ವಿಜಾಪುರ: ನಗರ ಸೇರಿದಂತೆ ಜಿಲ್ಲೆಯಾದ್ಯಂತ ಸೋಮವಾರ ರಮ್ಜಾನ್ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು. ನಗರದ ಜುಮ್ಮಾ ಮಸೀದಿಯಲ್ಲಿ ಹೊಸ ಬಟ್ಟೆ ಧರಿಸಿದ್ದ ಸಾವಿರಾರು ಮುಸ್ಲಿಮರು ಪಾಲ್ಗೊಂಡು ಶ್ರದ್ದೆ, ಭಕ್ತಿಯಿಂದ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

ಪ್ರಾರ್ಥನೆಯಲ್ಲಿ ಜಿಲ್ಲಾ ಸಚಿವ ಎಸ್.ಕೆ. ಬೆಳ್ಳುಬ್ಬಿ, ಮಾಜಿ ಸಂಸದ ಬಸನಗೌಡ ಪಾಟೀಲ ಯತ್ನಾಳ ಭಾಗವಹಿಸಿ, ಮುಸ್ಲಿಂ ಮುಖಂಡರಿಗೆ ಶುಭ ಹಾರೈಸಿದರು. ಜೆ.ಡಿ.ಎಸ್. ಮುಖಂಡ ಎಂ.ಸಿ. ಮುಲ್ಲಾ, ದಾನಪ್ಪ ಕಟ್ಟಿಮನಿ ಉಪಸ್ಥಿತರಿದ್ದರು.

ನಗರದ ಉಪಲಿ ಬುರ್ಜ್ ಸಮೀಪದ ಈದ್ಗಾ ಮೈದಾನದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಮುಸ್ಲಿಮರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ, ಪರಸ್ಪರ ಶುಭಾಶಯ ಕೋರಿದರು.

ಪ್ರಾರ್ಥನೆಯಲ್ಲಿ ಮೌಲಾನಾ ಸೈಯ್ಯದ್ ತನ್ವೀರಪೀರಾ ಹಾಸ್ಮಿ, ಮಾಜಿ ಶಾಸಕರಾದ ಎಸ್.ಎ. ಜಿದ್ದಿ, ಮನೋಹರ ಐನಾಪುರ, ಮಾನವ ಹಕ್ಕು ಕಲ್ಯಾಣ ಮಂಡಳಿಯ ರಾಜ್ಯ ಘಟಕದ ಅಧ್ಯಕ್ಷ ಹಾಸಿಂಪೀರ್ ವಾಲೀಕಾರ, ನಗರಸಭೆಯ ಅಧ್ಯಕ್ಷ ಪರಶುರಾಮ ರಜಪೂತ, ಸುರೇಶ ಗೊಣಸಗಿ, ಪಟೇಲ, ಹಮೀದ್ ಮುಶ್ರೀಫ್, ಚಾಂದಸಾಬ ಗಡಗವಾಲ, ಅಲ್ತಾಫ್ ಖಾದ್ರಿ ಇನಾಮದಾರ, ರುಸ್ತುಂ ನಾಡೆವಾಲೆ, ಡಾ. ಮುಕಬಿಲ್ ಭಾಗವಾನ, ಎಮ್.ಎಮ್. ಸುತಾರ, ಎಸ್.ಎಂ. ಖಾಜಿ, ಡಿ.ಎಚ್. ಕಲಾಲ, ಎಚ್.ಎಚ್. ಮುಜಾವರ್ ಪಾಲ್ಗೊಂಡಿದ್ದರು.

`ಪ್ರಾರ್ಥನೆಯಿಂದ ದೇವರೊಲುವೆ~
ಮುದ್ದೇಬಿಹಾಳ:  ರಮ್ಜಾನ್ ಉಪವಾಸ ಆಚರಣೆಗೆ ಸಿಮೀತವಾಗಿಲ್ಲ, ಆತ್ಮ ಸಾಕ್ಷಾತ್ಕಾರ ಮಾಡಿಕೊಳ್ಳುವ ಉದ್ದೇಶ ಇದೆ ಎಂದು ಜಾಮಾ ಮಸೀದಿ ಇಮಾಮ್ ಮೊಹಮ್ಮದ್ ಇಸ್ಮಾಯಿಲ್ ಮುಲ್ಲಾ ಹೇಳಿದರು.

