ವಿಜಯಪುರ: ನಗರದಲ್ಲಿ ಬೆರಳೆಣಿಕೆಯ ರಸ್ತೆಗಳನ್ನು ಹೊರತುಪಡಿಸಿದರೆ, ಉಳಿದೆಡೆ ಹಳ್ಳಗಳಳೊಳಗೆ ರಸ್ತೆ ಇದೆಯೋ... ಇಲ್ಲಾ ರಸ್ತೆಯಲ್ಲಿ ಹಳ್ಳ ಗಳಿವೆಯೋ ಎಂಬುದು ವಾಹನ ಸವಾರರ ಪಾಲಿಗೆ ಸವಾಲಾಗಿ ಪರಿಣಮಿಸಿದೆ.

ಚಾರಿತ್ರಿಕ ಹಿನ್ನೆಲೆಯ ನಗರಕ್ಕೆ ರಾಜ್ಯವೂ ಸೇರಿದಂತೆ ದೇಶ–ವಿದೇಶದ ಪ್ರವಾಸಿಗರು ವರ್ಷಕ್ಕೆ ಲಕ್ಷ, ಲಕ್ಷ ಸಂಖ್ಯೆಯಲ್ಲಿ ಭೇಟಿ ನೀಡುತ್ತಾರೆ. ಐತಿಹಾಸಿಕ ಸ್ಮಾರಕಗಳನ್ನು ನೋಡಲು ನಗರದಲ್ಲಿ ರಸ್ತೆ ಮೂಲಕವೇ ಚಲಿಸು ತ್ತಾರೆ. ಈ ಸಂದರ್ಭ ರಸ್ತೆಯ ದುಃಸ್ಥಿತಿ ನೋಡಿ ಹಿಡಿಶಾಪ ಹಾಕಿಕೊಂಡು ಓಡಾಡುವವರ ಸಂಖ್ಯೆಯೇ ಹೆಚ್ಚು.

ಮಳೆಗಾಲ ಮುಗಿದು ಎರಡ್ಮೂರು ತಿಂಗಳು ಕಳೆದರೂ, ನಗರದ ರಸ್ತೆಗಳ ದುರಸ್ತಿಗೆ ಸ್ಥಳೀಯ ಆಡಳಿತ ಮುಂದಾಗದಿರುವುದು ನಾಗರಿಕರಲ್ಲಿ ಅಸಮಾಧಾನ ಮೂಡಿಸಿದೆ. ಇನ್ನೆರೆಡು ತಿಂಗಳು ಕಳೆದರೆ ಮತ್ತೆ ಮುಂಗಾರು ಮಳೆಯ ಅಬ್ಬರ ಆರಂಭಗೊಳ್ಳುತ್ತದೆ.
ಮತ್ತೆ ಮಳೆಗಾಲ ಕಳೆಯುವ ತನಕ ರಸ್ತೆ ಕಾಮಗಾರಿ ನಡೆಯಲ್ಲ. ಈ ರಸ್ತೆಗಳಲ್ಲೇ ಜನ ಸಂಚರಿಸಬೇಕು. ಪ್ರವಾಸಿಗರು ಇಲ್ಲಿನ ನರಕ ಯಾತ ನೆಯ ರಸ್ತೆಗಳ ಬಗ್ಗೆ ಅಸಮಾಧಾನ ದಲ್ಲೇ ಮರಳುವುದು ತಪ್ಪಲ್ಲ.

ನಗರಸಭೆ ಮಹಾನಗರ ಪಾಲಿಕೆ ಯಾಗಿ ಮೇಲ್ದರ್ಜೆಗೇರಿ ವರ್ಷ ಗತಿಸಿ ದರೂ, ಕಿಂಚಿತ್ ಸುಧಾರಣೆ ಕಂಡು ಬಂದಿಲ್ಲ. ಮೇಯರ್ ಬದಲಾವಣೆಯ ಕಸರತ್ತು ಬಿರುಸುಗೊಂಡಿದೆ ಹೊರತು, ಅಭಿವೃದ್ಧಿ ಕಾಮಗಾರಿಗಳಿಗೆ ಶರವೇಗ ಸಿಕ್ಕಿಲ್ಲ ಎಂಬ ಅಸಮಾಧಾನ ನಗರದ ಓಣಿ, ಓಣಿಗಳಲ್ಲೂ ಮಾರ್ದನಿಸುತ್ತಿದೆ.

