ವಿಜಯಪುರ:‘ ಪ್ರಗತಿಪರ ಸಾಹಿತಿಗಳು ಮತ್ತು ಹೋರಾಟಗಾರರು ಆತಂಕ, ಜೀವಭಯದಲ್ಲಿ ದಿನಗಳನ್ನು ಕಳೆಯುವಂತಾಗಿದೆ’ ಎಂದು ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಪೀಠದ ಮುಖ್ಯಸ್ಥ ಪ್ರೊ. ಎಚ್.ಟಿ.ಪೋತೆ ಕಳವಳ ವ್ಯಕ್ತಪಡಿಸಿದರು.

ನಗರದಲ್ಲಿ ಬುಧವಾರ ವಿಜಯಪುರ ಕನ್ನಡ ಪುಸ್ತಕ ಪರಿಷತ್ತು ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ‘ಸಂವಿಧಾನ ಬದಲಿಸುತ್ತೇವೆ, ಭಾರತವನ್ನು ಹಿಂದೂ ರಾಷ್ಟ್ರ ಮಾಡುತ್ತೇವೆ ಎಂದು ಬಲಪಂಥಿಯರು ತಮ್ಮ ಸಿದ್ಧಾಂತವನ್ನು ಗಟ್ಟಿಯಾಗಿ ಹೇಳುತ್ತಾರೆ. ಆದರೆ, ಬುದ್ದ, ಬಸವ ಮತ್ತು ಅಂಬೇಡ್ಕರ್ ಅನುಯಾಯಿಗಳಿಗೆ ನಿರ್ದಿಷ್ಟ ಗುರಿಯೇ ಇಲ್ಲ. ತಮ್ಮ ತತ್ವ, ಸಿದ್ಧಾಂತ ಮತ್ತು ಧ್ಯೇಯಗಳ ಅನುಸಾರ ನಡೆದುಕೊಳ್ಳುತ್ತಿಲ್ಲ’ ಎಂದರು.

‘ಬಸವಣ್ಣನವರನ್ನು ರಾಜ್ಯದ ಸಾಂಸ್ಕೃತಿಕ ನಾಯಕರನ್ನಾಗಿ ಬಿಂಬಿಸಿದರಷ್ಟೇ ಸಾಲದು, ಅವರ ವಿಚಾರಗಳನ್ನು ಅನುಸರಿಸಬೇಕು. ಜನರಿಗೆ ತಿಳಿಪಡಿಸಬೇಕು. ಈ ನಿಟ್ಟಿನಲ್ಲಿ ರಾಜ್ಯದ ಸರ್ಕಾರಿ, ಅನುದಾನಿತ, ಶಾಲಾ, ಕಾಲೇಜುಗಳಲ್ಲಿ ಪ್ರತಿದಿನ ಬಸವಣ್ಣನವರ ವಚನವನ್ನು ವಿದ್ಯಾರ್ಥಿಗಳಿಂದ ಹಾಡಿಸಬೇಕು’ ಎಂದರು.

‘ಬಸವಣ್ಣನವರನ್ನು ಜಾತಿಗೆ ಸೀಮಿತಗೊಳಿಸಬಾರದು. ಬಸವಾದಿ ಶರಣ ವಚನ ಚಿಂತನೆಗಳು ಇಂಗ್ಲಿಷ್ ಮೂಲಕ ಜಗತ್ತಿಗೆ ತಲುಪಿಸಬೇಕು. ಅವುಗಳ ಮಹತ್ವ ಎಲ್ಲರಿಗೂ ತಿಳಿಪಡಿಸಬೇಕು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.