ಬಾಗಲಕೋಟೆ: ವಿಜಾಪುರದ ಮಹಿಳಾ ವಿಶ್ವವಿದ್ಯಾಲಯದಲ್ಲಿ 2012-13ನೇ ಸಾಲಿನಲ್ಲಿ ಆರು ಹೊಸ ಕೋರ್ಸ್ ಗಳನ್ನು ಆರಂಭಿಸಲಾಗಿದೆ ಎಂದು ವಿಜಾಪುರ ಮಹಿಳಾ ವಿವಿ ಕುಲಪತಿ ಡಾ.ಮೀನಾ ಚಂದಾವರಕರ ತಿಳಿಸಿದರು.
ನಗರದ ಬ.ವಿ.ವಿ.ಸಂಘದ ಮಿನಿ ಸಭಾಭವನದಲ್ಲಿ ಗೆಳೆಯರ ಬಳಗ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು.

ಗಣಿತ, ಭೌತಶಾಸ್ತ್ರ, ಸಂಖ್ಯಾಶಾಸ್ತ್ರ, ಸಶ್ಯಶಾಸ್ತ್ರ, ರಾಜ್ಯಶಾಸ್ತ್ರ ಮತ್ತು ರಸಾಯನಶಾಸ್ತ್ರ ವಿಷಯ ಸೇರಿ ಆರು ಕೋರ್ಸ್ಗಳನ್ನು ಆರಂಭಿಸಲಾಗಿದೆ. ಈಗಾಗಲೇ ಪ್ರವೇಶವು ಸಹ ಪ್ರಗತಿಯಲ್ಲಿದೆ ಎಂದರು.ವಿವಿ ವ್ಯಾಪ್ತಿಯನ್ನು ವಿಸ್ತರಿಸಲು ಬೆಂಗಳೂರು, ಮಂಗಳೂರು,ಶಿವಮೊಗ್ಗ ಮತ್ತು ಹುಬ್ಬಳ್ಳಿಯಂತೆ ನಾಲ್ಕು ವಿಭಾಗ ಗಳನ್ನು ವಿಂಗಡಿಸಲು ಸಿಂಡಿಕೇಟ್ ಸಮಿತಿ ಒಪ್ಪಿಗೆ ಸೂಚಿಸಿದೆ. ಆದರೆ ಸರ್ಕಾರದ ಪರವಾನಗಿಗಾಗಿ ಕಾಯಲಾಗುತ್ತಿದೆ ಎಂದು ತಿಳಿಸಿದರು.

ನಿಯೋಜಿತ ಕಾರ್ಯಕ್ರಮಗಳು:
ವಿಜಾಪುರ ಮಹಿಳಾ ವಿವಿ 9 ವರ್ಷ ಪೂರ್ಣಗೊಳಿಸಿ 10ನೇ ವರ್ಷಕ್ಕೆ ಪದಾರ್ಪಣೆ ಮಾಡುತ್ತಿರುವ ಹಿನ್ನಲೆ ಯಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದರು. ದಶಮಾನೋತ್ಸವ ನಿಮಿತ್ತ ವಿಶ್ವವಿದ್ಯಾಲಯಕ್ಕೆ ಸಂಬಂಧಿಸಿದಂತೆ ಅರ್ಧಕ್ಕೆ ನಿಂತ ಕಚೇರಿ ಕಟ್ಟಡಗಳ ಕಾಮಗಾರಿ ಪೂರ್ಣಗೊಳಿಸಲಾಗುವುದು ಸಮಾಜ ವಿಜ್ಞಾನ ಕಟ್ಟಡ ಸಂಕೀರ್ಣ ನಿರ್ಮಾಣ ಸೇರಿ ಹಲವು ಕೆಲಸಗಳು ಕಾರ್ಯಗತಿಯಲ್ಲಿದೆ.

ಸಾಧಕಿಯರಿಗೆ ಸನ್ಮಾನ : ಮಹಿಳಾ ವಿವಿ ದಶಮಾನೋತ್ಸವ ನಿಮಿತ್ತ ದಶಮಾನೋತ್ಸವ ಭವನ ಕಟ್ಟಡ ನಿರ್ಮಾಣ ಮಾಡಲು ಚಿಂತಿಸಲಾಗಿದೆ. ಅದರೊಂದಿಗೆ ಮಹಿಳಾ ಸಾಧಕಿಯರನ್ನು ಗುರುತಿಸಿ ಸನ್ಮಾನಿಸಿ ಗೌರವಿಸ ಲಾಗುವುದು ಎಂದು ತಿಳಿಸಿದರು.

ಹಸರೀಕರಣ : ಮಹಿಳಾ ವಿವಿ ಆವರಣವನ್ನು ಹಸರೀಕರಣ ಮಾಡಲು ಪ್ರತಿಯೊಬ್ಬ ವಿದ್ಯಾರ್ಥಿನಿಗೆ ಐದು ಸಸಿಗಳನ್ನು ನೀಡಲಾಗುವುದು. ಅವುಗಳ ಪೋಷಣೆ ರಕ್ಷಣೆ ಅವರ ಜವಾಬ್ದಾರಿ ಯಾಗುತ್ತದೆ. ಆ ಮೂಲಕ ಸುಂದರ ಪರಿಸರ ನಿರ್ಮಾಣಕ್ಕೆ ನೆರವಾಗಲಿದೆ ಸಂಶೋಧನೆ ಮತ್ತು ಅಭಿವೃದ್ಧಿ ಗೋಸ್ಕರ ಒಂದು ಕೇಂದ್ರ ಆರಂಭಿಸ ಲಾಗುವುದು.

ಆದರ್ಶ ಮಹಿಳೆಯಲ್ಲಿ ರುವ ವಿಷಯಗಳನ್ನು ಒಳಗೊಂಡಂತೆ ಮಾಡಲು ಕೇಂದ್ರವನ್ನು ಆರಂಭಿಸಲಾ ಗುವುದು ಸೇರಿದಂತೆ ಮತ್ತಿತರ ನಿಯೋಜಿತ ಕಾರ್ಯಕ್ರಮಗಳು ಇವೆ. ಒಟ್ಟಾರೆ ರಾಜ್ಯದಲ್ಲಿ ವಿಜಾಪೂರ ಮಹಿಳಾ ವಿವಿಯನ್ನು ಮಾದರಿಯನ್ನಾಗಿ ಮಾಡಲಾಗುವುದು. ದೂರ ಶಿಕ್ಷಣ ಬಲಪಡಿಸಲು ಪ್ರಯತ್ನ ಮಾಡ ಲಾಗುವುದು ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.