿಂತಕರು ಇದ್ದಾರೆ. ನಮ್ಮ ತಂದೆ ರವಿ ಬೆಳಗೆರೆ ಅವರು ಹಂತಕರಲ್ಲಿನ ಒಬ್ಬನ ಕೆಟ್ಟ ಭಾವನೆ ಹೋಗಲಾಡಿಸಿ ಮನಃಪರಿವರ್ತನೆ ಮಾಡಿ ಈಗ ಹೋಟೆಲ್ ನಡೆಸಿ ಒಳ್ಳೆಯ ವ್ಯಕ್ತಿಯನ್ನಾಗಿ ಮಾಡಿದ್ದಾರೆ’ ಎಂದರು.

ವಿಜಯಪುರ ಡಿವೈಎಸ್ಪಿ ಬಸವರಾಜ ಯಲಿಗಾರ ಮಾತನಾಡಿ, ‘ಮಕ್ಕಳಿಗೆ ಹಣ, ಸಂಪತ್ತಿಗಿಂತ ಅವರಲ್ಲಿ ಮೌಲ್ಯಯುತ ನೀತಿ ಶಿಕ್ಷಣ ಹಾಗೂ ಮಾನವೀಯತೆ ಗುಣ, ಗುರು ಹಿರಿಯರ ಗೌರವಿಸುವ ಗುಣಗಳನ್ನು ಬೆಳೆಸಬೇಕು. ಇಂಡಿ ಮತ್ತು ಚಡಚಣ ತಾಲ್ಲೂಕು, ಹಸಲಸಂಗಿ ಗೆಳೆಯರ ಬಳಗ, ಮಧುರಚೆನ್ನರು, ಸಿಂಪಿ ಲಿಂಗಣ್ಣ ತಾಣ, ಸ್ವಾತಂತ್ರ್ಯಯೋಧರ ಕೇಂದ್ರ ಹಾಗೂ ಭಾವೈಕ್ಯ ತಾಣ ಮತ್ತು ಮಾನವೀಯ ಮೌಲ್ಯಗಳ ಮಹತ್ವತೆ, ಮನುಷ್ಯನ ಆತ್ಮ ಉದ್ಧಾರಕಕ್ಕೆ ಶ್ರಮಿಸುತ್ತಿರುವ ಇಂಚಗೇರಿ ಮಠ ಸಂಪ್ರದಾಯದ ಕೊಡುಗೆ ಅಪಾರ. ಭೀಮಾ ತೀರದ ಚಿಂತಕರು ಎಂಬ ಪುಸ್ತಕವನ್ನು ಭಾವನಾ ಅವರ ಸಂಪಾದಕತ್ವದಲ್ಲಿ ಬರೆಸಲಾಗುವುದು’ ಎಂದು ಹೇಳಿದರು.

ಶಾಲಾ ಸಂಸ್ಥಾಪಕ ರೇವಣಸಿದ್ಧ ಪೂಜಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಗೋಳಸಾರದ ಅಭಿನವ ಪುಂಡಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಭಾರ್ಗವಿ ಎಲ್ಎಲ್ ಬಿ ಧಾರವಾಹಿಯ ನಟಿ ರಾಧಾ ಬಾಗವತ ಮಾತನಾಡಿದರು.

ಸಿದ್ದಣ್ಣ ಬಿರಾದಾರ, ರಾಜಶೇಖರ ಧೈವಾಡಿ, ಅನೀಲ ಹೊಸಮನಿ, ಎನ್.ಎ.ನಾವಿ, ಪ್ರಶಾಂತ ಕಾಳೆ ನಿರ್ದೇಶಕ ರಮೇಶ ಬಲ್ಲಿದ, ಮಂಜುನಾಥ ಪರೂತಿ, ಸೋಮನಿಂಗ ಬಿರಾದಾರ ಇದ್ದರು. ಶಾಲಾ ಸಂಸ್ಥಾಪಕ ರೇವಣಸಿದ್ಧ ಪೂಜಾರಿ ಸ್ವಾಗತಿಸಿದರು. ರಮೇಶ ಬಲ್ಲಿದ ನಿರೂಪಿಸಿದರು. ಮಂಜುನಾಥ ಪರೂತಿ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.