ಅವರು ಸೋಮವಾರ ಪಟ್ಟಣದ ಈದ್ಗಾ ಮೈದಾನದಲ್ಲಿ ಪವಿತ್ರ ರಮ್ಜಾನ್ ಮಾಸಾಚರಣೆ ಸಾಮೂಹಿಕ ಪ್ರಾರ್ಥನೆ ನಂತರ ಉಪನ್ಯಾಸ ನೀಡಿದರು.

ಸಾಮೂಹಿಕ ಪ್ರಾರ್ಥನೆಯಲ್ಲಿ ಅಂಜುಮನ್ ಅಧ್ಯಕ್ಷ ಎಂ.ಎಂ. ಅವಟಿ, ರಸೂಲ್ ದೇಸಾಯಿ, ಎಂ.ಡಿ.ಮೋಮಿನ, ಅಲ್ಲಾಬಕ್ಷ್ ಢವಳಗಿ, ಎಂ.ಎಂ. ಮಮದಾಪುರ, ಸಾಹೇಬಲಾಲ್ ರಿಸಾಲ್ದಾರ, ರಾಜೇಸಾಬ್ ದೇಸಾಯಿ, ಗಫೂರ್ ಮಕಾನದಾರ, ಡಾ.ಎ.ಎಂ. ಮುಲ್ಲಾ, ಎನ್.ಕೆ.ಗುಡ್ನಾಳ, ಎಂ.ಕೆ. ಭಂಡಾರಿ, ಜಮಾ ಅತೆ ಇಸ್ಲಾಮಿ ಸಂಚಾಲಕ ಅಬ್ದುಲ್ ಅಲಿ ಮೋಮಿನ, ಅಬ್ದುಲ್ ರಜಾಕ್ ಘಾಟಿ, ಅಯ್ಯುಬ್ ಮನಿಯಾರ, ಕೆ.ಎಂ. ರಿಸಾಲ್ದಾರ್, ಎಚ್.ಆರ್.ಬಾಗವಾನ, ಎಂ.ಆರ್. ಕಲಾದಗಿ, ಡಿ.ಡಿ. ಬಾಗವಾನ, ಮಹಿಬೂಬ್ ಗೊಳಸಂಗಿ, ಲಾಡ್ಲೇಮಶ್ಯಾಕ್ ನಾಯ್ಕಡಿ, ಡಾ.ಎ.ಕೆ. ದೇಗಿನಾಳ, ಬುರಾನ್ ರುದ್ರವಾಡಿ, ಬುಡ್ಡಾ ಕುಂಟೋಜಿ, ಅಲ್ತಾಫ್ ಬಾಗವಾನ, ನೂರೇನಬಿ ನದಾಫ, ಅಲ್ಲಾಬಕ್ಷ್ ನಿಡಗುಂದಿ ಪಾಲ್ಗೊಂಡಿದ್ದರು.

ವಿಶೇಷ ಪ್ರಾರ್ಥನೆ
ಬಸವನಬಾಗೇವಾಡಿ: ಪಟ್ಟಣದ ಮಸಬಿನಾಳ ರಸ್ತೆಯಲ್ಲಿರುವ ಈದಗಾ ಮೈದಾನದಲ್ಲಿ ರಮ್ಜೋನ್ ಪ್ರಯುಕ್ತ ಸೋಮವಾರ ಸಾಮೂಹಿಕ ಪ್ರಾರ್ಥನೆ ಸಲ್ಲಿಸುವ ಮೂಲಕ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.
ಬೆಳಿಗ್ಗೆ ಮನೆಯವರೆಲ್ಲ ಈದ್ಗಾ ಮೈದಾನಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿದರು. ನಂತರ ಪರಸ್ಪರ ಶುಭಾಶಯ ಹಂಚಿಕೊಂಡರು.