ಪ್ರವಾಸೋದ್ಯಮ ಅಭಿವೃದ್ಧಿ ಯೋಜನೆಯಡಿ ನಗರದಲ್ಲಿರುವ ಪ್ರಮುಖ ಸ್ಮಾರಕಗಳ ನಡುವೆ ಹೆರಿಟೇಜ್ ಪಾಥ್ ನಿರ್ಮಿಸಲಾಗು ವುದು ಎಂದು ಜಿಲ್ಲಾಡಳಿತ, ಜನಪ್ರತಿ ನಿಧಿಗಳು ನೀಡುವ ಹೇಳಿಕೆಗಳು ಮಾಧ್ಯಮದಲ್ಲಿ ಆಗ್ಗಿಂದಾಗ್ಗೆ ಪ್ರಕಟ ವಾಗುತ್ತವೆ. ಆದರೆ ಇದುವರೆಗೂ ಈ ಪ್ರಮುಖ ಕಾಮಗಾರಿಗೆ ಚಾಲನೆ ಸಿಕ್ಕಿಲ್ಲ.

‘ಐತಿಹಾಸಿಕ ಹಿನ್ನೆಲೆಯ ಜಿಲ್ಲೆಯಲ್ಲಿ ಫೆ 5ರಿಂದ ರಾಷ್ಟ್ರೀಯ ಭಾವೈಕ್ಯತಾ ಶಿಬಿರ, ಮಾಸಾಂತ್ಯದಲ್ಲಿ ನವರಸಪುರ ರಾಷ್ಟ್ರೀಯ ಉತ್ಸವ ನಡೆಯಲಿವೆ. ಹೊರ ರಾಜ್ಯ, ವಿದೇಶಿಗರು ಈ ಉತ್ಸವಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ನಗರದ ರಸ್ತೆಗಳು ಹದಗೆಟ್ಟಿದ್ದು, ಶೀಘ್ರದಲ್ಲೇ ಅಭಿವೃದ್ಧಿಪಡಿಸಬೇಕು. ರಸ್ತೆ ಅಭಿವೃದ್ಧಿಗೊಂಡು ಸುಂದರವಾ ದರೆ ನಗರದ ಸೌಂದರ್ಯವೂ ಹೆಚ್ಚುತ್ತದೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ, ಮಹಾನಗರ ಪಾಲಿಕೆ ತುರ್ತು ಕ್ರಮ ಕೈಗೊಳ್ಳಬೇಕು’ ಎಂದು ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯ ಹಾಗೂ ನೆಹರು ಯುವ ಕೇಂದ್ರ ಸಂಘಟನೆಯ ರಾಜ್ಯ ಸಲಹಾ ಸಮಿತಿ ಸದಸ್ಯ ಜಾವೀದ್ ಜಮಾದಾರ ಆಗ್ರಹಿ ಸುತ್ತಾರೆ. ನಗರದಿಂದ ಚಲಿಸುವ ಬಹುತೇಕ ಬಸ್‌ಗಳು ಮೀನಾಕ್ಷಿ ಚೌಕ್ ಮೂಲಕವೇ ತೆರಳಬೇಕು. ಇಲ್ಲಿ ರಸ್ತೆ ಅಸ್ತವ್ಯಸ್ತದಿಂದ ಕೂಡಿದ್ದು ಚಾಲಕರು ಪರದಾಡಬೇಕು. ಇನ್ನೂ ನಗರ ಶಾಸಕರ ಕಚೇರಿ ಬರುವ ನವಬಾಗ್ ರಸ್ತೆ ಸ್ಥಿತಿ ಹೇಳತೀರದು. ನಳ ಬಂದರೂ ರಸ್ತೆ ಮೇಲೆ ನೀರಿನ ಹೊಂಡಗಳು ನಿರ್ಮಾಣ. ಎಲ್ಲಿ ಚಲಿಸಬೇಕು ಎಂಬುದು ವಾಹನ ಸವಾರರಲ್ಲಿ ಗೊಂದಲ ಸೃಷ್ಟಿಸುತ್ತದೆ.

