ಬಸವನಬಾಗೇವಾಡಿ: ‘ಯುವ ಬರಹಗಾರರು ಮತ್ತು ಕವಿಗಳಿಗೆ, ಹಿರಿಯ ಸಾಹಿತಿಗಳ ಹಾಗೂ ಸಾಹಿತ್ಯ ವೇದಿಕೆಗಳ ಪ್ರೋತ್ಸಾಹ ಅತ್ಯವಶ್ಯ’ ಎಂದು ಯುವ ಕಾಂಗ್ರೆಸ್ ಯುವಮುಖಂಡ ಸತ್ಯಜಿತ್ ಶಿವಾನಂದ ಪಾಟೀಲ ಹೇಳಿದರು.

ಪಟ್ಟಣದ ಕಾಳಿಕಾಮಾತೆ ಕಲ್ಯಾಣ ಮಂಟಪದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ‘ನಂದಿ ಸಾಹಿತ್ಯ ವೇದಿಕೆಗೆ 25 ವರುಷ, ಸಾಹಿತ್ಯದ ಹರುಷ’ ರಜತ ಮಹೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿ, ‘ಒಬ್ಬ ಬರಹಗಾರನಿಗೆ ಸಮಾಜವನ್ನು ತಿದ್ದುವ ಶಕ್ತಿ ಇದೆ. ನೂರಾರು ಸಾಹಿತ್ಯ ಪರ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿರುವ ನಂದಿ ಸಾಹಿತ್ಯ ವೇದಿಕೆ ಬೆಳ್ಳಿ ಮಹೋತ್ಸವ ಸಂಭ್ರಮದಲ್ಲಿರುವುದು ಸಂತೋಷದ ವಿಷಯ’ ಎಂದರು.

‘ಅಖಂಡ ವಿಜಯಪುರ ಜಿಲ್ಲೆ ಹಾಗೂ ಬಸವನಬಾಗೇವಾಡಿ ತಾಲ್ಲೂಕಿನಲ್ಲಿ ನೂರಾರು ಕವಿಗಳು ಉದಯವಾಗುವಲ್ಲಿ ನಂದಿ ಸಾಹಿತ್ಯ ವೇದಿಕೆ ಪಾತ್ರ ಹಿರಿದಾಗಿದೆ’ ಎಂದರು.

ವಿವೇಕ ಬ್ರಿಗೇಡ್ ಮುಖ್ಯಸ್ಥ ವಿನೂತ್ ಕಲ್ಲೂರ ಮಾತನಾಡಿ, ‘ಸಾಹಿತ್ಯ ಎನ್ನುವುದೇ ಒಂದು ಮಹಾಶಕ್ತಿ. ಗೊತ್ತಿರದ ವಿಷಯಗಳನ್ನು ಸಮಾಜಕ್ಕೆ ತೋರಿಸುವ ಶಕ್ತಿ ಲೇಖನಿಗಿದೆ. ಸರಳ ರೀತಿಯಲ್ಲಿ ಬರೆದು ಸಾರ್ವಜನಿಕರಿಗೆ ಒಳಿತು ಮಾಡುವ ಜವಾಬ್ದಾರಿಯೂ ಕವಿ, ಸಾಹಿತಿಗಳಲ್ಲಿದೆ. ನಂದಿ ಸಾಹಿತ್ಯ ವೇದಿಕೆ ಚಿತ್ರಕಲಾ ಪ್ರದರ್ಶನದಂತ ಕಾರ್ಯವನ್ನೂ ವಿದ್ಯಾರ್ಥಿಗಳಿಂದ ಮಾಡಿಸಿ ಹೊಸತನ ಮೆರೆದಿದೆ’ ಎಂದರು.