ಜಾಮೀಯಾ ಮಸೀದಿಯ ಇಮಾಮ್ ಅಹ್ಮದಲಿ ಮಿಲಿ ಮಾತನಾಡಿದರು. ಸಾಮೂಹಿಕ ಪ್ರಾರ್ಥನೆಯಲ್ಲಿ ಜಾಮೀಯ ಮಸೀದಿ ಅಧ್ಯಕ್ಷ ಶಬ್ಬೀರ್ ನದಾಫ್, ರಜಾಕ್ ಬಾಗವಾನ, ನಜೀರ್ ಗಣಿ, ಕಮಲಸಾ ಕೊರಬು, ಲಾಲಸಾಬ ಜಮಖಾನಿ, ರಫೀಕ್ ಸಾಠಿ, ದಾವಲಮಲ್ಲಿಕ್ ಬೇಲಿಫ್, ಡಿ.ಎಸ್.ಮಕಾನದಾರ, ಮುಕ್ತುಬಸಾಬ್ ನದಾಫ್, ಇಮಾಮಲಿ ಬಾಗವಾನ್, ರಮ್ಜಾನ್ ಹೆಬ್ಬಾಳ, ಅಲ್ತಾಫ್ ಮುದ್ದೇಬಿಹಾಳ ಭಾಗವಹಿಸಿದ್ದರು.

ಬಡವರಿಗೆ ದಾನ
ಸಿಂದಗಿ: ಪಟ್ಟಣದಲ್ಲಿ ಸೋಮವಾರ ಮುಸ್ಲಿಮರು ಸಂಭ್ರಮದಿಂದ ಈದ್ ಉಲ್ ಫಿತರ್ ರಮ್ಜಾನ್ ಹಬ್ಬ ಆಚರಿಸಿದರು.

ಬೆಳಿಗ್ಗೆ ಮುಸ್ಲಿಮರು ಬಾಂಧವರು ಹೊಸ ಬಟ್ಟೆ ಧರಿಸಿ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ನಂತರ ಪರಸ್ಪರ ಈದ್ ಶುಭಾಶಯ ವಿನಿಮಯ ಮಾಡಿಕೊಂಡರು.

ತಹಶೀಲ್ದಾರ ಡಾ. ಶಂಕ್ರಣ್ಣ ವಣಕ್ಯಾಳ, ಸಿಪಿಐ ಚಿದಂಬರ ವಿ.ಎಂ, ಸಬ್ ಇನ್ಸ್ಪೆಕ್ಟರ್ ರಮೇಶ ರೊಟ್ಟಿ ಹಾಜರಿದ್ದರು. ಮುಸ್ಲಿಮರು ಈದ್ಗಾ ಮೈದಾನದ ಹೊರಗೆ ಬಡ ಜನರಿಗೆ ದಾನ ನೀಡಿದರು. ರಮ್ಜಾನ್ ಪ್ರಯುಕ್ತ ಸುರಕುಂಬಾ ಸೇವಿಸಲು ಹಿಂದೂಗಳಿಗೆ ಔತಣ ಏರ್ಪಡಿಸಿದ್ದರು.

ಇಫ್ತಾರ್ ಭೋಜನ: ರಮ್ಜಾನ್ ಪ್ರಯುಕ್ತ ಕಾಂಗ್ರೆಸ್ ಮುಖಂಡ ಮುನ್ನಾ ಭೈರಾಮಡಗಿ, ಅಂಜುಮನ್-ಎ-ಇಸ್ಲಾಂ ನಿರ್ದೇಶಕ ಮಹಿಬೂಬ ಹಸರಗುಂಡಗಿ ಅವರ ಮನೆಯಲ್ಲಿ ಗಣ್ಯರಿಗೆ ಇಫ್ತಾರ್ ಕೂಟ ಏರ್ಪಡಿಸಲಾಗಿತ್ತು.

