ವಿಜಾಪುರ: ಪ್ರಾಮಾಣಿಕತೆ, ಆತ್ಮಸಾಕ್ಷಿ ಹಾಗೂ ನಾಗರಿಕ ಪ್ರಜ್ಞೆಯಿಂದ ಕೆಲಸ ಮಾಡುವುದರ ಮೂಲಕ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರ ವನ್ನಾಗಿಸಲು ಪ್ರತಿಯೊಬ್ಬರು ಶ್ರಮಿಸಬೇಕು ಎಂದು ಕುಲಪತಿ ಪ್ರೊ. ಮೀನಾ ಚಂದಾವರಕರ ಕರೆ ನೀಡಿದರು.

ಇಲ್ಲಿಯ ಕರ್ನಾಟಕ ರಾಜ್ಯ ಮಹಿಳಾ ವಿವಿಯಲ್ಲಿ ನಡೆದ 66ನೇ ಸ್ವಾತಂತ್ರ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.ವಿಭಿನ್ನ ಸಂಸ್ಕೃತಿಯ ನಡುವೆಯೂ ಏಕತೆ ಹೊಂದಿರುವ ಭಾರತದಲ್ಲಿ ಸ್ವಾತಂತ್ರ್ಯ ನಂತರ ಎಲ್ಲರಿಗೂ ಮೂಲ ಸೌಲಭ್ಯಗಳಾದ ಅನ್ನ, ಮನೆ, ಬಟ್ಟೆ ಹಾಗೂ ಶಿಕ್ಷಣ ದೊರೆಯುಂತೆ ಮಾಡಲು ಇನ್ನೂ ಶ್ರಮಿಸಬೇಕಾಗಿದೆ.

ದೇಶದಲ್ಲಿ ಭೃಷ್ಟಾಚಾರ ಹೆಚ್ಚಾಗಿದ್ದು, ಅದನ್ನು ತಡೆಗಟ್ಟಲು ಸುಶಿಕ್ಷಿತರು ತಮ್ಮ ತಮ್ಮ ನೆಲೆಯಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಬೇಕು. ಪ್ರತಿಯೊಬ್ಬರು ಜಪಾನಿಯರ ಹಾಗೆ ರಾಷ್ಟ್ರಪ್ರೇಮ ಬೆಳಸಿಕೊಳ್ಳಬೇಕು ಎಂದರು.

ವಿದ್ಯಾರ್ಥಿನಿಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು. ಕುಲಸಚಿವ ಪ್ರೊ.ಜಿ.ಆರ್. ನಾಯಕ, ಮೌಲ್ಯ ಮಾಪನ ಕುಲಸಚಿವೆ ಡಾ.ಡಿ.ಎಚ್. ತೇಜಾವತಿ, ಹಣಕಾಸು ಅಧಿಕಾರಿ ಡಾ.ಆರ್. ಸುನಂದಮ್ಮ, ದೈಹಿಕ ಶಿಕ್ಷಣ ವಿಭಾಗದ ಮುಖ್ಯಸ್ಥ ಡಾ.ಚಂದ್ರಪ್ಪ ಇತರರು ಉಪಸ್ಥಿತರಿದ್ದರು. ಡಾ.ರಾಜ ಕುಮಾರ ಮಾಲಿಪಾಟೀಲ ನಿರೂಪಿಸಿ ದರು. ಡಾ.ಉದಯ ಕುಲಕರ್ಣಿ ಸಾಂಸ್ಕೃತಿಕ ಕಾರ್ಯಕ್ರಮ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.