ಅಧ್ಯಕ್ಷತೆ ವಹಿಸಿದ್ದ ನಂದಿ ಸಾಹಿತ್ಯ ವೇದಿಕೆ ಅಧ್ಯಕ್ಷ ಮಹಾಂತೇಶ ಸಂಗಮ ಮಾತನಾಡಿ, ‘2000ನೇ ಇಸವಿಯಲ್ಲಿ ಪಟ್ಟಣದ ಬಸವೇಶ್ವರ ದೇವಾಲಯದ ಮೇಲ್ಮಹಡಿಯಲ್ಲಿ ಉದ್ಘಾಟನೆಗೊಂಡ ನಂದಿ ಸಾಹಿತ್ಯ ವೇದಿಕೆ, ಹಲವಾರು ಸಾಹಿತ್ಯಿಕ ಚಟುವಟಿಕೆಗಳನ್ನು ಹಮ್ಮಿಕೊಂಡು ಕನ್ನಡಕ್ಕೆ ಅಳಿಲು ಸೇವೆ ಸಲ್ಲಿಸುತ್ತಿದೆ. ಹೊಸಬರಿಗೆ ಅವಕಾಶ ಸಿಗಬೇಕು. ಕವಿಗಳು ಬೆಳೆಯಬೇಕು ಎಂಬುದು ವೇದಿಕೆ ಉದ್ದೇಶ. ಎರಡು ತಿಂಗಳಲ್ಲಿ ರಜತ ಸ್ಮರಣೆ ಗ್ರಂಥ ಬಿಡುಗಡೆಯಾಗಲಿದೆ’ ಎಂದರು.

ಸಿಂದಗಿಯ ಪತ್ರಕರ್ತ ವಿಜಯಕುಮಾರ ಪತ್ತಾರ, ಸಿದ್ಧೇಶ್ವರ ಶ್ರೀಗಳ ಅನುಕರಣೆ ಹಿತನುಡಿ ಹೇಳಿದರು. ಚುಟುಕು ಸಾಹಿತ್ಯ ಪರಿಷತ್ ತಾಲ್ಲೂಕು ಅಧ್ಯಕ್ಷ ಪ್ರಭಾಕರ ಖೇಡದ ಮಾತನಾಡಿದರು. ಅರ್ಚಕ ಸುಬ್ಬರಾಯ ಬಡಿಗೇರ ಸಾನ್ನಿಧ್ಯ ವಹಿಸಿದ್ದರು. ಸ್ಥಳೀಯ ಬಸವ ಇಂಗ್ಲಿಷ್ ಮಾಧ್ಯಮ ಶಾಲೆ ವಿದ್ಯಾರ್ಥಿಗಳು ಚಿತ್ರಕಲಾ ಪ್ರದರ್ಶನ ನೀಡಿದರು. 27ಕ್ಕೂ ಅಧಿಕ ಕವಿಗಳು ಸ್ವರಚಿತ ಚುಟುಕು ವಾಚಿಸಿದರು. ಕವಿಗಳಿಗೆ ಪ್ರಮಾಣ ಪತ್ರ, ಸನ್ಮಾನಿತ ಅರ್ಚಕರಿಗೆ ಸನ್ಮಾನ ಪತ್ರ ನೀಡಿ ಗೌರವಿಸಲಾಯಿತು.

ಕದಳಿ ವೇದಿಕೆ ಅಧ್ಯಕ್ಷೆ ಸಾವಿತ್ರಿ ಕಲ್ಯಾಣಶೆಟ್ಟಿ, ಶಿಕ್ಷಕಿ ಎಸ್.ಎಂ.ಬಣಗಾರ, ವೇದಿಕೆ ಪ್ರಧಾನ ಕಾರ್ಯದರ್ಶಿ ಬಿ.ವಿ.ಚಕ್ರಮನಿ, ಶಿವು ಮಡಿಕೇಶ್ವರ, ಮುರುಗೇಶ ಸಂಗಮ, ಸಿದ್ದು ಬಾಗೇವಾಡಿ ಇದ್ದರು.