ಪುರಸಭೆ ಅಧ್ಯಕ್ಷ ಸುಶಾಂತ ಪೂಜಾರಿ, ಸದಸ್ಯರಾದ ರಾಜಶೇಖರ ಕೂಚಬಾಳ, ಹಣಮಂತ ಸುಣಗಾರ, ಸೋಮಶೇಖರ ನಾಗೂರ, ವಕೀಲ ಹಕೀಂ, ಅರವಿಂದ ಕನ್ನೂರ, ಡಾ. ಅಭಯ ಕಾಗಿ, ಕೆಪಿಸಿಸಿ ಸದಸ್ಯ ವಿಠ್ಠಲ ಕೋಳೂರ ಮತ್ತಿತರರು ಈ ಸಂದರ್ಭದಲ್ಲಿ ಪಾಲ್ಗೊಂಡಿದ್ದರು.

ಸೌಹಾರ್ದ ಸಂಕೇತ
ತಾಳಿಕೋಟೆ: ಪಟ್ಟಣದಲ್ಲಿ ಸೋಮವಾರ ರಮ್ಜಾನ್ ಹಬ್ಬದ ಸಡಗರವಿತ್ತು. ಹೊಸಬಟ್ಟೆ ಧರಿಸಿದ್ದ ಮುಸ್ಲಿಮರು ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಸಿದರು.

ನಂತರ ಸೈಯ್ಯದ್ ಜಾವೀದ್ ಖಾಜಿ ರಮ್ಜಾನ್ ಕುರಿತು ಮಾತನಾಡಿದರು.
ಧರ್ಮಗುರು ಶಕೀಲ್ ಅಹಮ್ಮದ ಖಾಜಿ, ಮೌಲಾನಾ ಮಹಮ್ಮದ್ ಹನೀಫ ಉಮರಿ, ಇಮಾಂ ಹಫೀಜ್, ಮಹಮ್ಮದ್ ಇಬ್ರಾಹಿಂ ಮುಲ್ಲಾ, ಎಚ್.ಕೆ.ಕೆಂಭಾವಿ, ಎ.ಡಿ.ಯಕೀನ, ಅಬ್ದುಲಗನಿ ಮಕಾನದಾರ, ಶಮಶುದ್ದಿನ್ ನಾಲಬಂದ. ರಜಾಕ್ ಮನಗೂಳಿ, ಡಾ.ಎ.ಎ.ನಾಲಬಂದ, ಡಾ.ಎಂ.ಆರ್. ಕೋಳ್ಯಾಳ ಡಾ. ನಜೀರ್ ಕೊಳ್ಯಾಳ, ಡಾ.ಗುಣಕಿ, ಡಾ.ಎ.ಬಿ.ಅಬಾಲೆ, ಡಾ.ಕಿತ್ತೂರ, ಅರೀಫ್ ಹೊನ್ನುಟಗಿ, ಪುರಸಭೆಯ ಅಧ್ಯಕ್ಷ ಎಂ.ಕೆ. ಚೋರಗಸ್ತಿ, ಗೈಬೂಶಾ ಮಕಾನದಾರ, ಮಹಮ್ಮದ್ ರಫಿ ಅವಟಿ, ಶಫೀಕ್ ಮುರಾಳ, ದಾವೂದ್ ತಹಶೀಲ್ದಾರ, ಎಂ.ಎ.ಮೈತ್ರಿ, ಅಬ್ದುಲ್ ಸತ್ತಾರ, ಯಾಸೀನಸಾಬ ಮಮದಾಪುರ, ಎ.ಜೆ.ನಮಾಜಕಟ್ಟಿ, ಕೆ.ಇ. ಸಗರ, ಎ.ಕೆ.ನಾಲತವಾಡ, ಅಬ್ದುಲ್ ಸತ್ತಾರ, ಕೆ.ಎಸ್. ನಡುವಿನಮನಿ ಮತ್ತಿತರರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.