ಸ್ಟೇಷನ್ ಬ್ಯಾಕ್ ರಸ್ತೆ, ಮನಗೂಳಿ ಅಗಸಿ ರಸ್ತೆ, ಬಾಗಲಕೋಟೆ ರಸ್ತೆ, ಶಹಾಪೇಟೆ ರಸ್ತೆ, ಇಂಡಿ ರಸ್ತೆಗಳು ಯಾವಾಗ ಅಭಿವೃದ್ಧಿಗೊಳ್ಳುತ್ತವೆ ಎಂಬುದು ಈ ಭಾಗದ ನಾಗರಿಕರನ್ನು ಯಕ್ಷ ಪ್ರಶ್ನೆಯಾಗಿ ಕಾಡುತ್ತಿವೆ.

ಜನವರಿ ಕೊನೆ ವಾರದಲ್ಲಿ ನಗರದ ಬಿಎಲ್‌ಡಿಇ ಕ್ಯಾಂಪಸ್‌ನ ಬಂಗಾರಮ್ಮ ಸಜ್ಜನ ಆವರಣದಲ್ಲಿ ನಡೆದ ಸಿದ್ಧೇಶ್ವರ ಸಹಕಾರಿ ಬ್ಯಾಂಕ್‌ನ ಶತಮಾನೋತ್ಸವ ಸಮಾರಂಭಕ್ಕೆ ರಾಜ್ಯಪಾಲರು, ಮುಖ್ಯ ಮಂತ್ರಿ ಬರುತ್ತಾರೆ ಎಂಬ ಕಾರಣಕ್ಕೆ 770 ಲಿಂಗದ ಗುಡಿ ರಸ್ತೆ ಅಭಿವೃದ್ಧಿ ಯಾಗಿದೆ. ಇದೇ ರೀತಿ ನಗರದ ಎಲ್ಲ ರಸ್ತೆಗಳು ಅಭಿವೃದ್ಧಿಗೊಳ್ಳಲು ಮುಖ್ಯ ಮಂತ್ರಿಯೇ ಬರಬೇಕಾ ಎಂಬುದು ಕರ್ನಾಟಕ ಮಾಹಿತಿ ಹಕ್ಕು ಹಾಗೂ ಕಡ್ಡಾಯ ಶಿಕ್ಷಣ ಕಾಯ್ದೆ ಕಾರ್ಯ ಕರ್ತರ ವೇದಿಕೆ, ಪರಿಸರ ರಕ್ಷಣಾ ವೇದಿಕೆ ಕಾರ್ಯಕರ್ತರ ಪ್ರಶ್ನೆ.

ಶಾಶ್ವತ ಕಾಮಗಾರಿ
ಪ್ರವಾಸೋದ್ಯಮ ಅಭಿವೃದ್ಧಿ ದೃಷ್ಟಿ ಯಿಂದ ಪ್ರಥಮ ಹಂತದಲ್ಲಿ ಇಬ್ರಾಹಿಂ ರೋಜಾ ಸ್ಮಾರಕಕ್ಕೆ ತೆರಳುವ ರಸ್ತೆ ಹಾಗೂ ಸ್ಟೇಷನ್ ಹಿಂದಿನ ರಸ್ತೆಯನ್ನು ಶಾಶ್ವತ ಕಾಮಗಾರಿಯಡಿ ಅಭಿವೃದ್ಧಿ ಗೊಳಿಸಲಾಗುವುದು ಎಂದು ಜಿಲ್ಲಾಧಿ ಕಾರಿ ಡಿ.ರಂದೀಪ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.