ತಾಳಿಕೋಟೆ: ರಾಜ್ಯ ಹೆದ್ದಾರಿ ಅಭಿವೃದ್ಧಿ ಮತ್ತು ಇತರೆ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ಹೆದ್ದಾರಿ ಸಮಿತಿಯ ಎಂಟು ಜನ ಕಳೆದ ಮೂರು ದಿನಗಳಿಂದ ಆರಂಭಿಸಿದ್ದ ಆಮರಣಾಂತ ಸತ್ಯಾಗ್ರಹವನ್ನು ಕೈ ಬಿಟ್ಟಿದೆ.

ಸೋಮವಾರ ಶಾಸಕ ಸಿ.ಎಸ್. ನಾಡಗೌಡರ ಸಂಧಾನದಿಂದಾಗಿ ಅಂತ್ಯಗೊಳಿಸಿ ಮತ್ತೆ ಡಿ12ರವರೆಗೆ ಸರದಿ ಉಪವಾಸ ಸತ್ಯಾಗ್ರಹ ಆರಂಭಿ ಸಲು ರಾಜ್ಯ ಹೆದ್ದಾರಿ ಹೋರಾಟ ಸಮಿತಿ ಮತ್ತು ಪಟ್ಟಣದ ವಿವಿಧ ಸಂಘಟನೆಗಳ ಮುಖಂಡರು ತೀರ್ಮಾ ನಿಸಿದರು.

ಸೋಮವಾರ ಸತ್ಯಾಗ್ರಹದ ಸ್ಥಳಕ್ಕೆ ಆಗಮಿಸಿ ಮಾತನಾಡಿದ ಶಾಸಕ ಸಿ.ಎಸ್.ನಾಡಗೌಡ(ಅಪ್ಪಾಜಿ), ‘ಸತ್ಯಾಗ್ರಹ ಆರಂಭಿಸುವ ಮುನ್ನ ಪಟ್ಟಣದ ಬೇಡಿಕೆಗಳ ಕುರಿತು ಜನಪ್ರತಿನಿಧಿಯಾದ ನನ್ನೊಂದಿಗೆ ಯಾರೂ ಚರ್ಚಿಸಿಲ್ಲ. ನನ್ನ ಗಮನಕ್ಕೂ ತಂದಿಲ್ಲ. ಹೀಗಾಗಿ ನನಗೆ ಈ ವಿಷಯ ತಿಳಿದಿಲ್ಲ. ಸತ್ಯಾಗ್ರಹದ ಆರಂಭವಾದಾಗ ನಾನು ವಿಧಾನಸಭೆಯ ಅಧಿವೇಶನದ ಕಾರ್ಯದರ್ಶಿಯಾಗಿರುವುದರಿಂದ ಹೆಚ್ಚಿನ ಜವಾಬ್ದಾರಿಗಳು ನನ್ನ ಮೇಲೆ ಇದ್ದುದರಿಂದ ಇಲ್ಲಿಗೆ ಬರಲಾಗಿಲ್ಲ’ ಎಂದರು.

‘ಶಾಸಕನಾಗಿ ನನಗೂ ಜವಾಬ್ದಾರಿ ಗಳಿವೆ. ಕ್ಷೇತ್ರದ ಅಭಿವೃದ್ಧಿ ಕುರಿತು 30ಕ್ಕೂ ಅಧಿಕ ಪ್ರಶ್ನೆಗಳನ್ನು ಅಧಿವೇಶನ ದಲ್ಲಿ ಮಂಡಿಸಿದ್ದೇನೆ. ಮುದ್ದೇಬಿಹಾಳ ತಾಲ್ಲೂಕನ್ನು 371ನೇ ವಿಧಿಗೆ ಸೇರಿಸಲು ಸದಸನದಲ್ಲಿ ಧ್ವನಿ ಎತ್ತಿರುವೆ. ರಾಜ್ಯ ಹೆದ್ದಾರಿ ಕುರಿತು ವಿಶ್ವಬ್ಯಾಂಕ್ ನಿಗದಿ ಗೊಳಿಸಿದ ಮೊತ್ತಕ್ಕಿಂತ ಶೇ.30ಕ್ಕು ಹೆಚ್ಚಿನ ಮೊತ್ತಕ್ಕೆ ಒಬ್ಬನೇ ವ್ಯಕ್ತಿ ಟೆಂಡರ್‌ಗೆ ಅರ್ಜಿ ಹಾಕಿದ್ದರಿಂದ ವಿಶ್ವ ಬ್ಯಾಂಕ್ ಇದಕ್ಕೆ ಒಪ್ಪಲಿಲ್ಲ. ಇದೇ 10 ರಂದು ಮತ್ತೆ ವಿಶ್ವಬ್ಯಾಂಕ್ ತಂಡ ಬೆಂಗ ಳೂರಿಗೆ ಆಗಮಿಸಲಿದ್ದು ಅಲ್ಲಿ ಚರ್ಚೆ ಯಾಗದಿದ್ದರೆ ರಾಜ್ಯ ಹೆದ್ದಾರಿ ಯನ್ನು ಲೋಕೋಪಯೋಗಿ ಇಲಾಖೆ ಮೂಲಕ ತಕ್ಷಣದ ಮಟ್ಟಿಗೆ ದುರಸ್ತಿ ಮಾಡಿಸಲಾ ಗುವುದು. ವಿಜಾಪುರಕ್ಕೆ ಆಗಮಿಸ ಲಿರುವ ಮುಖ್ಯಮಂತ್ರಿ ಗಳ ಗಮನಕ್ಕೆ ತರುತ್ತೇವೆ ಎಂದು ಹೇಳಿದರು.

ಪಟ್ಟಣವು ತಾಲ್ಲೂಕು ಕೇಂದ್ರವಾಗಿ ಘೋಷಿತವಾಗಿರುವುದರಿಂದ ಪಟ್ಟಣದ ವಿವಿಧ ಇಲಾಖೆಗಳು ತನ್ನಿಂದ ತಾನೆ ಆಗುತ್ತವೆ. ಆದರೆ ಕಚೇರಿ ನಿರ್ಮಾಣಕ್ಕೆ ಅಗತ್ಯ ಸ್ಥಳಾವಕಾಶ ಇಲ್ಲದ್ದರಿಂದ ತೊಂದರೆಯಾಗಿದೆ ಎಂದು ವಿವರಿಸಿ ದರು. ಬೇಡಿಕೆಗಳ ಈಡೇರಿಕೆಗೆ ಸಮಯ ಬೇಕು. ಸತ್ಯಾಗ್ರಹಿಗಳು ಆಮರಣಾಂತ ಉಪವಾಸ ಕೈ ಬಿಡಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಹೋರಾಟಗಾರ ರಲ್ಲದೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು. ಸತ್ಯಾಗ್ರಹದ ಸ್ಥಳಕ್ಕೆ ವಿಧಾನ ಪರಿಷತ್ತಿನ ಸದಸ್ಯ ಅರುಣ ಶಹಾಪುರ ಭೇಟಿ ನೀಡಿ ಬೆಂಬಲ ಸೂಚಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.